ಒಟ್ಟಿಗೆ ನಟಿಸಿದ ಚಿತ್ರ ಬಿಡುಗಡೆಗೂ ಮುನ್ನವೇ ಅಲ್ಲು ಅರ್ಜುನ್ ಗೆ ಸರ್ಪ್ರೈಸ್ ಗಿಫ್ಟ್ ಕಳುಹಿಸಿದ ರಾಶ್ಮಿಕಾ, ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಅತ್ಯಂತ ವೇಗವಾಗಿ ರಶ್ಮಿಕ ಮಂದಣ್ಣ ನವರು ಭಾರತೀಯ ಚಿತ್ರರಂಗದಾದ್ಯಂತ ತಮ್ಮ ಜನಪ್ರಿಯತೆಯನ್ನು ಹಾಗೂ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಹೌದು ಕನ್ನಡ ಚಿತ್ರದ ನಂತರ ತೆಲುಗು ಚಿತ್ರರಂಗಕ್ಕೆ ಹಾರಿದ ಮೇಲೆ ರಶ್ಮಿಕ ಮಂದಣ್ಣ ನವರು ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ. ತೆಲುಗು ತಮಿಳು ಈಗ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ಪ್ರಾರಂಭದಲ್ಲಿ ದೊಡ್ಡ ದೊಡ್ಡ ನಟರ ಜೊತೆಗೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಇನ್ನು ಈಗಾಗಲೇ ನಟಿ ರಶ್ಮಿಕಾ ಮಂದಣ್ಣ ನಾಯಕ ನಟಿಯಾಗಿ ನಟಿಸಿರುವ ಹಾಗೂ ಅಲ್ಲು ಅರ್ಜುನ್ ನಾಯಕ ನಟನಾಗಿ ನಟಿಸಿರುವ ಪುಷ್ಪ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಡಿಸೆಂಬರ್ 17ರಂದು ಪಂಚ ಭಾಷೆಗಳಲ್ಲಿ ಪುಷ್ಪ ಚಿತ್ರ ಅದ್ದೂರಿಯಾಗಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಈ ಹಿನ್ನಲೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ನವರು ನಟ ಅಲ್ಲು ಅರ್ಜುನ್ ರವರಿಗೆ ಉಡುಗೊರೆಯನ್ನು ನೀಡಿದ್ದಾರೆ.
ಹೌದು ಗೆಳೆಯರೇ ನಟಿ ರಶ್ಮಿಕ ಮಂದನ್ನ ರವರು ಅಲ್ಲುಅರ್ಜುನ್ ರವರಿಗೆ ಅಲಂಕಾರಿಕ ವಸ್ತುಗಳನ್ನು ಒಳಗೊಂಡ ಹಾಗೂ ಕೆಲವು ಸಿಹಿತಿಂಡಿಗಳನ್ನು ಕೂಡ ಕಳುಹಿಸಿಕೊಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೆ ಇದೇ ಡಿಸೆಂಬರ್ 17ಕ್ಕೆ ಬಿಡುಗಡೆಯಾಗುತ್ತಿರುವ ಪುಷ್ಪ ಚಿತ್ರಕ್ಕೆ ಶುಭಹಾರೈಕೆಗಳನ್ನು ಕೂಡ ಪತ್ರವೊಂದನ್ನು ಬರೆದು ಕಳುಹಿಸಿಕೊಟ್ಟಿದ್ದರು. ಇನ್ನು ಇಂತಹ ಕ್ಯೂಟ್ ಗಿಫ್ಟ್ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ಕೂಡ ಅಲ್ಲೂ ಅರ್ಜುನ್ ರವರು ಪ್ರತಿಕ್ರಿಯಿಸಿದ್ದಾರೆ. ಇನ್ನು ಇತ್ತೀಚೆಗಷ್ಟೇ ಅಮಿತಾಬಚ್ಚನ್ ರವರಿಗೆ ರಶ್ಮಿಕ ಮಂದಣ್ಣ ನವರು ಗಿಫ್ಟ್ ಕೊಟ್ಟಿರುವುದನ್ನು ಕೂಡ ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಸದ್ಯಕ್ಕೆ ಭಾರತ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಬೇಡಿಕೆಯನ್ನು ಹೊಂದಿರುವ ನಟಿಯೆಂದರೆ ರಶ್ಮಿಕಾ ಮಂದಣ್ಣ ನವರು ಎಂದು ಹೇಳಬಹುದು.
Comments are closed.