Neer Dose Karnataka
Take a fresh look at your lifestyle.

ಇಷ್ಟು ದಿವಸ ಮಾಡದ ಕೆಲಸವನ್ನು ಗೆಳೆಯ ಪುನೀತ್ ಗಾಗಿ ಮಾಡಿದ ದರ್ಶನ್, ಸ್ನೇಹಿತನಿಗಾಗಿ ಉತ್ತಮ ತ್ಯಾಗ ಎಂದ ನೆಟ್ಟಿಗರು, ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮನ್ನು ಅಗಲಿ 50 ದಿನಗಳು ಕಳೆಯುತ್ತ ಬಂದಿದೆ. ಕನ್ನಡ ಚಿತ್ರರಂಗದ ಧ್ರುವ ನಕ್ಷತ್ರ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಅಕಾಲಿಕವಾಗಿ ನಮ್ಮನ್ನೆಲ್ಲಾ ಅಗಲಿ ರುವುದು ನಿಜವಾಗಲೂ ಕೂಡ ಪ್ರತಿಯೊಬ್ಬ ಕನ್ನಡಿಗನು ಮನೆಯಲ್ಲಿ ತಮ್ಮದೇ ಬಂಧುವನ್ನು ಕಳೆದುಕೊಂಡಂತಹ ದುಃಖವನ್ನು ಅನುಭವಿಸಿದ್ದರು.

ಇನ್ನು ಪುನೀತ್ ರಾಜಕುಮಾರ್ ರವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾರಂಗದಲ್ಲಿ ಕೂಡ ಎಲ್ಲರೂ ಮೆಚ್ಚುವಂತಹ ಸಾಧನೆ ಮಾಡಿದ್ದು ಸಮಾಜಸೇವೆಯಲ್ಲಿ ಕೂಡ ತೆರೆ ಮರೆಯ ಕಾಯಿಯಂತೆ ನಿಂತು ಎಲ್ಲರಿಗೂ ಸಹಾಯ ಮಾಡಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ರವರು ಮರಣಹೊಂದಿದಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಡಿದಂತಹ ಕಾರ್ಯಗಳು ಕೂಡ ಸಾಕಷ್ಟು ಜನಮನ್ನಣೆಗೆ ಒಳಗಾಗಿತ್ತು. ಹೌದು ಗೆಳೆಯರೇ ಪುನೀತ್ ರಾಜಕುಮಾರ್ ಅವರು ಮರಣಹೊಂದಿದಾಗ ಬೆಳಿಗ್ಗೆಯೇ ಆಸ್ಪತ್ರೆಗೆ ದರ್ಶನ್ ರವರು ಓಡೋಡಿ ಬಂದಿದ್ದರು. ಇನ್ನು ಪುನೀತ್ ರಾಜಕುಮಾರ್ ರವರ ಅಂತಿಮ ಕ್ರಿಯೆ ಹಾಗೂ 11ನೇ ಮತ್ತು 12ನೇ ದಿನದ ಕಾರ್ಯಕ್ರಮಗಳಲ್ಲಿ ಕೂಡ ದರ್ಶನ್ ರವರು ದೊಡ್ಡಮನೆ ಕುಟುಂಬಸ್ಥರ ಜೊತೆಗೆ ಭಾಗಿಯಾಗಿದ್ದರು.

ಅರಮನೆ ಮೈದಾನದಲ್ಲಿ ನಡೆದ ಪುನೀತ್ ನಮನ ಕಾರ್ಯಕ್ರಮದಲ್ಲಿ ಕೂಡ ದರ್ಶನ್ ಅವರು ಭಾಗಿಯಾಗಿ ಪುನೀತ್ ರಾಜಕುಮಾರ್ ಅವರ ಕುರಿತಂತೆ ಮಾತುಗಳನ್ನು ಹಂಚಿಕೊಂಡಿದ್ದರು. ಇನ್ನು ಈಗ ಪುನೀತ್ ರಾಜಕುಮಾರ್ ರವರ ಕನಸಿನ ಪ್ರಾಜೆಕ್ಟ್ ಆಗಿರುವ ಗಂಧದಗುಡಿಯ ಟೀಸರ್ ಅನ್ನು ಕೂಡ ದರ್ಶನ್ ಅವರು ಮೆಚ್ಚಿ ಶೇರ್ ಮಾಡಿದ್ದಾರೆ. ಇನ್ನು ಇಷ್ಟು ಮಾತ್ರವಲ್ಲದೆ ತಮ್ಮ ಅಭಿಮಾನಿಗಳ ಕೈಯಿಂದಲೂ ಕೂಡ ಗಂಧದಗುಡಿ ಟೀಸರ್ಗೆ ಪ್ರಮೋಷನ್ ಮಾಡಿಸಿದ್ದಾರೆ. ದರ್ಶನ್ ರವರ ಒಳ್ಳೆಯ ಗುಣ ಈಗ ಎಲ್ಲರ ಮನವನ್ನು ಕೂಡ ಗೆದ್ದಿದ್ದು ದರ್ಶನ್ ರವರಿಗೆ ಪ್ರಶಂಸೆಯ ಸುರಿಮಳೆ ಬಂದಿದೆ. ಇನ್ನು ಅಭಿಮಾನಿಗಳು ಮಾಡುತ್ತಿರುವ ಯುನೈಟೆಡ್ ಕೆ ಎಫ್ ಐ ಅಭಿಮಾನ ಕೂಡ ದರ್ಶನ್ ರವರು ಸಪೋರ್ಟ್ ಮಾಡಿದ್ದು ಕನ್ನಡ ಚಿತ್ರರಂಗದಲ್ಲಿ ನಾವೆಲ್ಲರೂ ಒಂದೇ ಎಂಬುದಾಗಿ ಕೂಡ ಸಂದೇಶವನ್ನು ಸಾರಿದ್ದಾರೆ.

Comments are closed.