ನನಗಿಷ್ಟದ ಆ ನಟನೊಂದಿಗೆ ನಾನು ಕೊನೆಗೂ ನಡೆಸಲಾಗಿಲ್ಲ ಎಂದು ಮಾಲಾಶ್ರೀ ಹೇಳಿದ್ದು ಯಾರ ಬಗ್ಗೆ ಗೊತ್ತಾ?? ಹೀಗೆ ಹೇಳಲು ಕಾರಣವೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ಹೆಚ್ಚಾಗಿ ನಾಯಕನೇ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುವಂಥ ಚಿತ್ರಗಳನ್ನೇ ಕಾಣಬಹುದು. ಸಾಕಷ್ಟು ಚಿತ್ರಗಳಲ್ಲಿ ನಾಯಕ ನಟಿಯರಿದ್ದರೂ ಕೂಡ ಅದು ನಿಮಿತ್ತ ಮಾತ್ರ. ನಾಯಕಿ ಪ್ರಧಾನ ಚಿತ್ರಗಳು ತುಂಬಾನೇ ಕಡಿಮೆ ಎಂದು ಹೇಳಬಹುದು. ಆದರೆ ಅದೊಂದು ಜಮಾನವಿತ್ತು. ಅಲ್ಲಿ ನಾಯಕಿಯೇ ಹೋಲ್ ಎಂಡ್ ಸೋಲ್ ಆಗಿರುತ್ತಿದ್ದಳು!
ಹೌದು ನಟಿ ಮಾಲಾಶ್ರೀ, ಒಂದು ಕಾಲದ ಬಹು ಬೇಡಿಕೆಯ ನಟಿ. ಮಾಲಾಶ್ರೀ ಒಂದು ಚಿತ್ರದಲ್ಲಿ ನಟಿಸುತ್ತಾರೆ ಎಂದಾದರೆ ಅಲ್ಲಿ ಅವರೇ ಮುಖ್ಯ ಪಾತ್ರಧಾರಿ. ಉಳಿದ ಎಲ್ಲಾ ಪಾತ್ರಗಳೂ ಅಷ್ಟು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರಲಿಲ್ಲ. ಅದರಲ್ಲೂ ಆಗಿನ ಕಾಲಕ್ಕೆ ನಾಯಕ ನಟರಂತೆ ಫೈಟಿಂಗ್ ಗಳ ದೃಶ್ಯಗಳಲ್ಲಿಯೂ ಕೂಡ ಮಾಲಾಶ್ರೀ ಎಲ್ಲರನ್ನೂ ರಂಜಿಸಿದ್ದಾರೆ. ಹಲವಾರು ಅತ್ಯುತ್ತಮ ನಟರೊಂದಿಗೆ ತೆರೆ ಹಂಚಿಕೊಂಡ ನಟಿ ಮಾಲಾಶ್ರೀ ಕನ್ನಡ ಚಿತ್ರರಂಗದ ಈ ಮೂವರು ದಿಗ್ಗಜರುಗಳೊಂದಿಗೆ ಮಾತ್ರ ನಟಿಸಲು ಸಾಧ್ಯವಾಗಲೇ ಇಲ್ಲವಂತೆ!
ಹೌದು ಕನ್ನಡದ ಗಣಿ ನಟ ರಾಜಕುಮಾರ್ ಅವರ ಜೊತೆ ಮಾಲಾಶ್ರೀ ನಟಿಸುವ ಆಸೆ ಹೊಂದಿದ್ದರೂ ಅದು ಸಾಧ್ಯವಾಗಲೇ ಇಲ್ಲ. ಅಣ್ಣಾವ್ರ ದೊಡ್ಡ ಅಭಿಮಾನಿಯೂ ಆಗಿರುವ ಮಾಲಾಶ್ರೀ ಚಿತ್ರವೊಂದರಲ್ಲಿ ಅಣ್ಣಾವ್ರ ಜೊತೆ ನಟಿಸಲು ಅವಕಾಶ ಸಿಕ್ಕಿದ್ದರೂ ಕೊನೆ ಕ್ಷಣದಲ್ಲಿ ಅದು ಸಾಧ್ಯವಾಗಲೇ ಇಲ್ಲ. ಇನ್ನು ಇನ್ನೊಬ್ಬ ನಟ ಡಾ. ವಿಷ್ಣುವರ್ಧನ್. ವಿಷ್ಣು ಅವರೊಂದಿಗೆ ಅಭಿನಯಿಸುವ ಬಹುದೊಡ್ಡ ಆಸೆ ಹೊತ್ತಿದ್ದರು, ನಟಿ ಮಾಲಾಶ್ರೀ. ಆದರೆ ಆ ಸಮಯದಲ್ಲಿ ಇಬ್ಬರೂ ಬ್ಯುಸಿ ಇದ್ದಿದ್ದರಿಂದ ಒಂದೇ ಚಿತ್ರದಲ್ಲಿ ಇಬ್ಬರೂ ಕಾಣಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಹಾಗೆಯೇ ಒಂದು ಕಾಲದ ಕನ್ನಡ ಚಿತ್ರರಂಗವನ್ನೇ ಆಳಿದ ನಟ ಕರಾಟೆ ಕಿಂಗ್ ಶಂಕರ್ ನಾಗ್. ಶಂಕರ್ ನಾಗ್ ಅಭಿನಯಕ್ಕೆ ಫಿಧಾ ಆಗಿದ್ರಂತೆ ನಟಿ ಮಾಲಾಶ್ರೀ. ಆದರೆ ದುರದೃಷ್ಟವಶಾತ್ ಮಾಲಾಶ್ರೀ ನಟನೆಗೆ ಒಂದ ಹೊಸದರಲ್ಲೇ ಶಂಕರನಾಗ್ ಅಸುನೀಗಿದ್ದು, ಅವರೊಂದಿಗೆ ನತಿಸುವ ಆಸೆಯೂ ಹಾಗೆಯೇ ಕಮರಿ ಹೋಯಿತು ನಟಿ ಮಾಲಾಶ್ರೀಯವರಿಗೆ.
Comments are closed.