ನಟಿ ಅಮೂಲ್ಯ ತಾಯಿ ಆಗುತ್ತಿರುವ ಸುದ್ದಿ ನಿಜಾನಾ?? ಕೊನೆಗೂ ಸತ್ಯ ಬಿಚ್ಚಿಟ್ಟ ನಟಿ ಅಮೂಲ್ಯ ಹೇಳಿದ್ದೇನು ನೋಡಿ.
ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ಇಲ್ಲಿಯವರೆಗೂ ಕೂಡ ಮದುವೆ ಸೀಸನ್ ಪ್ರಾರಂಭವಾಗಿ ಅದೆಷ್ಟು ಸೆಲೆಬ್ರಿಟಿಗಳು ಮದುವೆಯಾಗಿದ್ದರು. ಈಗ ಹೊಸ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೌದು ಇಂದು ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರಾದಂತಹ ಅಮೂಲ್ಯ ಅವರ ಕುರಿತಂತೆ. ನಟಿ ಅಮೂಲ್ಯ ರವರು ಬಾಲನಟಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ರವರಂತಹ ಸ್ಟಾರ್ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಇನ್ನು ತಮ್ಮ 13ನೇ ವಯಸ್ಸಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಚೆಲುವಿನ ಚಿತ್ತಾರ ಚಿತ್ರದ ಮೂಲಕ ನಾಯಕ ನಟಿಯಾಗಿ ಕೂಡ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಗಣೇಶ್ ಪ್ರೇಮ್ ದುನಿಯಾ ವಿಜಯ್ ಚಿರಂಜೀವಿ ಸರ್ಜಾ ರಾಕಿಂಗ್ ಸ್ಟಾರ್ ಯಶ್ ಹೀಗೆ ಸ್ಟಾರ್ ನಟರೊಂದಿಗೆ ನಾಯಕಿಯಾಗಿ ಕಾಣಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ತಮ್ಮ ಯಶಸ್ಸಿನ ಗುರುತನ್ನು ಮೂಡಿಸಿದ್ದಾರೆ. ಇನ್ನು ಇದೆ 2017 ರಂದು ರಾಜಕೀಯ ಹಿನ್ನೆಲೆಯುಳ್ಳ ಜಗದೀಶ್ ಅವರನ್ನು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಈ ಸಂದರ್ಭದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅವರ ಪತ್ನಿ ಆಗಿರುವ ಶಿಲ್ಪಾ ಗಣೇಶ್ ರವರು ಅಮೂಲ್ಯ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದರು.
ಇನ್ನು ಈಗ ಸಾಮಾಜಿಕ ಜಾಲತಾಣಗಳಲ್ಲಿ ಅಮೂಲ್ಯ ಅವರ ಕುರಿತಂತೆ ಹಲವಾರು ಫೋಟೋಗಳು ಹರಿದಾಡುತ್ತಿವೆ, ಕೆಲವರು ಈ ಸುದ್ದಿ ಸುಳ್ಳು ಇದು ಸಿನಿಮಾ ಪ್ರಮೋಷನ್ ಗೆ ಮಾಡಿರುವುದು, ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ ಎಂದು ಕೆಲವೊಂದು ಯೌಟ್ಯೂಬ್ ಚಾನೆಲ್ ಗಳು ಸುದ್ದಿಯನ್ನು ಪ್ರಸಾರ ಮಾಡಿವೆ, ಆದರೆ ಇದೀಗ ಇದಕ್ಕೆ ಅಮೂಲ್ಯ ರವರ ಸ್ಪಷ್ಟನೆ ನೀಡಿದ್ದಾರೆ. ಹೌದು ಗೆಳೆಯರೇ ನಟಿ ಅಮೂಲ್ಯ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಗರ್ಭಿಣಿ ಆಗಿರುವುದನ್ನು ಘೋಷಿಸಲು ಫೋಟೋಶೂಟ್ ಮಾಡಿ ಪೋಸ್ಟ್ ಮಾಡಿದ್ದು ಈಗ ನಾವು ಇಬ್ಬರಲ್ಲ ಮೂವರು ಎಂಬುದಾಗಿ ಕ್ಯಾಪ್ಷನ್ ನಲ್ಲಿ ಹಾಕಿ, ಮನೆಗೆ ಮಗುವಿನ ಆಗಮನವನ್ನು ಖಚಿತ ಪಡಿಸಿದ್ದಾರೆ. ಇನ್ನು 2022 ರಹ ಬೇಸಿಗೆ ಸಮಯದಲ್ಲಿ ಮಗುವಿಗೆ ನಟಿ ಅಮೂಲ್ಯ ರವರು ಜನ್ಮ ನೀಡುವ ಸಾಧ್ಯತೆ ಇದೆ.
Comments are closed.