ಪಾಪ ಹೋಗಿ ಹೋಗಿ ಟ್ರೊಲ್ ಮಾಡುವವರ ಬಳಿ ಲೈವ್ ನಲ್ಲಿ ಸಿಕ್ಕಿ ಹಾಕಿಕೊಂಡ ವಸಂತ, ಅಸಲಿಗೆ ಗ್ರಹಚಾರ ಬಿಡಿಸಿದ್ದು ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿಗಿನ ದಿನಗಳಲ್ಲಿ ಬಿಟಿವಿ ವಾಹಿನಿ ಸಾಕಷ್ಟು ಜನರ ಪಾಲಿಗೆ ನಗೆಪಾಟಲಾಗಿತ್ತು ಮೂಡಿ ಬಂದಿದೆ. ಅಮೂಲ್ಯ ರವರು ಗರ್ಭಿಣಿಯಾಗಿರುವ ವಿಷಯವನ್ನು ಯಾವುದೋ ದೊಡ್ಡ ಯೋಜನೆ ಜಾರಿಗೆ ಬಂದ ರೀತಿಯಲ್ಲಿ ದೊಡ್ಡದಾಗಿ ಸುದ್ದಿ ಮಾಡಿ ಇಡೀ ರಾಜ್ಯವೇ ಸಂತೋಷಪಡುವ ವಿಷಯ ಎಂಬುದಾಗಿ ಬಿ ಟಿವಿ ವಾಹಿನಿಯವರು ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದರು.
ಇದನ್ನು ನೋಡಿ ಜನರು ಬಿಟಿವಿ ವಾಹಿನಿಯವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವ ಮೂಲಕ ಅಪಹಾಸ್ಯಕ್ಕೀಡು ಮಾಡಿದ್ದರು. ಇನ್ನು ಇದನ್ನು ಸಹಿಸಲಾರದೆ ಬಿ ಟಿವಿ ವಾಹಿನಿಯವರು ದಿವ್ಯ ವಸಂತ್ ಎನ್ನುವ ನಿರೂಪಕಿಯ ಮೂಲಕ ಟ್ರೋಲ್ ತಲಹರಟೆ ಎಂಬ ಕಾರ್ಯಕ್ರಮವನ್ನು ಬಿಟಿವಿಯಲ್ಲಿ ಪ್ರಸಾರ ಮಾಡಿದ್ದರು. ಈಗ ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ದಿವ್ಯ ವಸಂತ್ ರವರು ಈ ಸಂದರ್ಭದಲ್ಲಿ ಬಿಟ್ಟಿಯಾಗಿ ನೆಟ್ ಹಾಕಿಸಿಕೊಂಡು ಮಾಡಲು ಕೆಲಸವಿಲ್ಲದವರು ಈ ರೀತಿಯಾಗಿ ಟ್ರೋಲ್ ಮಾಡುತ್ತಾರೆ ಎಂಬುದಾಗಿ ಮಾತನಾಡಿದ್ದರು.
ಇದನ್ನು ನೋಡಿ ಸಹಿಸಿಕೊಳ್ಳಲಾಗದ ಟ್ರೋಲ್ ಪೇಜ್ ಇನ್ ಅವರು ನಾನ್ ಸ್ಟಾಪ್ ದಿವ್ಯ ವಸಂತ್ ರವರ ಕುರಿತಂತೆ ವಿಡಿಯೋ ಹಾಗೂ ಫೋಟೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿ ಉಗಿದು ಉಪ್ಪು ಹಾಕಿದ್ದರು. ಇಷ್ಟು ಮಾತ್ರವಲ್ಲದೆ ದಿವ್ಯ ವಸಂತ್ ರವರು ಟ್ರೋಲಿಗರಿಗೆ ಕೂಡ ಒಂದು ಕಾರ್ಯಕ್ರಮ ಎಂಬಂತೆ ಆ ಕಾರ್ಯಕ್ರಮದಲ್ಲಿ ಏನು ಬೇಕಾದರೂ ಪ್ರಶ್ನೆಯನ್ನು ಕೇಳಿ ನಾವು ಉತ್ತರ ನೀಡಲು ಸಿದ್ಧ ಎಂಬ ಮಾತನ್ನು ಹೇಳಿ ಕಾರ್ಯಕ್ರಮವನ್ನು ಮಾಡಿದ್ದರು. ಇದರಲ್ಲಿ ನವೀನ್ ಎಂಬಾತ ದಿವ್ಯ ವಾಸಂತ್ ರವರ ಬೆವರಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ನವೀನ್ ರವರು ದಿವ್ಯ ವಸಂತ್ ರವರಿಗೆ ಮೇಡಂ ನೀವು ಬಿಟ್ಟಿ ನೆಟ್ ಅಂದ್ರಲ್ಲ ನೀವೊಬ್ಬ ಜರ್ನಲಿಸ್ಟ್ ಆಗಿ ಪ್ರತಿಯೊಂದು ಪದಗಳನ್ನು ಕೂಡ ಚೆನ್ನಾಗಿ ಯೋಚಿಸಿ ಮಾತನಾಡಬೇಕು ಎಂಬುದಾಗಿ ಹೇಳುತ್ತಾರೆ. ಎಲ್ಲರೂ ಕೂಡ ಇಲ್ಲಿ ದುಡ್ಡು ಕೊಟ್ಟೆ ನೆಟ್ ರೀಚಾರ್ಜ್ ಮಾಡಿಕೊಳ್ಳುವುದು ಯಾರು ಕೂಡ ಬಿಟ್ಟು ನೆಟ್ ಉಪಯೋಗಿಸುವುದಿಲ್ಲ ಎಂಬುದಾಗಿ ಹೇಳುತ್ತಾರೆ. ಇನ್ನು ಅಮೂಲ್ಯ ರವರ ಗರ್ಭಿಣಿಯಾದ ವಿಚಾರವನ್ನು ಇಡೀ ರಾಜ್ಯವೇ ಸಂತೋಷಪಡುವ ವಿಚಾರ ಎಂದು ಹೇಳಿದಿರಲ್ಲ ಅದು ಅವರ ಅಭಿಮಾನಿಗಳಿಗೆ ಎಂದು ಹೇಳಬೇಕಾಗಿತ್ತು.
ಈಗಾಗಲೇ ರಾಜ್ಯ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ದುಃಖದಲ್ಲಿದೆ ಎಂಬುದಾಗಿ ಹೇಳುತ್ತಾರೆ. ಇಷ್ಟು ಮಾತ್ರವಲ್ಲದೆ ಇನ್ನೂ ಕೂಡ ಹಲವಾರು ವಿಚಾರಗಳನ್ನು ನವೀನ ರವರು ಮಾತನಾಡಲು ಹೋದಾಗ ದಿವ್ಯ ವಸಂತ ರವರು ನಾವು ಹೇಳಿದ್ದು ಬಿಟ್ಟಿಯಾಗಿ ನೆಟ್ ಹಾಕಿಸಿಕೊಂಡು ಮಾತನಾಡುವವರಿಗೆ ಅದು ನಿಮಗಲ್ಲ.
ಇನ್ನು ಪುನೀತ್ ರಾಜಕುಮಾರ್ ಅವರು ನಿಧನರಾದಾಗ ನಾವು ಕೂಡ ಸಾಕಷ್ಟು ಕೆಲಸ ಮಾಡಿ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದೆವು ಎಂಬುದಾಗಿ ಹೇಳಿದರು. ಇನ್ನೂ ಕೂಡ ನವೀನ್ ಅವರು ಮಾತನಾಡಲು ಪ್ರಯತ್ನಿಸಿದಾಗ ಅವರ ಕರೆಯನ್ನು ಕಡಿತಗೊಳಿಸಲಾಗಿದೆ. ಇನ್ನು ಇದೆಲ್ಲಾ ದಿವ್ಯ ವಸಂತ್ ಹಾಗೂ ಬಿಟಿವಿ ವಾಹಿನಿ ಪ್ರಚಾರಕ್ಕಾಗಿ ಮಾಡುತ್ತಿರುವ ಗಿಮಿಕ್ ಎನ್ನುವುದು ಎಲ್ಲರಿಗೂ ಕೂಡ ತಿಳಿದಿದೆ. ಇದು ಇನ್ನು ಎಷ್ಟು ದಿನ ಮುಂದುವರೆಯುತ್ತದೆ ಎಂದು ಕಾದುನೋಡಬೇಕಾಗಿದೆ.
Comments are closed.