ಈ ಕೂಡಲೇ ವಿದೇಶಕ್ಕೆ ಹೊರಡುವಂತೆ ಅಶ್ವಿನಿ ರವರಿಗೆ ಹೇಳಿದ ಶಿವಣ್ಣ, ಯಾಕೆ ಗೊತ್ತೇ?? ಗಟ್ಟಿ ನಿರ್ಧಾರ ತೆಗೆದುಕೊಂಡ ಶಿವಣ್ಣ.
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನಗಲಿ ಈಗಾಗಲೇ ಹಲವಾರು ಸಮಯ ಉರುಳಿದರೂ ಕೂಡ ಅವರನ್ನು ಕಳೆದುಕೊಂಡಿದ್ದೇವೆ ಎಂಬ ಕಟುಸತ್ಯವನ್ನು ನಂಬಲು ಸಾಧ್ಯವಾಗುತ್ತಲೇ ಇಲ್ಲ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಯ ದರ್ಶನವನ್ನು ಪಡೆಯಲು ಬರುತ್ತಿರುವ ಸಾವಿರಾರು ಅಭಿಮಾನಿಗಳು ಕೂಡ ಇದೆ ವಿಚಾರವನ್ನು ಹೊತ್ತು ಬರುತ್ತಿದ್ದಾರೆ. ಇನ್ನು ಈಗಾಗಲೇ ಪುನೀತ್ ರಾಜಕುಮಾರ್ ರವರ ಎಲ್ಲಾ ಕಾರ್ಯಕ್ರಮಗಳು ಹಾಗೂ ತಿಥಿ ಕೂಡ ನಡೆದಿದೆ.
ಇನ್ನು ಅಪ್ಪನ ಎಲ್ಲಾ ಕಾರ್ಯಗಳನ್ನು ಕೂಡ ಮುಗಿಸಿ ದೃತಿ ವಿದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಈಗಾಗಲೇ ಹೋಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಇನ್ನು ಸದಾಶಿವನಗರದ ಮನೆಯಲ್ಲಿ ಪತ್ನಿ ಅಶ್ವಿನಿ ಅವರು ತಮ್ಮ ಎರಡನೇ ಮಗಳಾಗಿರುವ ವಂದಿತ ಅವರ ಜೊತೆಗೆ ಇದ್ದಾರೆ. ಆದರೂ ಕೂಡ ಪತಿಯನ್ನು ಕರೆದುಕೊಂಡಿರುವ ದುಃಖ ಅಶ್ವಿನಿ ಅವರನ್ನು ಬಿಟ್ಟು ಹೋಗಿಲ್ಲ. ಕೇವಲ ಅಶ್ವಿನಿ ಅವರಿಗೆ ಮಾತ್ರವಲ್ಲದೆ ಕುಟುಂಬದ ಯಾರಿಗೂ ಕೂಡ ಅಪ್ಪು ಅವರು ಇಲ್ಲ ಎನ್ನುವ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇನ್ನು ಇದಕ್ಕಾಗಿ ಶಿವಣ್ಣ ಅವರು ಅಶ್ವಿನಿ ಅವರಿಗೆ ಒಂದು ವಿಚಾರವನ್ನು ಹೇಳಿದ್ದಾರೆ. ಹೌದು ಗೆಳೆಯರೇ ಅಶ್ವಿನಿ ಅವರಿಗೆ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ದೊಡ್ಡ ಮಗಳಾಗಿರುವ ದೃತಿ ಅವರ ಜೊತೆಗೆ ಕೆಲವು ಸಮಯಗಳನ್ನು ಕಳೆದುಬರಲು ವಿದೇಶಕ್ಕೆ ಹೋಗಲು ಹೇಳಿದ್ದಾರೆ. ಆದರೆ ಅಶ್ವಿನಿ ಅವರಿಗೆ ಮಾತ್ರ ಅಪ್ಪು ಅವರ ನೆನಪು ಇರುವ ಈ ಸ್ಥಳವನ್ನು ಬಿಟ್ಟು ಎಲ್ಲಿಗೆ ಹೋಗಲೂ ಸಮಯಾವಕಾಶ ಬೇಕಾಗಿದೆ. ನಿಮಗೇನು ಅನಿಸುತ್ತದೆ ಸ್ನೇಹಿತರೆ ಅಶ್ವಿನಿ ಅವರು ದೊಡ್ಡ ಮಗಳ ಇರುವ ಸ್ಥಳಕ್ಕೆ ಈ ಸಮಯದಲ್ಲಿ ಹೋಗೋದು ಸರಿನಾ ತಪ್ಪಾ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
Comments are closed.