ಒಂದು ಕಾಲದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದರೂ ಕೂಡ ಕ್ರೇಜಿಸ್ಟಾರ್, ಎಸ್.ನಾರಾಯಣ್ ಅವರ ಈ ಚಿತ್ರದಲ್ಲಿ ನಟಿಸಲಿಲ್ಲವೇಕೆ?? ಹಿಂದಿನ ಕಾರಣವೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನಸುಗಾರ ರವಿಚಂದ್ರನ್ ತಮ್ಮ ವಿಭಿನ್ನ ನಟನೆಗೆ ಹೆಸರಾದವರು. ಅವರ ಈ ವರೆಗಿನ ಪ್ರಯೋಗಾತ್ಮಕ ಚಿತ್ರಗಳು ಸಾಕಷ್ಟು ಯಶಸ್ಸನ್ನು ಕಂಡಿವೆ. ಕೆಲವು ವೈಫಲ್ಯ ಕಂಡಿದ್ದೂ ಇದೆ. ಆದರೆ ಅವರ ನಟನೆ, ಅವರದೇ ಶೈಲಿಯಲ್ಲಿ ಸಿನಿಮಾ ನಿರ್ಮಾಣ ಇವೆಲ್ಲವೂ ಅವರ ಅಭಿಮಾನಿ ಬಳಗವನ್ನು ಹೆಚ್ಚಿಸಿದೆ.
ರವಿಚಂದ್ರನ್ ತಾವು ಯಾವುದೇ ಚಿತ್ರವನ್ನು ನಿರ್ಮಿಸಲು ಮುಂದಾದರೂ ಅದರ ಬಗ್ಗೆ ವಿಶೇಷ ಕಾಳಜಿವಹಿಸುತ್ತಾರೆ. ಸಿನಿಮಾವನ್ನು ಮಗುವಂತೆ ಪ್ರೀತಿಸುವ ಇವರು ಸಾಕಷ್ಟು ಪರಿಶ್ರಮದ ನಂತರವೂ ಸೋತಿತ್ತಿದೆ. ಆದರೆ ಜನರು ಮಾತ್ರ ಕನಸುಗಾರನ ಕನಸನ್ನು ಪೋಷಣೆ ಮಾಡುತ್ತಲೇ ಬಂದಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಎಸ್ ನಾರಾಯಣ್ ಅವರ ಕಾಂಬಿನೇಶನ್: ಎಸ್. ನಾರಾಯಣ್ ನಟ ಮಾತ್ರವಲ್ಲದೆ ಕೆಲವು ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಅವುಗಳು ಯಶಸ್ಸನ್ನು ಕೂಡ ಕಂಡಿವೆ. ‘ಚೈತ್ರದ ಪ್ರೇಮಾಂಜಲಿ’ ಇದಕ್ಕೊಂದು ಜ್ವಲಂತ ಉದಾಹರಣೆ. ಇನ್ನು ‘ಬೇವು ಬೆಲ್ಲ’ದಂಥ ಸಿನಿಮಗಳೂ ಕೂಡ ಜನರ ಮನಸ್ಸು ಗೆದ್ದಿದೆ.
ಎಸ್. ನಾರಾಯಣ್ ಹಾಗೂ ರವಿಚಂದ್ರನ್ ಇಬ್ಬರು ಸೇರಿ ಮಾಡಿದ ‘ರವಿಮಾಮ’ ಚಿತ್ರ ಪ್ರೇಕ್ಷಕರ ನಡುವೆ ಸೈ ಎನಿಸಿಕೊಂಡಿದೆ. ಅದಾದ ನಂತರ ಇಬ್ಬರ ಜುಗಲ್ಬಂಧಿಯಲ್ಲಿ ಯಾವ ಸಿನಿಮಾಗಳು ಬಂದಿಲ್ಲ. ಎಸ್ ನಾರಾಯಣ್ ರವಿಚಂದ್ರನ್ ಗಾಗಿಯೇ ಒಂದು ಕಥೆಯನ್ನು ಬರೆದು ಆ ಸಿನಿಮಾ ನಡೆಸಲು ಮುಂದಾಗಿದ್ದರು. ಆ ಸಿನಿಮಾ ಟೈಟಲ್ ‘ಮಲೆನಾಡಿನ ಮಲ್ಲ’. ಪಕ್ಕಾ ಹಳ್ಳಿಯ ಸೊಗಡಿರುವ ಕಥೆ, ಹಾಡುಗಳನ್ನು ಒಳಗೊಂಡಿರುವ ಚಿತ್ರ ಇದಾಗಿತ್ತು. ಈ ಚಿತ್ರದ ಕಥೆಯನ್ನು ರವಿಚಂದ್ರನ್ ಅವರಿಗೆ ಹೇಳಿದಾಗ ಅವರೂ ನಟನೆಗೆ ಒಪ್ಪಿದ್ದರು.
ಎಸ್. ನಾರಾಯಣ್, ರವಿಚಂದ್ರನ್ ಅವರಿಗಾಗಿಯೇ, ಅವರಿಗೆ ಸೂಟ್ ಆಗುವಂಥ ಕಥೆಯನ್ನು ಹೆಣೆದಿದ್ದರು. ಆದರೆ ಕಾರಣವೇನೋ ಗೊತ್ತಿಲ್ಲ, ಈ ಚಿತ್ರ ನಿರ್ಮಾಣ ಕಾರ್ಯ ನಡೆಯಲೇ ಇಲ್ಲ. ಚಿತ್ರೀಕರಣವೂ ಆರಂಭವಾಗಲಿಲ್ಲ. ಹಾಗಾಗಿ ‘ ಮಲೆನಾಡಿನ ಮಲ್ಲ’ ವೀಕ್ಷಿಸುವ ಭಾಗ್ಯ ಅಭಿಮಾನಿಗಳಿಗೆ ದೊರೆಯಲೇ ಇಲ್ಲ. ಅದರೆ ಈಗಲೂ ಕೂಡ ನಾರಾಯಣ್ ಹಾಗೂ ರವಿಚಂದ್ರನ್ ಕಾಂಬಿನೇಷನ್ ನಲ್ಲಿ ಮಲೆನಾಡಿನ ಮಲ್ಲ ತೆರೆಕಂಡರೆ ಕನ್ನಡಿಗರಂತೂ ಸ್ವಾಗತಿಸುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.
Comments are closed.