ಪ್ರತಿಯೊಬ್ಬರ ಮನೆಯ ಮಹಿಳೆಯರು ಈ ವಿಚಾರಗಳನ್ನು ಅನುಸರಿಸಲೇಬೇಕು, ಇಲ್ಲವಾದಲ್ಲಿ ಕಷ್ಟ ಕಟ್ಟಿಟ್ಟ ಬುತ್ತಿ. ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಪೂರ್ವಜರು ಪುರಾತನಕಾಲದ ಗ್ರಂಥಗಳಲ್ಲಿ ಹೇಗೆ ಇರಬೇಕು ಹೇಗೆ ಜೀವನವನ್ನು ನಡೆಸಬೇಕು ಎನ್ನುವುದರ ಕುರಿತಂತೆ ಸಾಕಷ್ಟು ಪುಸ್ತಕಗಳಲ್ಲಿ ಬರೆದಿಟ್ಟಿದ್ದಾರೆ. ಅದರಲ್ಲಿರುವ ಅಂಶಗಳನ್ನು ಪಾಲಿಸಿದರೆ ಜೀವನ ಸುಖಮಯವಾಗಿರುತ್ತದೆ ಎಂಬುದು ಈಗಾಗಲೇ ಹಲವಾರು ಬಾರಿ ಹಲವಾರು ಜನರ ಮೂಲಕ ಸಾಬೀತಾಗಿದೆ. ಇನ್ನು ಅವಗಳಲ್ಲಿ ಗರುಡಪುರಾಣ ಕೂಡ ಒಂದು. ಇಂದು ನಾವು ಹೇಳಹೊರಟಿರುವ ವಿಷಯ ಕೂಡ ಗರುಡ ಪುರಾಣದಲ್ಲಿ ಉಲ್ಲೇಖವಾಗಿರೋದು. ಕೆಲವೊಂದು ವಿಚಾರಗಳನ್ನು ಮದುವೆ ಆಗಿರುವ ಹೆಂಗಸರು ಮಾಡಬಾರದಂತೆ.
ಇದರಿಂದಾಗಿ ಅವರ ಗಂಡಂದಿರು ಸಾಕಷ್ಟು ಕಷ್ಟವನ್ನು ಪಡುತ್ತಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತವೆ. ಹಾಗಿದ್ದರೆ ಯಾವ ಕೆಲಸಗಳನ್ನು ಮದುವೆ ಆಗಿರುವ ಹೆಂಗಸರು ಮಾಡಬಾರದು ಎಂಬುದರ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ. ದೂರವಿರ ಬಾರದು ಮದುವೆ ಆದಮೇಲೆ ಗಂಡನಿಂದ ಹೆಚ್ಚು ಕಾಲ ದೂರವಿರ ಬಾರದು. ಇದರಿಂದಾಗಿ ಹೆಣ್ಣಿನ ಮೇಲೆ ಸಮಾಜ ನೋಡುವ ದೃಷ್ಟಿ ಕೂಡ ಬೇರೆಯಾಗಿರುತ್ತದೆ. ಅಷ್ಟು ಮಾತ್ರವಲ್ಲ ದೈಹಿಕ ಹಾಗೂ ಮಾನಸಿಕ ತೊಂದರೆಗಳನ್ನು ಕೂಡ ಅನುಭವಿಸುತ್ತೀರಿ. ಕೆಟ್ಟವರ ಸಂಗ ಮದುವೆ ಆಗಿರುವ ಮಹಿಳೆಯರು ಯಾವುದೇ ಕೆಟ್ಟವರ ಸಂಗವನ್ನು ಮಾಡಬಾರದು. ಅಂಥವರ ಸಂಗ ನಿಮಗೆ ಮುಂದಿನ ದಿನಗಳಲ್ಲಿ ಸಾಕಷ್ಟು ನಷ್ಟವನ್ನು ಉಂಟು ಮಾಡಬಹುದು.
ಗೌರವ ಪ್ರತಿಯೊಬ್ಬರನ್ನು ಕೂಡ ಮದುವೆ ಆಗಿರುವ ಸ್ತ್ರೀಯರು ಗೌರವದಿಂದ ಕಾಣಬೇಕು ಹಾಗೂ ಮುಖ್ಯವಾಗಿ ಗಂಡನಿಗೆ ಗೌರವ ನೀಡುವುದನ್ನು ಕಲಿಯಬೇಕು. ಇನ್ನು ಸದಾಕಾಲ ಮನೆಯಲ್ಲಿ ಗಂಡನೊಂದಿಗೆ ಇರುವುದನ್ನು ರೂಢಿಸಿಕೊಳ್ಳಬೇಕು. ಗುರುಹಿರಿಯರಿಗೆ ಗೌರವ ನೀಡಿ ನೆರೆಹೊರೆಯವರೊಂದಿಗೆ ಪ್ರೀತಿಯನ್ನು ಗಳಿಸಿಕೊಂಡು ಕುಟುಂಬದ ಗೌರವವನ್ನು ಕಾಪಾಡಿಕೊಳ್ಳುವಂತ ಹೆಣ್ಣಾಗಬೇಕು. ಇನ್ನು ಪ್ರತಿದಿನ ಸಂಜೆ ತುಳಸಿಕಟ್ಟೆಗೆ ದೀಪವನ್ನು ಇಡುವ ಸಂಸ್ಕೃತಿಯನ್ನು ರೂಡಿಸಿಕೊಳ್ಳಲು.
Comments are closed.