ಪುನೀತ್ ರವರಂತೆ ಈ ಬಾರಿ ಅಶ್ವಿನಿ ರವರು ಯಾರಿಗೂ ಹಣ ನೀಡಲೇ ಇಲ್ಲ, ಆದರೂ ಕೂಡ ನಡೆದದ್ದೇ ಬೇರೆ. ಅಷ್ಟಕ್ಕೂ ನಡೆದದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕನ್ನಡ ನಾಡು ನುಡಿ ಸಂಸ್ಕೃತಿಯ ಕುರಿತಂತೆ ಎಂತಹ ಅಪಾರವಾದ ಆಸಕ್ತಿ ಹಾಗೂ ಗೌರವಗಳನ್ನು ಹೊಂದಿದ್ದರು ಎಂಬುದು ನಮಗೆಲ್ಲ ತಿಳಿದಿದೆ. ಇನ್ನು ಅವುಗಳನ್ನೆಲ್ಲಾ ಒಟ್ಟುಗೂಡಿಸಿ ಸಾಕ್ಷಚಿತ್ರವನ್ನು ತಯಾರಿಸಬೇಕೆಂಬ ಆಸೆಯಲ್ಲಿ ಅವರಿದ್ದರು.
ಇದರ ಪ್ರತೀಕವಾಗಿ ತಯಾರಾದ ಸಾಕ್ಷಿ ಚಿತ್ರವೇ ಗಂಧದಗುಡಿ. ನಿರ್ದೇಶಕ ಅಮೋಘವರ್ಷ ರವರೊಂದಿಗೆ ಕರ್ನಾಟಕದ ಪ್ರಾಕೃತಿಕ ಸೌಂದರ್ಯವನ್ನು ಚಿತ್ರ ರೂಪದಲ್ಲಿ ಪ್ರೇಕ್ಷಕರ ಮುಂದೆ ತಂದಿಡುವ ಕಾರ್ಯವನ್ನು ಗಂಧದಗುಡಿ ಡಾಕ್ಯುಮೆಂಟರಿ ಮೂಲಕ ಮಾಡಲಾಗಿತ್ತು. ಪುನೀತ್ ರಾಜಕುಮಾರ್ ಅವರು ಈ ಸುಂದರ ದೃಷ್ಟಿ ಗಳನ್ನೊಳಗೊಂಡ ಚಿತ್ರವನ್ನು ಕನ್ನಡಿಗರಿಗೆ ಭಜರಂಗಿ ಚಿತ್ರದ ನಡುವೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲು ಯೋಚಿಸಿದ್ದರು.
ಆದರೆ ಪುನೀತ್ ರಾಜಕುಮಾರ್ ಅವರ ಕನಸನ್ನು ನನಸು ಮಾಡಲು ಆ ಭಗವಂತ ಮಾತ್ರ ಅವರಿಗೆ ಆಯಸ್ಸನ್ನು ನೀಡಲಿಲ್ಲ. ಆದರೆ ಪುನೀತ್ ರಾಜಕುಮಾರ್ ಅವರ ಕನಸನ್ನು ಈಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ರವರು ನನಸು ಮಾಡಲು ಹೊರಟಿದ್ದಾರೆ. ನಿನ್ನೆ ಪಾರ್ವತಮ್ಮ ರಾಜಕುಮಾರ್ ಅವರ ಜನ್ಮದಿನದ ವಿಶೇಷವಾಗಿ ಗಂಧದಗುಡಿ ಸಾಕ್ಷ ಚಿತ್ರದ ಟೈಟಲ್ ಟೀಸರ್ ನ್ನು ಬಿಡುಗಡೆ ಮಾಡಿದ್ದಾರೆ. ಇನ್ನು ಈಗಾಗಲೇ ನಿರೀಕ್ಷೆಗಿಂತಲೂ ಹೆಚ್ಚಾಗಿ ಟೀಸರ್ ಪ್ರೇಕ್ಷಕರಿಂದ ಜನಮನ್ನಣೆ ಗಳಿಸಿದೆ.
ಇನ್ನು ಗಂಧದಗುಡಿ ಸಾಕ್ಷ್ಯ ಚಿತ್ರ ಇದೇ 20 22 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಘೋಷಣೆ ಕೂಡ ಇದೇ ಟೀಸರ್ ನಲ್ಲಿ ನಡೆದಿದೆ. ಇನ್ನು ಈಗಾಗಲೇ ಗಂಧದಗುಡಿ ಸಾಕ್ಷ್ಯಚಿತ್ರಕ್ಕೆ ಯೂಟ್ಯೂಬ್ ನಲ್ಲಿ ಲಕ್ಷಾಂತರ ವೀಕ್ಷಣೆಗಳು ಹರಿದು ಬಂದಿದ್ದು ಯೂಟ್ಯೂಬ್ನಲ್ಲಿ ವಿವ್ಸ್ ಕೂಡ ಸ್ಟ್ರಕ್ ಆಗಿದೆ. ಆದರೆ ಇಂದು ಇನ್ನೊಂದು ವಿಚಿತ್ರ ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ನಡೆದಿದೆ ಎಂದು ಹೇಳಬಹುದಾಗಿದೆ.
ಹೌದು ಗೆಳೆಯರೇ ಕನ್ನಡ ಚಿತ್ರರಂಗದಲ್ಲಿ ಒಂದು ಕಿರುಚಿತ್ರ ಬಿಡುಗಡೆ ಆದರೂ ಕೂಡ ಅದನ್ನು ಪ್ರಮೋಟ್ ಮಾಡಲು ಸೋಶಿಯಲ್ ಮೀಡಿಯಾ ಪೇಜ್ ಗಳಿಗೆ ನಿರ್ಮಾಪಕರು ದುಡ್ಡನ್ನು ಸುರಿಯಲೇಬೇಕು. ಆದರೆ ಇಂದು ಗಂಧದಗುಡಿಯ ನಿರ್ಮಾಪಕರಾಗಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ಒಂದು ರೂಪಾಯಿ ಕೂಡ ಪ್ರಮೋಷನ್ ಖರ್ಚು ಮಾಡಿದರು ಕೂಡ ಸೋಶಿಯಲ್ ಮೀಡಿಯಾ ತುಂಬೆಲ್ಲಾ ಗಂಧದಗುಡಿಯ ಕಂಪು ಹರಿದಾಡುತ್ತಿದೆ.
ಕೇವಲ ಪೇಜ್ ಗಳು ಮಾತ್ರವಲ್ಲದೆ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ನಟ ಹಾಗೂ ಅವರ ಅಭಿಮಾನಿಗಳು ಕೂಡ ಪುನೀತ್ ರಾಜಕುಮಾರ್ ರವರ ಗಂಧದಗುಡಿಯ ಕನಸನ್ನು ದೇಶದಾದ್ಯಂತ ತುಂಬಲು ತಮ್ಮ ಕೈಲಾದಷ್ಟು ಪ್ರಯತ್ನಪಟ್ಟಿದ್ದಾರೆ. ಕೇವಲ ದುಡ್ಡು ಇದ್ದರೆ ಮಾತ್ರ ಅಲ್ಲ ಪ್ರೀತಿಯನ್ನು ಸಂಪಾದಿಸಿದರೂ ಕೂಡ ಜನರು ಬೆಂಬಲ ನೀಡುತ್ತಾರೆ ಎಂಬುದನ್ನು ಪುನೀತ್ ರಾಜಕುಮಾರ್ ಅವರ ಮರಣದ ನಂತರವೂ ಕೂಡ ಸಾಧಿಸಿ ತೋರಿಸಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ಅವರನ್ನು ಚಿತ್ರಮಂದಿರಗಳಲ್ಲಿ ಗಂಧದಗುಡಿಯ ಮೂಲಕ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಹಾಗೂ ಕನ್ನಡಿಗರು ಕಾತುರರಾಗಿದ್ದಾರೆ. ಗಂಧದಗುಡಿ ಸಾಕ್ಷ್ಯ ಚಿತ್ರದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.
Comments are closed.