ಪುನೀತ್ ರವರು ಸ್ವರ್ಗ ಸೇರಿದ ಮೇಲೆ ದೊಡ್ಮನೆಯಲ್ಲಿ ಏನು ನಡೆಯುತ್ತಿದೆ ಗೊತ್ತೇ?? ರಾಘಣ್ಣ ರವರು ಅಪ್ಪು ಕುಟುಂಬದ ಜೊತೆ ಸಂಬಂಧ ಹೇಗೆ ಇಟ್ಟುಕೊಂಡಿದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರ ಮನೆಯವರನ್ನು ದೊಡ್ಡ ಮನೆಯವರು ಎಂದು ಕರೆಯಲು ಅವರು ಅಭಿಮಾನಿಗಳಿಗೆ ಹಾಗೂ ಎಲ್ಲ ಜನರಿಗೂ ನೀಡುತ್ತಿದ್ದಂತಹ ಪ್ರೀತಿ ಗೌರವಗಳೇ ಕಾರಣ ಎಂದರೆ ತಪ್ಪಾಗಲಾರದು. ಎಲ್ಲರಿಗೂ ಕೂಡ ಅವರು ಸಮಾನವಾಗಿ ಗೌರವ ಹಾಗೂ ಪ್ರೀತಿಯನ್ನು ತೋರುತ್ತಿದ್ದರು. ಇದನ್ನು ಇಂದಿಗೂ ಕೂಡ ದೊಡ್ಡ ಮನೆಯವರು ಉಳಿಸಿಕೊಂಡು ಬಂದಿದ್ದಾರೆ.
ಅಭಿಮಾನಿಗಳನ್ನು ದೇವರು ಎಂದು ಮೊದಲ ಬಾರಿ ಕರೆದಂತಹ ಕುಟುಂಬ ಅಣ್ಣಾವ್ರದ್ದು. ಈ ವಿಚಾರದಲ್ಲಿ ಪಾರ್ವತಮ್ಮ ರಾಜಕುಮಾರ್ ಅವರು ದೊಡ್ಮನೆ ಕುಟುಂಬವನ್ನು ಎಲ್ಲಾ ರೀತಿಯಿಂದಲೂ ಕೂಡ ಸರ್ವಗುಣಸಂಪನ್ನ ರಾಗಿ ಇರುವಂತೆ ಮಾಡಲು ಮಾಡಿದಂತಹ ಪ್ರಯತ್ನ ನಿಜಕ್ಕೂ ಪ್ರಶಂಸಾರ್ಹ ವಾದದ್ದು. ಇಂದಿಗೂ ಕೂಡ ದೊಡ್ಮನೆ ಎನ್ನುವುದು ಯಾವುದೇ ವಿವಾದಗಳಲ್ಲಿ ಕೂಡ ಸಿಲುಕದೆ ಅಜಾತಶತ್ರು ಕುಟುಂಬದಂತೆ ಇದೆ ಎಂದರೆ,
ಖಂಡಿತವಾಗಿಯೂ ಪಾರ್ವತಮ್ಮ ರಾಜಕುಮಾರ್ ಅವರು ಹಾಕಿ ಕೊಟ್ಟಂತಹ ದಾರಿ ಕೂಡ ಪ್ರಮುಖವಾಗಿ ಕಾರಣವಾಗುತ್ತದೆ. ಇನ್ನು ಪುನೀತ್ ರಾಜಕುಮಾರ್ ಅವರನ್ನು ಆಗಲಿ 45 ದಿನಗಳಿಗೂ ಕೂಡ ಅಧಿಕ ದಿನ ಕಳೆದರೂ ಇಂದಿಗೂ ಕಂಠೀರವ ಸ್ಟುಡಿಯೋದಲ್ಲಿ ಬರುತ್ತಿರುವ ಸಹಸ್ರಾರು ಸಂಖ್ಯೆಯ ಜನರ ಪ್ರೀತಿಯೇ ಇದಕ್ಕೆ ಜೀವಂತ ಉದಾಹರಣೆಯಾಗಿದೆ. ಮೊದಲು ದೊಡ್ಮನೆ ಕುಟುಂಬಸ್ಥರು ಅಂದರೆ ಶಿವಣ್ಣ ರಾಘಣ್ಣ ಹಾಗೂ ಪುನೀತ್ ಯಾವುದಾದರೂ ವಿಶೇಷ ಸಮಾರಂಭಗಳಲ್ಲಿ ಮಾತ್ರ ಜೊತೆಯಾಗಿ ಸೇರುತ್ತಿದ್ದರು.
ಆದರೆ ಈಗ ಪುನೀತ್ ರವರನ್ನು ಕಳೆದುಕೊಂಡಿರುವ ದುಃಖದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇದ್ದಾರೆ ಸಿನಿಮಾ ಕಾರ್ಯಗಳನ್ನು ಕೈಗೆತ್ತಿಕೊಂಡರು ಕೂಡ ಪುನೀತ್ ಇಲ್ಲ ಎಂಬ ದುಃಖ ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಹೀಗಾಗಿ ಅವರಿಗೆ ಸಮಾಧಾನ ಮಾಡುವ ವ್ಯಕ್ತಿಗಳು ಅವಶ್ಯಕವಾಗಿದ್ದಾರೆ. ಇನ್ನು ಈಗ ಶಿವಣ್ಣ ಹಾಗೂ ರಾಘಣ್ಣ ಇಬ್ಬರು ಕೂಡ ಅಶ್ವಿನಿ ಅವರನ್ನು ಸ್ವೀಕರಿಸಿರುವ ರೀತಿ ನೋಡಿದರೆ ಖಂಡಿತವಾಗಿ ಕಣ್ಣಿನಲ್ಲಿ ನೀರು ಬರುವುದು ಗ್ಯಾರಂಟಿ.
ಹೌದು ಗೆಳೆಯರೇ ಅಶ್ವಿನಿ ಅವರು ಎಲ್ಲಾ ನಿರ್ಧಾರಗಳಿಗೂ ಕೂಡ ಪ್ರಮುಖ ಸಲಹೆ ಶಿವಣ್ಣನವರ ಬಳಿ ಕೇಳುವುದರ ಮುಖಾಂತರ ಅವರಿಗೆ ತಂದೆಯ ಸ್ಥಾನವನ್ನು ನೀಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ರಾಘಣ್ಣನವರು ನನಗೆ ಮೂರು ಮಕ್ಕಳು ಅಶ್ವಿನಿ ದೃತಿ ಹಾಗೂ ವಂದಿತ ಎಂಬುದಾಗಿ ಹೇಳಿಕೊಂಡಿದ್ದರು. ಹೌದು ಗೆಳೆಯರೆ ನಿನ್ನೆಯಷ್ಟೇ ರಾಘವೇಂದ್ರ ರಾಜಕುಮಾರ್ ರವರ ಹೊಸ ಸಿನಿಮಾದ ಚಿತ್ರೀಕರಣದ ಮುಹೂರ್ತ ಪೂಜೆ ನಡೆದಿತ್ತು.
ಈ ಸಂದರ್ಭದಲ್ಲಿ ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಈ ಚಿತ್ರದ ಮುಹೂರ್ತ ಪೂಜೆ ಕ್ಲಾಪ್ ಅಪ್ಪು ಮಾಡಬೇಕಾಗಿತ್ತು. ಈ ಚಿತ್ರದ ಯಶಸ್ಸನ್ನು ನನ್ನ ಹೆಣ್ಣುಮಕ್ಕಳ ಆಗಿರುವ ಅಶ್ವಿನಿ ವಂದಿತ ದೃತಿ ಗೆ ಸಲ್ಲಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ. ರಾಘಣ್ಣ ಆಗಲಿ ಅಥವಾ ಶಿವಣ್ಣ ಆಗಲಿ ಪುನೀತ್ ರವರನ್ನು ಕಳೆದುಕೊಂಡ ನಂತರ ಅಶ್ವಿನಿ ಅವರಿಗೆ ಬೆಂಬಲ ವಾಗಿರುವ ರೀತಿ ನೋಡಿದರೆ ಖಂಡಿತವಾಗಿಯೂ ಹೆಮ್ಮೆಯೆನಿಸುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
Comments are closed.