Neer Dose Karnataka
Take a fresh look at your lifestyle.

ಈತನೇ ಭಾರತದ ಅಂಡ್ರೆ ರಸೆಲ್, ಈತನಿಗೆ ಅವಕಾಶ ನೀಡಿ ಎಂದ ಹರ್ಭಜನ್. ಭಾರತದ ಅಂಡ್ರೆ ರಸೆಲ್ ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕ್ರಿಕೆಟ್ ನಲ್ಲಿ ಮೂರು ವಿಧದ ಕ್ರಿಕೆಟ್ ನಮಗೆ ಕಂಡು ಬರುತ್ತದೆ. ಏಕದಿನ ಟಿ-ಟ್ವೆಂಟಿ ಹಾಗೂ ಟೆಸ್ಟ್ ಕ್ರಿಕೆಟ್. ಈ ಮೂರು ವಿಧಗಳಲ್ಲಿ ಜನರು ಅತ್ಯಂತ ಹೆಚ್ಚು ಇಷ್ಟಪಡುವುದು ಟಿ ಟ್ವೆಂಟಿ ಕ್ರಿಕೆಟ್ ಮಾದರಿ. ಯಾಕೆಂದರೆ ಇದು ಅತಿವೇಗವಾಗಿ ಪ್ರಾರಂಭವಾಗಿ ವೇಗವಾಗಿ ಮುಗಿಯುತ್ತದೆ. ಇಷ್ಟು ಮಾತ್ರವಲ್ಲದೆ ಈ ವೇಗದ ಆಟದಲ್ಲಿ ಮನೋರಂಜನೆ ಕೂಡ ಹೆಚ್ಚು.

ಇನ್ನು ಟಿ20 ಕ್ರಿಕೆಟ್ ನಲ್ಲಿ ಆಲ್-ರೌಂಡರ್ ಆಟಗಾರರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇನ್ನು ವಿಶ್ವಕ್ರಿಕೆಟಿನಲ್ಲಿ ಸರಿಯಾಗಿ ನೋಡಿದರೆ ಆಲ್-ರೌಂಡರ್ ಆಟಗಾರನಾಗಿ ಅತ್ಯಂತ ಹೆಚ್ಚು ಯಶಸ್ಸನ್ನು ಪಡೆದಿರುವುದು ಇತ್ತೀಚಿನ ದಿನಗಳಲ್ಲಿ ಅಂದ್ರೆ ರಸೆಲ್ ಎಂದರೆ ಖಂಡಿತವಾಗಿ ತಪ್ಪಾಗಲ್ಲ. ಯಾಕೆಂದರೆ ಅಂದ್ರೆ ರಸೆಲ್ ಬ್ಯಾಟಿಂಗ್ ಗೆ ನಿಂತರೆ ರನ್ನುಗಳ ಹೊಳೆಯೇ ಹರಿಸುತ್ತಾನೆ. ಬೌಲಿಂಗ್ ಗೆ ನಿಂತರೆ ಕೂಡ ವಿಕೆಟ್ಗಳನ್ನು ಉದರಿಸುತ್ತಾನೆ. ಹೀಗಾಗಿ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ವೆಸ್ಟ್ ಇಂಡೀಸ್ ತಂಡ ಸಾಕಷ್ಟು ಬಲಿಷ್ಠ ತಂಡಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ.

ಇನ್ನು ಅಂದ್ರೆ ರಸೆಲ್ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಕೂಡ ಇಂತಹದ್ದೇ ಆಟವನ್ನು ಪ್ರದರ್ಶಿಸಿರುವುದು ನಾವು ಈಗಾಗಲೇ ಪ್ರತಿ ಸೀಸನ್ ಗಳಲ್ಲಿ ಕೂಡ ನೋಡಿದ್ದೇವೆ. ಇನ್ನು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ರವರ ಪ್ರಕಾರ ಭಾರತ ಕ್ರಿಕೆಟ್ ತಂಡಕ್ಕೆ ಕೂಡ ಇಂತಹ ಆಟಗಾರನ ಅವಶ್ಯಕತೆ ಇದ್ದು ಈ ಸ್ಥಾನವನ್ನು ಭಾರತೀಯ ಕ್ರಿಕೆಟ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ರವರು ತುಂಬುತ್ತಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಕೂಡ ತಂಡಕ್ಕೆ ನೆರವಾಗುತ್ತಿರುವುದರಿಂದಾಗಿ ಹಾರ್ದಿಕ್ ಪಾಂಡ್ಯ ರವರು ಆಲ್-ರೌಂಡರ್ ವಿಭಾಗದ ಮುಖ್ಯಸ್ಥರಾಗಿ ಕಾಣಿಸಿಕೊಳ್ಳಬಹುದು ಎಂಬುದಾಗಿ ಹೇಳಿದ್ದಾರೆ.

Comments are closed.