ಗಂಧದಗುಡಿ ಟ್ರೈಲರ್ ನೋಡಿ ನಾಲಿಗೆ ಹರಿಬಿಟ್ಟ ಉತ್ತರ ಭಾರತೀಯದವನು, ಅಪ್ಪು ನೋವಲ್ಲಿ ನಾವೆಲ್ಲರೂ ಇದ್ದರೇ ಈತ ಮಾಡಿದ್ದೇನು ಗೊತ್ತೇ??ಛೀ
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಾವು ಬದುಕಿದ್ದಷ್ಟು ದಿನ ಕನ್ನಡ ಚಿತ್ರರಂಗದಲ್ಲಿ ಯಾವುದೇ ಗಲಾಟೆ ಗೋಜಿಗೂ ಹೋಗದೆ ಅಜಾತಶತ್ರು ವಿನಂತೆ ಬಾಳಿ ಬದುಕಿದವರು ಎಂಬುದು ನಿಮಗೆಲ್ಲಾ ಗೊತ್ತಿರುವ ವಿಷಯವಾಗಿದೆ. ಇನ್ನು ಅವರು ವಿಧಿವಶರಾದಾಗ ಹಲವಾರು ವಿಕೃತ ಮನಸ್ಸುಳ್ಳವರು ಸಾಕಷ್ಟು ಅವರ ಮರಣವನ್ನು ಕೂಡ ಸಂಭ್ರಮಿಸಿದ್ದರು ಅಥವಾ ಮರಣದ ಸಂದರ್ಭದಲ್ಲಿ ಕೂಡ ಅವರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂದು ಈಗಾಗಲೇ ತಿಳಿದುಬಂದಿದೆ.
ಅದರಲ್ಲಿ ಒಬ್ಬ ಉತ್ತರ ಭಾರತದವನು ಅಪ್ಪು ಅವರ ಮರಣದ ಕಾರಣದಿಂದಾಗಿ ಸರ್ಕಾರ ಮದ್ಯವನ್ನು ನಿಷೇಧಿಸಿತ್ತು ಈ ಸಂದರ್ಭದಲ್ಲಿ ಮತ್ತು ಅವರ ಕುರಿತಂತೆ ಅವಹೇಳನಕಾರಿಯಾಗಿ ಮಾತನಾಡಿದ್ದ. ಇನ್ನು ಆ ಸಮಯದಲ್ಲಿ ಆತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಇದಾದ ನಂತರ ಯಶ್ ಅವರ ಅಭಿಮಾನಿ ಎಂದು ಹೇಳಿಕೊಂಡು ಒಬ್ಬ ಯಶ್ ಅವರಿಗೆ ಇದ್ದ ಕಾಂಪಿಟೇಷನ್ ನಲ್ಲಿ ಒಬ್ಬನ ವಿಕೆಟ್ ಹೋಗಿದೆ ಎಂಬುದಾಗಿ ಸಂತೋಷದಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಕೃತವಾಗಿ ಪೋಸ್ಟ್ ಹಾಕಿದ್ದ.
ಇದನ್ನು ಕೂಡ ಎಲ್ಲರು ಖಂಡಿಸಿದ್ದರು. ಇನ್ನು ಇದಾದ ನಂತರ ಇಂದು ಪುನೀತ್ ರಾಜಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಆಗಿರುವ ಗಂಧದಗುಡಿ ಡಾಕ್ಯುಮೆಂಟರಿಯ ಟೀಸರ್ ಬಿಡುಗಡೆಯಾಗಿತ್ತು. ಈ ಸಂದರ್ಭದಲ್ಲಿ ಕೂಡ ಪುನೀತ್ ರಾಜಕುಮಾರ್ ರವರು ರಿಮೇಕ್ ಚಿತ್ರವನ್ನು ಹೆಚ್ಚಾಗಿ ಮಾಡಿದ್ದಾರೆ ಅವರು ನಿಜವಾದ ಪವರ್ ಸ್ಟಾರ್ ಅಲ್ಲ ಎಂಬುದಾಗಿ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಲಾಗಿತ್ತು. ಇನ್ನು ಇದಕ್ಕೆ ಅಭಿಮಾನಿಗಳು ಆತನಿಗೆ ಹಿಗ್ಗಾಮುಗ್ಗಾ ಕಾಮೆಂಟ್ ಸೆಕ್ಷನ್ ನಲ್ಲಿ ಬೈದಿದ್ದಾರೆ. ಅಷ್ಟೊಂದು ನಿಸ್ವಾರ್ಥವಾಗಿ ಬದುಕಿದ ಮನುಷ್ಯನಿಗೆ ಈ ತರಹ ಮಾತನಾಡುವುದಕ್ಕೆ ಅವರಿಗೆ ಹೇಗೆ ಮನಸ್ಸು ಬರುತ್ತದೆ.
Comments are closed.