ಪುನೀತ್ ರವರ ಸ್ಮರಣಾರ್ಥ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಮಾಡಿದ್ದೇನು ಗೊತ್ತೇ?? ಎಷ್ಟೇ ಬ್ಯುಸಿ ಇದ್ದರೂ ಕೇವಲ ಪುನೀತ್ ಹೆಸರಿಗಾಗಿ ಮಾಡಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ತಿಂಗಳುಗಳು ಕಳೆದರೂ ಕೂಡ ಅವರ ಸವಿನೆನಪು ಎನ್ನುವುದು ಇಂದಿಗೂ ಕೂಡ ನಮ್ಮ ಸ್ಮತಿ ಪಟಲದಲ್ಲಿ ಹಾಗೆ ಉಳಿದುಕೊಂಡಿದೆ. ಇನ್ನು ಇಂದು ಪುನೀತ್ ರಾಜಕುಮಾರ್ ಅವರ ಕನಸಿನ ಕೂಸು ಆಗಿರುವ ಗಂಧದಗುಡಿ ಡಾಕ್ಯುಮೆಂಟರಿಯ ಟೀಸರ್ ಕೂಡ ಬಿಡುಗಡೆಯಾಗಿದ್ದು 2022 ರಲ್ಲಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಅಧಿಕೃತ ಘೋಷಣೆ ಕೂಡ ನಡೆದಿದೆ.
ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಯುವರಾಜ ಎಂದು ಖ್ಯಾತರಾಗಿರುವ ನಿಖಿಲ್ ಕುಮಾರ್ ಅವರ ಕುರಿತಂತೆ. ನಿಖಿಲ್ ಕುಮಾರ್ ಹಾಗೂ ಪುನೀತ್ ರಾಜಕುಮಾರ್ ರವರ ಸಂಬಂಧ ಮೊದಲಿನಿಂದಲೂ ಕೂಡ ಸಾಕಷ್ಟು ಚೆನ್ನಾಗಿದ್ದು ಇಬ್ಬರೂ ಕೂಡ ಸಿಕ್ಕಾಗಲೆಲ್ಲಾ ಸಾಕಷ್ಟು ಆತ್ಮೀಯತೆ ಹೊಂದಿದ್ದಾರೆ. ಇನ್ನು ನಿಖಿಲ್ ಕುಮಾರ್ ಅವರ ಮದುವೆಗೆ ಕೂಡ ಪುನೀತ್ ರಾಜಕುಮಾರ್ ರವರು ಬಂದು ವಧು-ವರರನ್ನು ಆಶೀರ್ವದಿಸಿ ಹೋಗಿದ್ದರು. ಇನ್ನು ಇತ್ತೀಚಿಗಷ್ಟೇ ನಿಖಿಲ್ ಕುಮಾರ್ ಅವರು ಪುನೀತ್ ರಾಜಕುಮಾರ್ ಅಭಿಮಾನಿಗಳ ಕೋರಿಕೆಗೆ ಇಲ್ಲ ಎನ್ನದೆ ಅವರು ಅಭಿಲಾಷೆಯನ್ನು ವ್ಯಕ್ತಪಡಿಸಿರುವ ಕಾರ್ಯವನ್ನು ಮಾಡಿ ಮುಗಿಸಿದ್ದಾರೆ.
ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥವಾಗಿ ಕೈಲಾಂಚ ಹೋಬಳಿಯ ಅನ್ವೇರ ಹಳ್ಳಿ ಗ್ರಾಮದಲ್ಲಿ ಎಬಿಆರ್ ಕ್ರಿಕೆಟ್ ತಂಡದಿಂದ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಅಭಿಮಾನಿಗಳ ಆಸೆಯಂತೆ ಉದ್ಘಾಟಿಸಿದ್ದಾರೆ ನಿಖಿಲ್ ಕುಮಾರ್ ರವರು. ಇಷ್ಟು ಮಾತ್ರವಲ್ಲದೆ ಕಾರ್ಯಕ್ರಮವನ್ನು ಉದ್ಘಾಟಿಸಿ ನಮ್ಮ ದೇಶದಲ್ಲಿ ಕ್ರಿಕೆಟ್ಗೆ ಜನಪ್ರಿಯತೆ ಜಾಸ್ತಿ ಇದೆ ಕ್ರೀಡೆಗಳು ಯುವಪೀಳಿಗೆಯನ್ನು ಉತ್ತಮಹಾದಿಯಲ್ಲಿ ಕೊಂಡೊಯ್ಯುತ್ತವೆ ಎಂಬುದಾಗಿ ಕೂಡ ಮಾತನಾಡಿದ್ದಾರೆ. ಇನ್ನು ಈ ಕಾರ್ಯಕ್ರಮವನ್ನು ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ವನ್ನು ಸಲ್ಲಿಸಿ ಬ್ಯಾಟ್ ಬೀಸುವ ಮೂಲಕ ಉದ್ಘಾಟನೆ ಮಾಡಿದ್ದಾರೆ ನಿಖಿಲ್ ಕುಮಾರ್ ರವರು.
Comments are closed.