ನನ್ನಮ್ಮ ಸೂಪರ್ ಸ್ಟಾರ್ ಶೋಗೆ ಬಂದಿರುವ ಇವರು ನಿಜಕ್ಕೂ ಯಾರು ಗೊತ್ತಾ? ಪುನೀತ್ ಅವರಿಗೆ ಇವರು ಏನಾಗಬೇಕು ಗೊತ್ತಾ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆ ವಾಹಿನಿಯಲ್ಲಿ ಹಲವಾರು ಕಾರ್ಯಕ್ರಮಗಳು ಒಂದೊಂದಾಗಿ ಹೊಸದಾಗಿ ಮೂಡಿಬರುತ್ತಿವೆ. ಅವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಯಶಸ್ವಿಯಾಗಿ ಜನಪ್ರಿಯವಾಗಿರುವ ಟಿವಿ ಕಾರ್ಯಕ್ರಮವೆಂದರೆ ನಮ್ಮಮ್ಮ ಸೂಪರ್ಸ್ಟಾರ್ ಶೋ. ಇಂದು ನಾವು ಇದೇ ಕಾರ್ಯಕ್ರಮದ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ತಾಯಿ ಹಾಗೂ ಮಕ್ಕಳ ನಡುವೆ ಏರ್ಪಡುವ ಈ ಶೋ ಈಗಾಗಲೇ ಪ್ರಾರಂಭವಾಗಿ ಕೆಲವೇದಿನಗಳ ಆದರೂ ಕೂಡ ಅತ್ಯಂತ ಹೆಚ್ಚು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಇನ್ನು ಈಗಾಗಲೇ ಈ ಕಾರ್ಯಕ್ರಮದಲ್ಲಿ ಮಾಸ್ಟರ್ ಆನಂದ್ ರವರ ಮಗಳು ವಂಶಿಕಾ ರವರು ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯೂಟ್ಯೂಬ್ನಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನು ಪಡೆದು ಸೂಪರ್ ಹಿಟ್ ಆಗಿವೆ. ಇತ್ತೀಚಿಗೆ ಕಾರ್ಯಕ್ರಮದಲ್ಲಿ ಸಿಕ್ಸ್ ಪ್ಯಾಕ್ ಇರುವ ಬಾಡಿಬಿಲ್ಡಿಂಗ್ ಮಾಡುವ ತಾಯಿಯ ಒಬ್ಬರು ತಮ್ಮ ಮಗಳೊಂದಿಗೆ ಆಗಮಿಸಿದ್ದಾರೆ. ಇಂದಿನ ವಿಚಾರದಲ್ಲಿ ಇವರಿಗೂ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೂ ಇರುವ ಸಂಬಂಧವೇನು ಎಂಬುದರ ಕುರಿತಂತೆ ಹೇಳಲು ಹೊರಟಿದ್ದೇವೆ. ಇದನ್ನು ಕೇಳಿದರೆ ಕೆಲವೊಮ್ಮೆ ಬೇಸರವಾದರೂ ಮತ್ತೊಮ್ಮೆ ಖುಷಿಯಾಗುತ್ತದೆ. ಇವರ ಹೆಸರು ಮಮತಾ. ಇವರು 23ವರ್ಷದ ಬರಬೇಕಾದರೆ ಮಗುವಿಗೆ ಜನ್ಮ ನೀಡುತ್ತಾರೆ. ಈ ಸಂದರ್ಭದಲ್ಲಿ ಬಾಣಂತನದಲ್ಲಿ ಇವರ ದಪ್ಪಗಾಗುತ್ತಾರೆ.
ತೂಕವನ್ನು ಕಮ್ಮಿ ಮಾಡಬೇಕು ಎಂಬುದಾಗಿ ಜಿಮ್ ಸೇರಿಕೊಳ್ಳುತ್ತಾರೆ ನಂತರ ಇಲ್ಲಿಂದಲೇ ದೇಹದಾಡ್ಯ ಸ್ಪರ್ಧೆಗಳಲ್ಲಿ ಕೂಡ ಭಾಗವಹಿಸುತ್ತಾರೆ. ಕರ್ನಾಟಕದಿಂದ ದೇಹದಾರ್ಢ್ಯ ಸ್ಪರ್ಧೆಗೆ ಭಾಗವಹಿಸಿದ ಮಹಿಳಾ ಬಾಡಿಬಿಲ್ಡರ್ ಇವರೊಬ್ಬರೇ ಎಂದು ಹೇಳಬಹುದಾಗಿದೆ. ಇನ್ನು ಇವರ ಸಾಧನೆಯನ್ನು ಗುರುತಿಸಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಹೇಗ್ರಿ ಇವೆಲ್ಲಾ ಸಾಧನೆ ಮಾಡಿದ್ದೀರಾ ನೀವು ನಮಗೆ ಸ್ಫೂರ್ತಿ ಎಂಬುದಾಗಿ ಪ್ರಶಂಸೆಯನ್ನು ಮಾಡಿದ್ದರು. ಇಷ್ಟು ಮಾತ್ರವಲ್ಲದೆ ಸಮಾಜದ ಕುರಿತಂತೆ ಏನನ್ನು ಕೂಡ ಚಿಂತಿಸಬೇಡಿ ಅವರು ನಿಮ್ಮ ಬಗ್ಗೆ ಏನಾದರೂ ಮಾತನಾಡುತ್ತಿದ್ದಾರೆ ಎಂದರೆ ನೀವು ಏನೋ ಜೀವನದಲ್ಲಿ ಸಾಧಿಸಿದ್ದೀರೆ ಎಂಬರ್ಥ ಎಂಬುದಾಗಿ ಹೇಳಿದ್ದರಂತೆ. ಸ್ಟಾರ್ ಎಂಬ ಚಿಕ್ಕ ಅಹಂ ಕೂಡ ಇಲ್ಲದೆ ಮಮತಾ ರವರನ್ನು ಪ್ರಶಂಸಿದರು ನಮ್ಮ ಅಪ್ಪು.
Comments are closed.