ಹನಿಮೂನ್ ಮುಗಿಸಿ ಬಂದ ತಕ್ಷಣ ಹೆಂಡತಿ ಕತ್ರಿನಾ ಬಗ್ಗೆ ವಿಕ್ಕಿ ಕೌಶಲ್ ಗೆ ಚಿಂತೆ ಆರಂಭ. ಏನು ಮಾಡುವುದು ಎಂದು ತಿಳಿಯುತ್ತಿಲ್ಲ ಎಂದ ವಿಕ್ಕಿ. ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ಸೂಪರ್ ಜೋಡಿ ಗಳಾಗಿರುವ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಮದುವೆ ಮಾತ್ರ ಭರ್ಜರಿಯಾಗಿ ನಡೆದಿದ್ದು ಇದರ ವಿಡಿಯೋವನ್ನು ಪ್ರಸಿದ್ಧ ಓಟಿಟಿ ಕಂಪನಿಗೆ 100 ಕೋಟಿ ಮೊತ್ತಕ್ಕೆ ಸೇಲ್ ಮಾಡಿದ್ದಾರೆ ಎಂಬುದಾಗಿ ಸುದ್ದಿಗಳು ಕೂಡ ಕೇಳಿ ಬರುತ್ತಿದೆ. ಇನ್ನು ಇವರಿಬ್ಬರ ಮದುವೆಗೆ ಕೂಡ ಸಾಕಷ್ಟು ದೊಡ್ಡಮಟ್ಟದ ಭದ್ರತೆಗಳನ್ನು ಹಾಕಲಾಗಿತ್ತು.
ಮದುವೆಗಾಗಿ ವಿದೇಶದಿಂದ ಕತ್ರಿನಾ ಕೈಫ್ ರವರ ಸಾಕಷ್ಟು ಕುಟುಂಬಸ್ಥರು ಕೂಡ ಆಗಮಿಸಿದ್ದರು. ಇವರಿಬ್ಬರ ಮದುವೆಯ ಪ್ರತಿಯೊಂದು ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಂದರಲ್ಲಿ ಕಾಣಸಿಗುತ್ತಿವೆ. ಅಷ್ಟರಮಟ್ಟಿಗೆ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ಮದುವೆಯನ್ನು ಇಡೀ ಭಾರತಕ್ಕೆ ಭಾರತವೇ ನೋಡಿ ಸಂಭ್ರಮಪಟ್ಟಿದೆ. ಇನ್ನು ಇಬ್ಬರು ನವ ವಧುವರರಿಗೆ ವೈವಾಹಿಕ ಜೀವನ ಶುಭಕರವಾಗಲಿ ಎಂಬುದಾಗಿ ಹಾರೈಸಿದ್ದಾರೆ. ಇನ್ನು ಇದರ ನಡುವೆ ಈಗ ವಿಕಿ ಕೌಶಲ್ ರವರಿಗೆ ತಮ್ಮ ಪತ್ನಿ ಕತ್ರಿನಾ ಕುರಿತಂತೆ ಚಿಂತೆಯೊಂದು ಆರಂಭವಾಗಿದೆ.
ಹೌದು ಈಗಾಗಲೇ ಹನಿಮೂನ್ ಮುಗಿಸಿಕೊಂಡು ಇಬ್ಬರು ದಂಪತಿಗಳು ಕೂಡ ಈಗಾಗಲೇ ಮುಂಬೈ ಗೆ ಮರಳಿದ್ದಾರೆ. ಸಾಕಷ್ಟು ಸಿನಿಮಾ ಆಫರ್ ಗಳು ಕತ್ರಿನಾ ಕೈಫ್ ರವರಿಗೆ ಈಗಾಗಲೇ ಬಂದಿದ್ದು ಹಾಗೂ ಬರುತ್ತಿದ್ದು ಅದನ್ನು ಹೇಗೆ ಮ್ಯಾನೇಜ್ ಮಾಡುತ್ತಾರೆ ಎಂಬುದರ ಕುರಿತಂತೆ ವಿಕಿ ಕೌಶಲ್ ಗೆ ಚಿಂತೆ ಆರಂಭವಾಗಿದೆ. ಹೌದು ಸಿನಿಮಾದಲ್ಲಿ ಕೆಲಸ ಮಾಡುತ್ತಾ ತನ್ನ ಪತ್ನಿ ಆರೋಗ್ಯವನ್ನು ಕೆಡಿಸಿಕೊಳ್ಳಬಾರದು ಎಂಬ ಚಿಂತೆ ವಿಕ್ಕಿ ಕೌಶಲ್ ರವರಿಗೆ ಕಾಡುತ್ತಿದ್ದು ಇದಕ್ಕಾಗಿಯೇ ಸ್ವಲ್ಪಮಟ್ಟಿಗೆ ತಲೆಕೆಡಿಸಿಕೊಂಡಿದ್ದಾರೆ. ಇಬ್ಬರೂ ಚಿತ್ರರಂಗದಲ್ಲಿ ಇರುವುದರಿಂದಾಗಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಸಂಸಾರ ಹಾಗೂ ಸಿನಿಮಾ ಎರಡನ್ನೂ ಕೂಡ ನಿಭಾಯಿಸಬಹುದು ಎಂದು ಎಲ್ಲರೂ ಅಂದಾಜು ಮಾಡಿದ್ದಾರೆ.
Comments are closed.