ಕೊನೆಗೂ ಬಯಲಾಯ್ತು ವಿಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆಯಲ್ಲಿ ಕಟ್ ಮಾಡಿರುವ ಕೇಕ್ ಬೆಲೆ, ಇದೊಂದು ಕೇಕ್ ಗೆ ಎಷ್ಟು ಬೆಲೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಈಗಾಗಲೇ ಬಾಲಿವುಡ್ ಚಿತ್ರರಂಗದ ಸ್ಟಾರ್ ಜೋಡಿ ಗಳಾಗಿರುವ ವಿಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರು ಮದುವೆಯಾಗಿರುವುದು ನಿಮಗೆಲ್ಲಾ ಗೊತ್ತಿದೆ. ಇವರಿಬ್ಬರ ಮದುವೆ ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ನಿರೀಕ್ಷೆಯಂತೆ ಇಬ್ಬರೂ ಕೂಡ ಕುಟುಂಬಸ್ಥರ ಸಮ್ಮುಖದಲ್ಲಿ ಹಾಗೂ ಗೆಳೆಯರ ಉಪಸ್ಥಿತಿಯಲ್ಲಿ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ.
ಇನ್ನು ಈಗಾಗಲೇ ಹಲವಾರು ವಿಧದಲ್ಲಿ ಇವರಿಬ್ಬರ ಮದುವೆ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇತ್ತೀಚಿಗಷ್ಟೇ ತಿಳಿದುಬಂದಿರುವಂತೆ ಕತ್ರಿನಾ ಕೈಫ್ ರವರು ಮದುವೆಯಲ್ಲಿ ತೊಟ್ಟುಕೊಂಡಿದ್ದ ಲೆಹೆಂಗಾ 17 ಲಕ್ಷ ರೂಪಾಯಿ ಬೆಲೆಯುಳ್ಳದ್ದಾಗಿತ್ತು. ಕೇವಲ ವಸ್ತ್ರಕ್ಕೆ ಇಷ್ಟೊಂದು ಖರ್ಚು ಮಾಡಿದ್ದಾರೆ ಎಂದರೆ ಮದುವೆಗೆ ಎಷ್ಟು ಖರ್ಚು ಮಾಡಿರಬಹುದು ಎಂಬುದನ್ನು ನೀವು ಕೇವಲ ಅಂದಾಜು ಮಾಡಿಕೊಳ್ಳಿ. ಇನ್ನು ಇವರಿಬ್ಬರ ಮದುವೆಯಲ್ಲಿ ಇನ್ನೊಂದು ದುಬಾರಿ ವಸ್ತುವೊಂದರ ಕುರಿತಂತೆ ಈಗ ಚರ್ಚೆಗಳು ನಡೆಯುತ್ತಿವೆ. ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ಇವರಿಬ್ಬರ ಮದುವೆಯಲ್ಲಿ ಕಟ್ ಮಾಡಿರುವ ಕೇಕ್ ಕುರಿತಂತೆ.
ವಿಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ಮದುವೆಯಲ್ಲಿ ಕೇಕನ್ನು ತಯಾರಿಸಲು ಇಟಲಿಯಿಂದ ಬಾಣಸಿಗನನ್ನು ಕರೆಸಲಾಗಿದೆ. ಈಕೆ ಐದು ಅಂತಸ್ತಿನಲ್ಲಿ ಮೂಡಿಬಂದಿದ್ದು ಬಾಣಸಿಗರಿಗೆ ಸಂಭಾವನೆಯನ್ನು ಕೂಡ ಸಾಕಷ್ಟು ದೊಡ್ಡಮಟ್ಟದಲ್ಲಿ ನೀಡಿದ್ದಾರಂತೆ. ಇನ್ನು ಬಾಣಸಿಗನ ಸಂಭಾವನೆಯನ್ನು ಹೊರತುಪಡಿಸಿ ಕೇಕ್ ಗೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕೇವಲ ಕೇಕ್ ಹಾಗೂ ವಸ್ತ್ರಕ್ಕೆ ಇಷ್ಟೊಂದು ಖರ್ಚು ಮಾಡಿದ್ದಾರೆ ಎಂದರೆ ಪೂರ್ಣ ಮದುವೆಯ ಖರ್ಚು ಹಲವಾರು ಕೋಟಿ ರೂಪಾಯಿಗಳನ್ನು ದಾಟಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ಕೇಕ್ ಖರ್ಚಿನ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.
Comments are closed.