ಪೆನ್ಸಿಲ್ ತಿನ್ನುವ ಅಭ್ಯಾಸ ನಿಮಗೆದಿದೆಯೇ?? ಅಥವಾ ನಿಮ್ಮ ಮಕ್ಕಳಿಗೆ ಇದೆಯೇ?? ಈ ಪೆನ್ಸಿಲ್ ನೋಡಿದ ತಕ್ಷಣ ನೀವು ನಿಮ್ಮ ಮಕ್ಕಳು ಇಬ್ಬರು ತಿನ್ನುತ್ತಿರಾ. ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಈ ಪೆನ್ಸಿಲ್ ಬರೆಯೋಕೂ ಆಗಲ್ಲ, ಮಕ್ಕಳು ಸ್ಕೂಲಿಗೆ ಒಯ್ಯಲೂ ಆಗಲ್ಲ.. ಹಾಗಂತ ಮಕ್ಕಳಿಗೆ ಕೊಡದೇ ಇರೋ ಹಾಗೂ ಇಲ್ಲ.. ಅರೇ, ಅದೆಂಥಾ ಪೆನ್ಸಿಲ್ ಅಂತಿದೀರಾ? ಅದುವೇ ಪೆನ್ಸಿಲ್ ಪೇಸ್ಟ್ರಿ. ನೋಡೋಕೆ ಅತ್ಯದ್ಭುತವಾಗಿರುವ ಈ ಪೆನ್ಸಿಲ್ ಬಾಣಸಿಗಾ ಕೌಶಲ್ಯವನ್ನು ಎತ್ತಿ ತೋರಿಸುತ್ತೆ.
ಮನುಷ್ಯ ಹೊಸ ಹೊಸ ವಿಷಯವನ್ನು ಆವಿಷ್ಕಾರ ಮಾಡುವುದು ವೈದ್ಯಕೀಯ ಮತ್ತು ತಂತ್ರಜ್ಞಾನಗಳಲ್ಲಿ ಮಾತ್ರವಲ್ಲ, ಅಡುಗೆಯಲ್ಲೂ ಕೂಡ! ಹೌದು ಇಲ್ಲೊಬ್ಬ ಬಾಣಸಿಗ ಒಂದು ಅತ್ಯದ್ಭುತವಾದ ವಿನ್ಯಾಸದಲ್ಲಿ ಪೇಸ್ಟ್ರೀ ತಯಾರಿಸಿದ್ದಾರೆ. ಪೇಸ್ಟ್ರಿ ತಯಾರಿಸುವಲ್ಲಿ ಸಕ್ಕತ್ ಫೇಮಸ್ ಆಗಿರುವ ಅಮೌರಿ ಗುಯಿಚಾನ್ ಅವರ ಬಗ್ಗೆ ಕೇಳಿರಬಹುದು. ಸಾಮಾಜಿಕ ಜಾಲತಾಣದಲ್ಲಿ ಇವರ ವಿಶೇಷ ಬಗೆಯ ಪೇಸ್ಟ್ರಿ ಸುದ್ಧಿ ಮಾಡುತ್ತಿರುತ್ತವೆ. ಅದರಲ್ಲೂ ಈ ಬಾರಿಯಂತೂ ವಿಶೇಷವಾಗ ಹಾಗೂ ಮಕ್ಕಳಿಗೂ ಬೇಕೆ ಬೇಕು ಎನಿಸುವಂಥ ಪೇಸ್ಟ್ರಿ ಸಿದ್ಧ ಪಡಿಸಿದ್ದಾರೆ.
ಅಮೌರಿ, ಚಾಕಲೇಟಿನ ವಿವಿಧ ಕಲಾಕೃತಿಯನ್ನು, ಹೊಸ ಬಗೆಯ ವಿನ್ಯಾಸಗಳನ್ನು ಮಾಡುವಲ್ಲಿ ಎತ್ತಿದ ಕೈ. ಅವರ ಹಲವು ವಿನ್ಯಾಸಗಳು ಜನಮನ್ನಣೆಗಳಿಸಿವೆ. ಈ ಬಾರಿ ಅತ್ಯಂತ ವಿಭಿನ್ನವಾದ ಪೇಸ್ಟ್ರಿ ತಯಾರಿಸಿ ಮತ್ತೊಮ್ಮೆ ಎಲ್ಲರ ಗಮನಸೆಳೆದಿದ್ದಾರೆ. ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾವು ಹೊಸ ಬಗೆಯ ಪೆನ್ಸಿಲ್ ಪೇಸ್ಟ್ರಿ ತಯಾರಿಸುವ ಬಗೆಯನ್ನು ಹಂಚಿಕೊಂಡಿದ್ದಾರೆ ಅಮೌರಿ. ಪೆನ್ಸಿಲ್ ಹಿಡಿದು ಬರೆಯಬಹುದಾದ ರೀತಿಯಲ್ಲಿ ಪೆನ್ಸಿಲ್ ಪೇಸ್ಟ್ರಿ ತಯಾರಿಸಿ ಗ್ರಾಹಕರ ಮುಂದಿಟ್ಟಿದ್ದಾರೆ. ತಿನ್ನದೇ ಹಾಗೆಯೇ ಜೋಪಾನವಾಗಿ ಇಟ್ಟುಕೊಳ್ಳಬೇಕು ಎನ್ನುವಷ್ಟು ರಿಯಲೆಸ್ಟಿಕ್ ಆಗಿದೆ ಈ ಪೆನ್ಸಿಲ್ ಪೇಸ್ಟ್ರಿ. ಈ ವಿಡಿಯೋವನ್ನು ಅಮೌರಿ ಹಂಚಿಕೊಳ್ಳುತ್ತಿದ್ದ ಹಾಗೆ ಸಾವಿರಾರು ಲೈಕ್ಸ್ ಗಳ ಸುರಿಮಳೆಯನ್ನೇ ಹರಿಸಿದ್ದಾರೆ ನೆಟ್ಟಿಗರು. ಇನ್ನು ಪೇಸ್ಟ್ರಿ ಪ್ರಿಯರು ಈ ಪೆನ್ಸಿಲ್ ಪೇಸ್ಟ್ರಿ ರುಚಿ ನೋಡಲೇಬೇಕು ಎಂದು ಕಾಯ್ದಿದ್ರೆ, ಇನ್ನೂ ಕೆಲವರು ಈ ರೀತಿ ಪೇಸ್ಟ್ರಿ ಮಾಡಲು ಕುಡ ಪಯತ್ನಿಸುತ್ತಿದ್ದಾರೆ!
Comments are closed.