ಬಿಗ್ ನ್ಯೂಸ್: ಬಾಹುಬಲಿಯಲ್ಲಿ ಸುದೀಪ್ ರವರನ್ನು ಯಾಕೆ ಆಯ್ಕೆ ಮಾಡಲಾಯಿತು ಗೊತ್ತೇ?? ಕೊನೆಗೂ ತೆರೆ ಹಿಂದೆ ನಡೆದ ಕಾರಣ ಬಯಲು.
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಅದ್ಭುತ ನಟರಲ್ಲಿ ನಮಗೆ ಮೊದಲ ತಾಣದಲ್ಲಿ ಕಾಣಸಿಗುವುದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು. ಮೊದಲಿನಿಂದಲೂ ಕೂಡ ಪ್ರತಿಭಾವಂತ ಕಲಾವಿದರಾಗಿದ್ದ ಕಿಚ್ಚ ಸುದೀಪ್ ರವರ ಪ್ರತಿಭೆಯನ್ನು ಮೊದಲ ಬಾರಿಗೆ ಇಡೀ ಜಗತ್ತಿಗೆ ತೋರಿಸಿದ್ದು ರಾಜಮೌಳಿಯವರು ಎಂದರೆ ತಪ್ಪಾಗಲಾರದು.
ಈಗ ಚಿತ್ರದ ಮೂಲಕ ರಾಜಮೌಳಿ ಅವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ನಿಜವಾದ ಅಭಿನಯವನ್ನು ಇಡೀ ಪ್ರಪಂಚಕ್ಕೆ ಪ್ರಸ್ತುತಪಡಿಸುತ್ತಾರೆ. ಇನ್ನು ಇತ್ತೀಚಿಗಷ್ಟೇ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡದ ಜೊತೆಗೆ ರಾಜಮೌಳಿ ಅವರು ಬೆಂಗಳೂರಿಗೆ ಬಂದಿದ್ದರು. ಇದೇ ಜನವರಿ 7ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವ ಆರ್ ಆರ್ ಆರ್ ಚಿತ್ರದ ಕುರಿತಂತೆ ಮಾಧ್ಯಮ ಮಿತ್ರರೊಂದಿಗೆ ರಾಜಮೌಳಿ ಹಾಗೂ ಚಿತ್ರತಂಡ ಸಾಕಷ್ಟು ವಿಚಾರಧಾರೆಗಳನ್ನು ಹಂಚಿಕೊಂಡಿದೆ. ಇನ್ನು ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ರವರನ್ನು ಬಾಹುಬಲಿ ಚಿತ್ರಕ್ಕೆ ಹಾಕಿಕೊಂಡಿದ್ದ ಕ್ಕೆ ಕಾರಣ ಏನೆಂಬುದನ್ನು ಸುದ್ದಿವಾಹಿನಿಯ ಪ್ರತಿನಿಧಿಗಳು ಕೇಳಿದಾಗ ರಾಜಮೌಳಿ ಅವರು ನೀಡಿದ ಉತ್ತರ ಸ್ವಾರಸ್ಯಕರವಾಗಿತ್ತು.
ಅದೇನೆಂದರೆ ಸಂದರ್ಶಕರು ಈಗ ಹಾಗೂ ಬಾಹುಬಲಿ ಚಿತ್ರದ ನಂತರ ಕನ್ನಡಿಗರು ನಿಮ್ಮ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆರ್ ಆರ್ ಆರ್ ಚಿತ್ರದಲ್ಲಿ ಕೂಡ ಕಿಚ್ಚ ಸುದೀಪ್ ರವರನ್ನು ನಿರೀಕ್ಷೆ ಮಾಡಿದ್ದರು ಎಂದು ಕೇಳುತ್ತಾರೆ. ಅದಕ್ಕೆ ಉತ್ತರಿಸುವ ರಾಜಮೌಳಿಯವರು ಬಾಹುಬಲಿ ಚಿತ್ರಕ್ಕೆ ಒಂದು ಪಾತ್ರದಲ್ಲಿ ನಡೆಸಲು ನನಗೆ ಕಲಾವಿದರು ಬೇಕಿದ್ದರು. ಆ ಸಂದರ್ಭದಲ್ಲಿ ಕಿಚ್ಚ ಸುದೀಪ್ ರವರ ನೆನಪಿಗೆ ಬಂದರು ಹಾಗೂ ಅವರು ನನ್ನ ಆತ್ಮೀಯ ಸ್ನೇಹಿತ ರಲ್ಲಿ ಒಬ್ಬರಾಗಿದ್ದರು ಚಿತ್ರದಲ್ಲಿರುವ ಈ ಪಾತ್ರವನ್ನು ಮಾಡುತ್ತೀರಾ ಎಂಬುದಾಗಿ ಕೇಳಿದೆ ಅವರು ಕೂಡ ಒಪ್ಪಿಕೊಂಡಿದ್ದರು. ಯಾವುದೇ ಪ್ರಚಾರಕ್ಕಾಗಿ ಅಥವಾ ಅವರಿಂದ ಒಳ್ಳೆಯ ಗಳಿಕೆ ಆಗುತ್ತದೆ ಎಂಬ ಹಣದಾಸೆಗಾಗಿ ನಾನು ಅವರನ್ನು ಹಾಕಿಕೊಂಡಿಲ್ಲ ಪಾತ್ರಕ್ಕೆ ಅವರು ಸರಿಹೊಂದುತ್ತಾರೆ ಎಂಬ ದೃಷ್ಟಿಯನ್ನು ಇಟ್ಟುಕೊಂಡು ಅವರನ್ನು ಆಯ್ಕೆ ಮಾಡಿದೆ ಎಂಬುದಾಗಿ ಹೇಳುತ್ತಾರೆ.
Comments are closed.