ಪ್ರೀತಿಗೆ ಕಣ್ಣಿಲ್ಲ ಸ್ವಾಮಿ, ಚಿಕ್ಕ ವಯಸ್ಸಿನವರಾದರು ಮದುವೆಗೆ ಒಪ್ಪಿದ ಕತ್ರಿನಾ, ಆದರೆ ವಿಕಿ ಕೌಶಲ್ ಆಸ್ತಿ ಎಷ್ಟು ಗೊತ್ತೇ?? ಇಷ್ಟು ಕಡಿಮೇನಾ?
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಸುಪ್ರಸಿದ್ದ ನಟಿ ಕತ್ರಿನಾ ಕೈಫ್ ಮತ್ತು ಬಾಲಿವುಡ್ ಯುವ ಸ್ಟಾರ್ ನಟ ವಿಕ್ಕಿ ಕೌಶಲ್ ಮದುವೆ ಸಟ್ಟೇರಿದಾಗಿನಿಂದ ಒಂದಲ್ಲ ಒಂದು ವಿಚಾರಕ್ಕೆ ಈ ಇಬ್ಬರು ಬಿಟೌನ್ ನಲ್ಲಿ ಭಾರಿ ಸುದ್ದಿಯಾಗುತ್ತಿದ್ದಾರೆ. ಹಿಂದಿ ಚಿತ್ರರಂಗದ ಬಹು ಬೇಡಿಕೆಯ ನಟಿಯರ ಪೈಕಿ ನಟಿ ಕತ್ರಿನಾ ಕೈಫ್ ಕೂಡ ಒಬ್ಬರು.
38 ವರ್ಷದ ಕತ್ರಿನಾ ಕೈಫ್ 33 ವರ್ಷದ ನಟ ವಿಕ್ಕಿ ಕೌಶಲ್ ಅವರನ್ನು ಇಂದು ಡಿಸೆಂಬರ್ 9 ರಂದು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಕತ್ರಿನಾ ಕೈಫ್ ತನಗಿಂತ ಐದು ವರ್ಷ ಕಿರಿ ವಯಸ್ಸಿನ ವಿಕ್ಕಿ ಕೌಶಲ್ ಅವರನ್ನ ಮದುವೆ ಆಗುವ ಮೂಲಕ ವಯಸ್ಸಿನ ತಾರತಮ್ಯವನ್ನು ಮೀರಿ ಕತ್ರಿನಾ ಕೈಫ್ ತಾನು ಪ್ರೀತಿಸುತ್ತಿದ್ದ ಹುಡುಗನನ್ನೆ ಮದುವೆ ಆಗಿದ್ದಾರೆ. ಇದಕ್ಕೆ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟಿಯಾದ ಕಂಗನಾ ರಣಾವತ್ ಅವರು ಕತ್ರಿನಾ ಕೈಫ್ ಅವರ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಪರಸ್ಪರ ಇಬ್ಬರು ಕೂಡ ಪ್ರೀತಿಸುತ್ತಿದ್ದರು. ಈ ವಿಚಾರ ಬಿ ಟೌನ್ ನಲ್ಲಿ ಯಾವಾಗ ಸದ್ದು ಮಾಡಿತೋ ಆಗ ಈ ಜೋಡಿ ತಮ್ಮ ಕುಟುಂಬದವರಿಗೆ ತಮ್ಮ ಪ್ರೀತಿಯ ವಿಷಯ ತಿಳಿಸಿ ತಮ್ಮಿಬ್ಬರ ವಿವಾಹಕ್ಕೆ ಒಪ್ಪಗೆ ಕೇಳಿದ್ದಾರೆ. ಅದರಂತೆ ಎರಡೂ ಕುಟುಂಬದವರು ಇವರ ಪ್ರೀತಿಗೆ ಒಪ್ಪಿ ಅದ್ದೂರಿಯಾಗಿಯೇ ರಾಜಸ್ತಾನದ ಐಷಾರಾಮಿ ಹೋಟೆಲ್ ನಲ್ಲಿ ಮದುವೆ ಮಾಡಿದ್ದಾರೆ.
ಇನ್ನು ಈ ಸ್ಟಾರ್ ದಂಪತಿಗಳ ವಾರ್ಷಿಕ ಆದಾಯವನ್ನು ಗಮನಿಸುವುದಾದರೆ ಕತ್ರಿನಾ ಕೈಫ್ ಅವರು 2019 ರ ಫೋರ್ಬ್ಸ್ ಪಟ್ಟಿಯಲ್ಲಿದ್ದು, ಆ ವರ್ಷದಲ್ಲಿ ಅವರ ಆದಾಯ ಬರೋಬ್ಬರಿ 23.63 ಕೋಟಿಯಷ್ಟಿತ್ತು. 2018 ರಲ್ಲಿ 33.ಕೋಟಿಗೂ ಅಧಿಕವಿತ್ತು. ನಟ ವಿಕ್ಕಿ ಕೌಶಲ್ ಅವರು 2019 ರಲ್ಲಿ 10 ಕೋಟಿ ಗೂ ಅಧಿಕ ಆದಾಯ ಗಳಿಸಿದ್ದರು. ಇವರ ಬಳಿ ಸರಿ ಸುಮಾರು 25-30 ಕೋಟಿ ಆಸ್ತಿ ಮೌಲ್ಯ ಇದೆ. ಆದರೆ ಕತ್ರಿನಾ ಕೈಫ್ ಅವರು ಬಾಲಿವುಡ್ ನಲ್ಲಿ ಬೇಡಿಕೆ ನಟಿಯಾಗಿದ್ದು ವಿಕ್ಕಿ ಕೌಶಲ್ ಅವರು ಬಾಲಿವುಡ್ ಗೆ ಎಂಟ್ರಿ ಕೊಡುವುದಕ್ಕಿಂತ ಮುಂಚೆಯಿಂದಾನೂ ಸಕ್ರೀಯವಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅಷ್ಟೇ ಜನಪ್ರಿಯತೆ ಪಡೆದಿದ್ದ ಕತ್ರಿನಾ ಕೈಫ್ ಅವರಿಗೆ ವಿಕ್ಕಿ ಕೌಶಲ್ ಅವರಿಗಿಂತ ಹತ್ತು ಪಟ್ಟು ಅಂದರೆ ಬರೋಬ್ಬರಿ 240 ಕೋಟಿ ಆಸ್ತಿ ಮೌಲ್ಯ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
Comments are closed.