ನಮಗೆಲ್ಲರಿಗೂ ಮಾಯಾಂಕ್ ಅಂದ್ರೆ ಇಷ್ಟ, ಆದರೆ ಮಾಯಾಂಕ್ ಗೆ ಕನ್ನಡದ ಯಾವ ಟಾಪ್ ನಟ ಇಷ್ಟ ಗೊತ್ತಾ?? ನಿಮ್ಮ ಫೇವರಿಟ್ ಕೂಡ ಇವರೇನಾ?
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯರಿಗೆ ತಂಡದಲ್ಲಿ ಹಲವಾರು ಜನ ಸ್ಟಾರ್ ಬ್ಯಾಟ್ಸ್ಮನ್ಗಳು ಇದ್ದಾರೆ. ಇಂದು ನಾವು ಮಾತನಾಡಲು ಹೊರಟಿರುವುದು ನಮ್ಮ ಕರ್ನಾಟಕ ಮೂಲದ ಅತ್ಯಂತ ಪ್ರತಿಭಾನ್ವಿತ ಆಟಗಾರ ಆಗಿರುವ ಮಯಾಂಕ್ ಅಗರ್ವಾಲ್ ಅವರ ಕುರಿತಂತೆ. ಮಯಾಂಕ್ ಅಗರ್ವಾಲ್ ರವರು ಕರ್ನಾಟಕ ಮೂಲದ ಆಟಗಾರರಾಗಿದ್ದು ಭಾರತೀಯ ಟೆಸ್ಟ್ ತಂಡದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುವ ಆಟಗಾರನಾಗಿ ಈಗಾಗಲೇ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.
ಇನ್ನು 2017 18 ನೇ ಸಾಲಿನ ರಣಜಿ ಪಂದ್ಯಗಳಲ್ಲಿ ಅತ್ಯಂತ ಹೆಚ್ಚು ರನ್ ಸ್ಕೋರ್ ಮಾಡಿರುವ ಆಟಗಾರನಾಗಿ ಕಾಣಿಸಿಕೊಂಡು ದಾಖಲೆಯನ್ನು ನಿರ್ಮಿಸಿದ್ದಾರೆ. ಇನ್ನು ಇವರು ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ತಂಡದಲ್ಲಿ ಕೂಡ ಆಡಿದ್ದಾರೆ. ಟೆಸ್ಟ್ನಲ್ಲಿ ಆಡೋಕೆ ಸೈ ಟಿ ಟ್ವೆಂಟಿಯಲ್ಲಿ ಬ್ಯಾಟ್ ಬೀಸೋಕೂ ಸೈ ನಮ್ಮ ಮಯಾಂಕ್ ಅಗರ್ವಾಲ್. ಇನ್ನು ಮಾಯಾಂಕ್ ಅಗರ್ವಾಲ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ಇತ್ತೀಚಿಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಶ್ನೋತ್ತರ ಚಟುವಟಿಕೆಯನ್ನು ಆಯೋಜಿಸಿದ್ದರು.
ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಮಯಾಂಕ್ ಅಗರ್ವಾಲ್ ರವರು ಉತ್ತರ ನೀಡುವ ಕಾರ್ಯವನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಯಾಂಕ್ ಅಗರ್ವಾಲ್ ರವರಿಗೆ ನೆಚ್ಚಿನ ನಟ ಯಾರು ಎಂದು ಕೇಳಿದಾಗ ಅವರು ನೀಡಿರುವ ಉತ್ತರವೇನು ಗೊತ್ತೆ. ಹೌದು ಗೆಳೆಯರೇ ಮಯಾಂಕ್ ಅಗರ್ವಾಲ್ ರವರಿಗೆ ನೆಚ್ಚಿನ ನಟ ಯಾರು ಎಂದು ಪ್ರಶ್ನೆ ಕೇಳಿದಾಗ ಅವರು ನೀಡಿರುವ ಉತ್ತರ ರಾಕಿಂಗ್ ಸ್ಟಾರ್ ಯಶ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಕನ್ನಡದ ಬಹು ಮೆಚ್ಚಿನ ಸ್ಟಾರ್ ಗಳಾಗಿರುವ ಕಿಚ್ಚ ಹಾಗೂ ಯಶ್ ನನ್ನ ನೆಚ್ಚಿನ ನಟರು ಎನ್ನುವುದಾಗಿ ಮಯಾಂಕ್ ಅಗರ್ವಾಲ್ ರವರು ಉತ್ತರಿಸಿದ್ದಾರೆ. ಈ ವಿಚಾರವನ್ನು ಕೇಳಿ ಕಿಚ್ಚ ಹಾಗೂ ಯಶ್ ಅಭಿಮಾನಿಗಳಲ್ಲಿ ಸಂತೋಷದ ಮನೆ ಮಾಡಿರುವುದಂತೂ ಸುಳ್ಳಲ್ಲ.
Comments are closed.