ಸತ್ಯ ಇನ್ ಲವ್ ಚೆಲುವೆ ಜೆನಿಲಿಯಾ ಈಗ ಏನು ಮಾಡುತ್ತಿದ್ದಾರೆ ಗೊತ್ತೇ??? ಬರೋಬ್ಬರಿ 10 ವರ್ಷಗಳ ಬಳಿಕ ಸಿಕ್ತು ಸಿಹಿ ಸುದ್ದಿ. ಕುಣಿದು ಕುಪ್ಪಳಿಸಿದ ಜನತೆ.
ನಮಸ್ಕಾರ ಸ್ನೇಹಿತರೇ ಜೆನಿಲಿಯಾ ದೇಶಮುಖ್ ಅವರ ಕುರಿತಂತೆ ನಿಮಗೆಲ್ಲಾ ಗೊತ್ತೇ ಇದೆ. ಅವರು ತಮಿಳು ತೆಲುಗು ಕನ್ನಡ ಹಾಗೂ ಹಿಂದಿ ಚಿತ್ರಗಳಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳ ನಾಯಕ ನಟಿಯಾಗಿ ನಟಿಸಿದ್ದಾರೆ. ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಾಯಕ ನಟಿಯರಲ್ಲಿ ಜೆನಿಲಿಯಾ ಕೂಡ ಒಬ್ಬರಾಗಿದ್ದರು. ಇನ್ನು ಕನ್ನಡ ಚಿತ್ರರಂಗದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಸತ್ಯ ಇಸ್ ಇನ್ ಲವ್ ಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕೂಡ ಪರಿಚಿತ ಆಗಿದ್ದರು.
ಅದಾದ ನಂತರ ಯಾವುದೇ ಕನ್ನಡ ಚಿತ್ರಗಳಲ್ಲಿ ಕೂಡ ಜೆನಿಲಿಯಾ ರವರು ಕಾಣಿಸಿಕೊಂಡಿರಲಿಲ್ಲ. ಇನ್ನು 2012 ರಲ್ಲಿ ರಿತೇಶ್ ದೇಶಮುಖ್ ರವರನ್ನು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಜನಲಿಯ ರವರು ಯಾವುದೇ ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇನ್ನು ಜೆನಿಲಿಯಾ ರವರನ್ನು ದೊಡ್ಡ ಪರದೆ ಮೇಲೆ ಕಾಣಬೇಕೆಂದು ಅಂದುಕೊಂಡಿದ್ದ ಅಭಿಮಾನಿಗಳಿಗೆ ಜೆನಿಲಿಯಾ ರವರು ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.
ಹೌದು ಗೆಳೆಯರೆ ಜೆನಿಲಿಯಾ ದೇಶಮುಖ್ ರವರು ಮರಾಠಿ ಚಿತ್ರವೊಂದರ ಮೂಲಕ ತಮ್ಮ ನಟನೆಯ ವೃತ್ತಿಗೆ 10 ವರ್ಷಗಳ ನಂತರ ವಾಪಸ್ ಬರಲಿದ್ದಾರೆ ಎಂಬ ಸುದ್ದಿಯನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಅದು ಕೂಡ ಅವರ ಪತಿ ಆಗಿರುವ ರಿತೇಶ್ ದೇಶಮುಖ್ ಮೊದಲಬಾರಿಗೆ ನಿರ್ದೇಶನ ಮಾಡುತ್ತಿರುವ ವೇಡ್ ಎನ್ನುವ ಮರಾಠಿ ಚಿತ್ರದ ಮೂಲಕ ಜೆನಿಲಿಯಾ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಚಿತ್ರ 2022 agust12 ಹತ್ತಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಯೋಜನೆಯನ್ನು ಹಾಕಿಕೊಂಡಿದೆ. ಒಟ್ಟಾರೆಯಾಗಿ ಪತಿ-ಪತ್ನಿ ಇಬ್ಬರೂ ಕೂಡ ಒಂದೇ ಸಿನಿಮಾದಲ್ಲಿ ಬೇರೆ ಬೇರೆ ವಿಭಾಗದಲ್ಲಿ ಕೆಲಸ ಮಾಡುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
Comments are closed.