ರಾಕಿಂಗ್ ಸ್ಟಾರ್ ಯಶ್ ರವರ ಮಗಳ ಜನ್ಮದಿನಾಚರಣೆಗೆ ಆರ್ಯನ್ ಜೊತೆ ಬಂದ ಮೇಘನಾರಾಜ್. ನೀಡಿದ ಗಿಫ್ಟ್ ಏನು ಗೊತ್ತಾ?? ಇದಪ್ಪ ಪ್ರೀತಿ ಅಂದ್ರೆ.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳಿಗೆ ಐರಾ ಹಾಗೂ ಯಥರ್ವ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಇತ್ತೀಚಿಗಷ್ಟೇ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮಗಳು ಐರಾ ಅವರ ಜನ್ಮದಿನವನ್ನು ಆಚರಿಸಿದ್ದಾರೆ. ಪ್ರತಿವರ್ಷವೂ ಕೂಡ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ತಮ್ಮ ಮಗಳಾಗಿರುವ ಐರಾಳ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದರು. ಕಳೆದ ವರ್ಷವೂ ಕೂಡ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಮಗಳ ಜನ್ಮದಿನಾಚರಣೆಗೆ ಹಾಜರಾಗಿದ್ದರು.
ಆ ಸಮಯದಲ್ಲಿ ಜನ್ಮದಿನಾಚರಣೆಯ ವಿಡಿಯೋ ಹಾಗೂ ಫೋಟೋಗಳು ಕೂಡ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ವೈರಲ್ ಆಗಿದ್ದವು. ಆದರೆ ಈ ಬಾರಿ ರಾಕಿಂಗ್ ಸ್ಟಾರ್ ಯಶ್ ರವರು ತಮ್ಮ ಮಗಳ ಮೂರನೇ ವರ್ಷದ ಜನ್ಮದಿನಾಚರಣೆಯನ್ನು ಸಾಕಷ್ಟು ಸರಳವಾಗಿ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಆಚರಿಸಿದ್ದಾರೆ. ಇನ್ನು ಈ ಬಾರಿಯ ಐರಾ ಯಶ್ ರವರ ಜನ್ಮ ದಿನಾಚರಣೆಯ ಸಾಕಷ್ಟು ಫೋಟೋ ಹಾಗು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವನ್ನು ಸೃಷ್ಟಿಸಿದೆ.
ಈ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರ ಮಗಳ ಜನ್ಮದಿನಾಚರಣೆಗೆ ನಟಿ ಮೇಘನರಾಜ್ ಅವರು ಕೂಡ ತಮ್ಮ ಮಗ ಜೂನಿಯರ್ ಚಿರು ಸರ್ಜಾ ರವರೊಂದಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಐರಾ ಯಶ್ ರವರ ಜೊತೆಗೆ ಜೂನಿಯರ್ಸ್ ಚಿರುಸರ್ಜ ರವರು ಕೂಡ ಆಡಿ ಸಂತೋಷಪಟ್ಟರು. ಎಲ್ಲರೂ ಕೂಡ ರಾಕಿಂಗ್ ಸ್ಟಾರ್ ಯಶ್ ಅವರ ಮಗಳ ಜನ್ಮದಿನಾಚರಣೆ ಸಂಭ್ರಮದಲ್ಲಿ ಸಂತೋಷಪಟ್ಟರು. ಈ ಸಂದರ್ಭದಲ್ಲಿ ಮೇಘನಾ ರಾಜ್ ರವರು ಐರಾ ಯಶ್ ರವರಿಗೆ ಬೆಲೆಬಾಳುವ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಮೊದಲಿನಿಂದಲೂ ಕೂಡ ಈ ಎರಡು ಕುಟುಂಬಗಳು ಪರಸ್ಪರ ಪ್ರೀತಿ ಗೌರವಗಳನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.
Comments are closed.