ಮೊದಲು ದುಬಾರಿ ಐಷಾರಾಮಿ ಬಟ್ಟೆ ಧರಿಸುತ್ತಿದ್ದ ಪುನೀತ್, ಇದ್ದಕ್ಕಿದ್ದ ಹಾಗೆ ಸಿಂಪಲ್ ಬಟ್ಟೆಯನ್ನು ಧರಿಸಲು ಪ್ರಾರಂಭಿಸಿದ್ದೇಕೆ ಗೊತ್ತಾ??
ನಮಸ್ಕಾರ ಸ್ನೇಹಿತರೇ ನಮ್ಮೆಲ್ಲರ ನೆಚ್ಚಿನ ರಾಜರತ್ನ ಅಪ್ಪು ಅವರನ್ನು ಕಳೆದುಕೊಂಡು ಈಗಾಗಲೇ 50 ದಿನಗಳು ಕಳೆಯುತ್ತಾ ಬಂದರೂ ಕೂಡ ಇಂದಿಗೂ ಅವರು ನಮ್ಮೊಂದಿಗೆ ಇದ್ದಾರೆ ಎಂಬ ಭಾವನೆ ಮನಸ್ಸಿನಿಂದ ಬಿಟ್ಟು ಹೋಗುತ್ತಿಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಜನ ನಾಯಕನಾಗಿದ್ದರು. ಅಭಿಮಾನಿಗಳೆಂದರೆ ದೇವರು ಎಂದು ತಮ್ಮ ತಂದೆಯಂತೆ ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುತ್ತಿದ್ದರು.
ಪ್ರತಿಯೊಂದು ಸಿನಿಮಾದ ಕೂಡ ಜನರಿಗೆ ಉಪಯುಕ್ತವಾಗುವಂತಹ ಸಾಮಾಜಿಕ ಸಂದೇಶಗಳನ್ನು ನೀಡುತ್ತಿದ್ದರು. ಕಷ್ಟ ಎಂದು ಬಂದವರಿಗೆ ತಮ್ಮ ಕೈಲಾದಷ್ಟು ಅಥವಾ ತಮ್ಮ ಕೈಗೂ ಮೀರಿ ಸಹಾಯ ಮಾಡುತ್ತಿದ್ದರು. ತಾನಾಯಿತು ತನ್ನ ಕೆಲಸವಾಯಿತು ಎಂದು ಸ್ವಾರ್ಥ ವಾಗಿರುವ ಈ ದುನಿಯಾದಲ್ಲಿ ತಮಗೆ ಸಂಬಂಧ ಇಲ್ಲದವರಿಗೂ ಕೂಡ ಕಷ್ಟದಲ್ಲಿ ಇದ್ದಾರೆ ಎಂದು ತಿಳಿದರೆ ಅವರು ಕೂಡಲೇ ಧಾವಿಸಿ ಸಹಾಯ ಮಾಡುತ್ತಿದ್ದರು. ಇನ್ನು ಒಂದು ಕಾಲದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು 60 ಸಾವಿರ ಮೌಲ್ಯದ ಜೀನ್ಸ್ ಪ್ಯಾಂಟ್ ಗಳನ್ನು ದುಬಾರಿ ವಾಚ್ ಹಾಗೂ ಇತರೆ ವಸ್ತುಗಳನ್ನು ಧರಿಸುತ್ತಿದ್ದರು. ಆದರೆ ಒಮ್ಮೆಲೇ ನಂತರದ ದಿನಗಳಲ್ಲಿ ಪುನೀತ್ ರಾಜಕುಮಾರ್ ಅವರು ಸಿಂಪಲಾಗಿ ಬಟ್ಟೆ ಧರಿಸಲು ಕಾರಣವೇನು ಗೊತ್ತಾ ಅದರ ಹಿಂದಿರುವ ಸ್ಟೋರಿಯನ್ನು ಇಂದು ನಾವು ನಿಮಗೆ ವಿವರವಾಗಿ ಹೇಳಲಿದ್ದೇವೆ.
ಒಂದು ಸಮಾರಂಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ದುಬಾರಿ ಬೆಲೆಯ ಬಟ್ಟೆ ಹಾಗು ವಸ್ತುಗಳನ್ನು ಧರಿಸಿಕೊಂಡು ಹೋಗಿದ್ದರು. ಅಲ್ಲಿ ಅವರ ಅಭಿಮಾನಿ ಕೂಡ ಒಬ್ಬ ಮಾತನಾಡಿಸಲು ಬಂದಿದ್ದ. ಅವನು ಕೂಡ ಅಪ್ಪುವಿನಂತೆ ಬಟ್ಟೆಯನ್ನು ಧರಿಸಿದ. ಅದರಿಂದಾಗಿ ಪುನೀತ್ ರಾಜಕುಮಾರ್ ಅವರು ಅವರ ಅಭಿಮಾನಿಗಳು ಕೂಡ ಅವರಂತೆಯೇ ಬಟ್ಟೆ ಧರಿಸಲು ಇಷ್ಟಪಡುತ್ತಾರೆ. ಅವರ ಬಳಿ ದುಡ್ಡು ಇರುತ್ತದೋ ಇಲ್ಲವೋ ಆದರೂ ಕೂಡ ಪುನೀತ್ ರಾಜಕುಮಾರ್ ರವರಂತೆ ಕಾಣಿಸಿಕೊಳ್ಳಬೇಕೆಂಬುದಾಗಿ ಹಂಬಲಿಸುತ್ತಾರೆ ಎಂಬ ಕಾರಣಕ್ಕಾಗಿಯೇ ಪುನಿತ್ ರಾಜಕುಮಾರ್ ನಂತರದ ದಿನಗಳಿಂದ ಸಾಮಾನ್ಯ ಬಟ್ಟೆಗಳನ್ನು ತೊಡಲು ಪ್ರಾರಂಭಿಸುತ್ತಾರೆ. ಇದು ಪುನೀತ್ ರವರ ಚಿನ್ನದ ವ್ಯಕ್ತಿತ್ವಕ್ಕೆ ಉತ್ತಮ ಉದಾಹರಣೆ.
Comments are closed.