ಮದುವೆಯಾಗಬೇಕು ಎಂದರೆ ಒಂದು ಕಂಡೀಶನ್ ಹಾಕಿದ್ದರಂತೆ ಕತ್ರಿನಾ, ಇದನ್ನು ಒಪ್ಪಿಕೊಂಡ ಬಳಿಕವೇ ಮದುವೆಯಾಗಿದ್ದು, ಆ ಕಂಡೀಶನ್ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಈಗಾಗಲೇ ಬಾಲಿವುಡ್ ಚಿತ್ರರಂಗದ ಸೂಪರ್ ಜೋಡಿ ಗಳಾಗಿರುವ ಕತ್ರಿನಾ ಕೈಫ್ ಹಾಗೂ ವಿಕಿ ಕೌಶಲ್ ಮದುವೆಯಾಗಿ ಹಿಂದಿ ಚಿತ್ರರಂಗದ ಅಂಗಳದಲ್ಲಿ ಎಲ್ಲರೂ ಸಂತೋಷ ಪಡುವಂತೆ ಮಾಡಿದ್ದಾರೆ. ಮದುವೆಗೂ ಮುನ್ನ ಇಬ್ಬರು ಕೂಡ ಯಾವುದೇ ವಿಧವಾದಂತಹ ಸುಳಿವನ್ನು ಮದುವೆ ಕುರಿತಂತೆ ಎಲ್ಲೂ ಕೂಡ ನೀಡಿರಲಿಲ್ಲ. ಆದರೂ ಕೂಡ ಇವರಿಬ್ಬರ ಮದುವೆ ಕುರಿತಂತೆ ವಿಚಾರಗಳು ಲೀಕ್ ಆಗಿದ್ದವು. ಇನ್ನು ಕತ್ರಿನಾ ಕೈಫ್ ಅವರ ಆಪ್ತವಲಯದ ವ್ಯಕ್ತಿಯೊಬ್ಬರು ವಿಕ್ಕಿ ಕೌಶಲ್ ರವರನ್ನು ಮದುವೆ ಆಗುವ ಮುನ್ನ ಕತ್ರಿನಾ ಕೈಫ್ ರವರು ಒಂದು ಕಂಡೀಶನ್ ಹಾಕಿದ್ದರಂತೆ.
ಅದನ್ನು ವಿಕ್ಕಿ ಕೌಶಲ್ ರವರು ಒಪ್ಪಿ ನಡೆಸಿಕೊಟ್ಟ ಮೇಲೆಯೇ ಕತ್ರಿನಾ ಕೈಫ್ ರವರು ವಿಕಿ ಕೌಶಲ್ ಅವರನ್ನು ಮದುವೆಯಾಗಲು ಒಪ್ಪಿಕೊಂಡಿದ್ದರು ಎಂದುದಾಗಿ ಹೇಳುತ್ತಿದ್ದಾರೆ. ಹಾಗಿದ್ದರೆ ಆ ಕಂಡಿಶನ್ ಏನು ಎಂಬುದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ. ನಿಮಗೆಲ್ಲರಿಗೂ ತಿಳಿದಂತೆ ಕತ್ರಿನಾ ಕೈಫ್ ರವರು ಮೊದಲು ರಣಬೀರ್ ಕಪೂರ್ ಅವರೊಂದಿಗೆ ಪ್ರೇಮ ಸಂಬಂಧದಲ್ಲಿ ಇದ್ದರು. ಇದಾದ ನಂತರ ಇವರಿಬ್ಬರ ನಡುವೆ ಮನಸ್ತಾಪ ಮೂಡಿಬಂದು ಬ್ರೇಕಪ್ ಮಾಡಿಕೊಂಡಿದ್ದರು. ಇದರಿಂದಾಗಿ ಕತ್ರಿನಾ ಕೈಫ್ ರವರು ಸಾಕಷ್ಟು ಬೇಸರದಲ್ಲಿ ಇದ್ದರು. ಈ ಸಂದರ್ಭದಲ್ಲಿಯೇ ವಿಕ್ಕಿ ಕೌಶಲ್ ರವರ ಪರಿಚಯ ಕತ್ರಿನಾ ಕೈಫ್ ರವರಿಗೆ ಆಗಿ ಇವರಿಬ್ಬರು ಎರಡು ತಿಂಗಳುಗಳ ಕಾಲ ಜೊತೆಯಾಗಿ ಸುತ್ತಾಡುತ್ತಾರೆ.
ಈ ಸಂದರ್ಭದಲ್ಲಿಯೇ ವಿಕ್ಕಿ ಕೌಶಲ್ ರವರು ಕತ್ರಿನಾ ಕೈಫ್ ರವರನ್ನು ಮದುವೆಯಾಗಲು ಸಂಪೂರ್ಣವಾಗಿ ಒಪ್ಪಿಕೊಂಡಿರುತ್ತಾರೆ. ಆದರೆ ಈಗಾಗಲೇ ರಣಬೀರ್ ಕಪೂರ್ ಅವರ ಜೊತೆಗೆ ಬೇಸರವನ್ನು ಅನುಭವಿಸಿದ್ದ ಕತ್ರಿನಾ ಕೈಫ್ ರವರಿಗೆ ವಿಕ್ಕಿ ಕೌಶಲ್ ರವರನ್ನು ಒಪ್ಪಿಕೊಳ್ಳಲು ಕೆಲವು ಸಮಯ ಬೇಕಾಗಿತ್ತು. ಈ ಸಂದರ್ಭದಲ್ಲಿ ಕತ್ರಿನಾ ಕೈಫ್ ರವರು ನನಗೆ ನೀಡಿದಂತೆಯೇ ಪ್ರೀತಿ ಗೌರವಗಳನ್ನು ನನ್ನ ಕುಟುಂಬದವರಿಗೂ ಕೂಡ ನೀಡುವುದಾದರೆ ಮಾತ್ರ ನಿಮ್ಮನ್ನು ಮದುವೆಯಾಗುತ್ತೇನೆ ಎಂಬುದಾಗಿ ಷರತ್ತನ್ನು ವಿಧಿಸುತ್ತಾರೆ. ಇದಕ್ಕೆ ಒಪ್ಪಿ ದಂತಹ ವಿಕ್ಕಿ ಕೌಶಲ್ ರವರು ಮದುವೆ ಮನೆಯಲ್ಲಿ ಕೂಡ ಮೊದಲ ಬಾರಿಗೆ ಕತ್ರಿನಾ ಕೈಫ್ ಅವರ ಮನೆಯವರನ್ನು ನೋಡಿದರೂ ಕೂಡ ಹಲವಾರು ವರ್ಷಗಳಿಂದ ಪರಿಚಿತರು ಎನ್ನುವಂತೆ ಅತಿಯಾದ ಪ್ರೀತಿ ಗೌರವಗಳಿಂದ ಕಾಣುತ್ತಾರೆ. ಈ ವಿಚಾರವೇ ಇವರಿಬ್ಬರ ಮದುವೆಗೆ ಮೂಲ ದಾರಿ ಆಗಿದ್ದು ಎಂದರೆ ತಪ್ಪಾಗಲಾರದು.
Comments are closed.