ಕೊನೆಗೂ ಬಯಲಾಯ್ತು ಕಿರಿಕ್ ಕೀರ್ತಿಯ ಕಿರಿಕ್ ಘಟನೆ ಹಿಂದಿನ ಅಸಲಿಯತ್ತು ಏನು ಗೊತ್ತೇ?? ಅಂದು ಹೇಳಿದೆಲ್ಲ ಸುಳ್ಳಾ??
ನಮಸ್ಕಾರ ಸ್ನೇಹಿತರೇ ಕಿರಿಕ್ ಕೀರ್ತಿ ಕನ್ನಡದ ಕಿರುತೆರೆಯಲ್ಲಿ ಹೆಚ್ಚು ಪ್ರಸಿದ್ದಿ ಹೊಂದಿದವರು. ವಾರ್ತಾ ವಾಹಿನಿಯಲ್ಲಿ ಸುದ್ದಿ ನಿರೂಪಕರಾಗಿ ಕೆಲಸ ಆರಂಭಿಸಿದ್ದ ಕೀರ್ತಿ ತದನಂತರ, ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ನಂತರ ಯೂಟ್ಯೂಬ್ ಚಾನೆಲ್ ಗಳ ಮೂಲಕ ಪ್ರಸಿದ್ಧರಾದರು. ನಂತರ ಬಿಗ್ ಬಾಸ್ ಮನೆಗೆ ಹೋಗಿ ಅಲ್ಲಿ ರನ್ನರ್ ಅಪ್ ಆದರು. ಆ ನಂತರ ಪುನಃ ನ್ಯೂಸ್ ಚಾನೆಲ್ ಗಳಲ್ಲಿ ಸುದ್ದಿವಾಚಕರಾಗಿದ್ದರು.
ಕೆಲವು ದಿನಗಳ ಹಿಂದೆ ಸದಾಶಿವನಗರದ ಪಬ್ ವೊಂದರಲ್ಲಿ ಕಿರಿಕ್ ಕೀರ್ತಿ ಮೇಲೆ ಕೆಲವರು ಕೈ ಮಾಡಿದ್ದರು. ಹಲ್ಲೆಗೆ ಪ್ರಮುಖ ಕಾರಣ ಏನೆಂದು ತಿಳಿದಿರಲಿಲ್ಲ. ಆದರೇ ಈಗ ಪ್ರಕರಣವನ್ನು ಭೇದಿಸಿರುವ ಸದಾಶಿವನಗರ ಪೋಲಿಸರು ಕಿರಿಕ್ ಕೀರ್ತಿ ಮೇಲೆ ಹಲ್ಲೆ ನಡೆಸಿದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಿರಿಕ್ ಕೀರ್ತಿ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದ ಅನಿಲ್,ವಿಜಯ್ ಹಾಗೂ ಅಜಯ್ ಮತ್ತು ಸಹಚರರನ್ನು ಪೋಲಿಸರು ಬಂಧಿಸಿದ್ದಾರೆ. ಈ ಘಟನೆಗೆ ಅಸಲಿ ಕಾರಣ ಸಹ ಈಗ ತಿಳಿದುಬಂದಿದೆ.
ಕಿರಿಕ್ ಕೀರ್ತಿ ಹಾಗೂ ಹಲ್ಲೇಕೋರರು ಪಬ್ ನಲ್ಲಿ ಅಕ್ಕಪಕ್ಕದ ಟೇಬಲ್ ಗಳಲ್ಲಿ ಕುಳಿತಿದ್ದರಂತೆ. ಆಗ ಆರೋಪಿ ಅನಿಲ್ ನನಗೆ ಕಿರಿಕ್ ಕೀರ್ತಿ ಚೆನ್ನಾಗಿ ಪರಿಚಯವಿದ್ದು ಅವರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಆಗ ಉಳಿದ ಸ್ನೇಹಿತರು ವಿಡಿಯೋ ಮಾಡಲು ಮುಂದಾದರಂತೆ. ಆಗ ಕೀರ್ತಿ ವಿಡಿಯೋ ಏಕೆ ಮಾಡುತ್ತಿದ್ದಿರೆಂದು ಪ್ರಶ್ನೆ ಮಾಡಿದಾಗ, ಮಾತಿಗೆ ಮಾತು ಬೆಳೆಯಿತಂತೆ. ಆಗ ಅನಿಲ್ ಅಲ್ಲಿಯೇ ಇದ್ದ ಬಿಯರ್ ಬಾಟಲಿಯಿಂದ ಕಿರಿಕ್ ಕೀರ್ತಿ ತಲೆ ಮೇಲೆ ಹಲ್ಲೆ ನಡೆಸಿದ್ದಾರೆಂದು ಗೊತ್ತಾಗಿದೆ. ಹಲ್ಲೇಕೋರರು ಯಾವುದೇ ಉದ್ದೇಶ ಪೂರಿತವಾಗಿ ಈ ಕೆಲಸ ಮಾಡಿಲ್ಲ, ಬದಲಾಗಿ ಕುಡಿದ ಅಮಲಿನಲ್ಲಿ ಈ ಕೆಲಸ ನಡೆದಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.