ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆಗೆ ನಡೆಯುತ್ತಿದೆ ಭರ್ಜರಿ ಸಿದ್ಧತೆ, ಕೇವಲ ಒಂದು ರಾತ್ರಿಗೆ ಎಷ್ಟು ಖರ್ಚು ಗೊತ್ತೇ?? ಯಪ್ಪಾ ಇಷ್ಟೊಂದಾ??
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ಈಗಾಗಲೇ ಮದುವೆ ಸೀಸನ್ ಪ್ರಾರಂಭವಾಗಿ ಹಲವಾರು ಜನ ಸೆಲೆಬ್ರಿಟಿಗಳು ಈಗಾಗಲೇ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಮದುವೆಯಾದವರ ಲಿಸ್ಟಿಗೆ ಸೇರುವುದಕ್ಕೆ ಈಗ ಮತ್ತೊಬ್ಬ ಸ್ಟಾರ್ ಜೋಡಿ ರೆಡಿಯಾಗಿದ್ದಾರೆ. ಹೌದು ನಾವು ಮಾತನಾಡಲು ಹೊರಟಿರುವುದು ಬಾಲಿವುಡ್ ಚಿತ್ರರಂಗದ ಸೂಪರ್ ಹಿಟ್ ಜೋಡಿ ಗಳಾಗಿರುವ ವಿಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಕುರಿತಂತೆ.
ಇಬ್ಬರು ಕೂಡ ಈಗ ಸದ್ದಿಲ್ಲದೆ ರಾಜಸ್ಥಾನದ ಸವಾಯ್ ಮಾಧೋಪುರದಲ್ಲಿ ಸಿಕ್ಸ್ ಸೆನ್ಸ್ ಪೋರ್ಟ್ ಬರ್ವಾರದಲ್ಲಿ ಮದುವೆಯಾಗಲಿದ್ದಾರೆ. ಸ್ಟಾರ್ ಸೆಲಬ್ರೆಟಿಗಳ ಕಾರ್ಯಕ್ರಮವನ್ನು ನಿರ್ವಹಿಸುವ ಡೆಕೋ ಇವೆಂಟ್ಸ್ ಸಂಸ್ಥೆ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ರವರ ಮದುವೆಯನ್ನು ಆಯೋಜಿಸುತ್ತಿದೆ. ಇನ್ನು ಈ ಹೋಟೆಲ್ ನಲ್ಲಿ ಇಬ್ಬರೂ ಕೂಡ 5 ದಿನಗಳ ಕಾಲ ಉಳಿಯಲಿದ್ದಾರೆ. ಇನ್ನು ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ಗಾಗಿ ಈ ಹೋಟೇಲ್ ನಲ್ಲಿರುವ ರಾಜಾಮಾನ್ ಸಿಂಗ್ ಸ್ಯೂಟ್ ಅನ್ನು ಬುಕ್ ಮಾಡಲಾಗಿದ್ದುಇದರ ಬೆಲೆ ಕೇಳಿದರೆ ನೀವೂ ಕೂಡ ತಲೆ ತಿರುಗಿ ಬೀಳೋದು ಗ್ಯಾರಂಟಿ.
ಈ ದುಬಾರಿಸ್ಯೂಟ್ ನ ರೂಮಿನ ಬೆಲೆ ಒಂದು ರಾತ್ರಿಗೆ ಬರೋಬ್ಬರಿ 7ಲಕ್ಷ ರೂಪಾಯಿ. ಈ ರೂಮಿನಲ್ಲಿ ಸ್ವಿಮ್ಮಿಂಗ್ ಫೂಲ್ ,ಉದ್ಯಾನವನ ಹಾಗೂ ಅರಾವಳಿ ಪರ್ವತ ಶ್ರೇಣಿಗಳನ್ನು ನೋಡಲು ಉತ್ತಮ ನೋಟವೂ ಕೂಡ ಇದೆ. ಇನ್ನು ಈ ರೂಮ್ ಗಳಿಗೆ ಬಿಗಿ ಭದ್ರತೆಯನ್ನು ಕೂಡ ನೀಡಲಾಗಿದೆ. ಡಿಸೆಂಬರ್ 6ಕ್ಕೆ ಈ ಹೋಟೆಲ್ ಗೆ ಇಬ್ಬರೂ ಕೂಡ ಆಗಮಿಸಲಿದ್ದು ಡಿಸೆಂಬರ್ 9ಕ್ಕೆ ಮದುವೆ ನಡೆಯಲಿದೆ. 7ಕ್ಕೆ ಸಂಗೀತ 8ಕ್ಕೆ ಮೆಹಂದಿ 10ಕ್ಕೆ ರಿಸೆಪ್ಷನ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಇನ್ನು ಈ ಕಾರ್ಯಕ್ರಮಕ್ಕಾಗಿ 100 ಕ್ಕೂ ಅಧಿಕ ಬೌನ್ಸರ್ ಗಳು ಹಾಗೂ ರಾಜಸ್ಥಾನ ಪೋಲೀಸರನ್ನು ಕೂಡ ನೇಮಕ ಮಾಡಲಾಗುತ್ತದೆಯಂತೆ.
Comments are closed.