ಮಗುವಿನ ಕೈಗೆ ಮೊಬೈಲ್ ಬದಲು ಆಟಿಕೆ ಕೊಟ್ಟರು, ಅದರಿಂದ ಮಗು ಯಾವಸ್ಥಿತಿಗೆ ತಲುಪಿದೆ ಗೊತ್ತೇ?? ಮಕ್ಕಳ ಕೈಗೆ ಮೊಬೈಲ್ ಕೊಡುವ ಪೋಷಕರೇ ಏನಾಗಿದೆ ನೋಡಿ.
ನಮಸ್ಕಾರ ಸ್ನೇಹಿತರೇ ಮೊಬೈಲ್ ಎಂಬುದು ಇಂದಿನ ಆಧುನಿಕ ಜೀವನದಲ್ಲಿ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿ ಸೇರಿಹೋಗಿದೆ. ಒಂದೊತ್ತು ಊಟ ಇಲ್ಲದಿದ್ದರು ಪರವಾಗಿಲ್ಲ. ಆದರೆ ಅರೆ ಕ್ಷಣ ಮೊಬೈಲ್ ಬಿಟ್ಟು ಇರಲು ಮಾತ್ರ ಸಾಧ್ಯವಾಗಲ್ಲ ಎಂಬಂತಹ ಜೀವನ ಶೈಲಿ ರೂಢಿಯಾಗಿದೆ. ಹಿಂದೆ ಮಕ್ಕಳಿಗೆ ಊಟ ಮಾಡಿಸಿಬೇಕಾದರೆ ಆಕಾಶದಲ್ಲಿ ಚಂದ್ರನನ್ನ ತೋರಿಸಿ ಹಠ ಮಾಡುತ್ತಿದ್ದ ಮಗುವನ್ನ ನಲಿಸಿ ಊಟ ಮಾಡಿಸುತ್ತಿದ್ದರು ಪೋಷಕರು. ಆದರೆ ಮಕ್ಕಳು ಗಲಾಟೆ ತುಂಟತನ ಮಾಡಿದರೆ ಅವುಗಳಿಗೆ ಮೊಬೈಲ್ ಕೊಟ್ಟು ಸುಮ್ಮನಿರಿಸುತ್ತಿದ್ದಾರೆ.
ಈ ಒಂದು ವಿಚಿತ್ರ ನಡವಳಿಕೆ ಆ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದಕ್ಕೆ ಇತ್ತೀಚೆಗೆ ಒಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಹೌದು ಸದಾ ಕೆಲಸ ದುಡಿಮೆ ಎಂದು ಒತ್ತಡದಲ್ಲಿರುವ ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುವುದನ್ನೇ ಮರೆತು ಬಿಟ್ಟಿರುತ್ತಾರೆ. ಮಕ್ಕಳು ಏನು ಮಾಡುತ್ತಾರೆ, ಅವರ ಆರೋಗ್ಯ ಮನಸ್ಥಿತಿ ಹೇಗಿದೆ ಎಂಬುದನ್ನ ತಿಳಿಯುವ ವ್ಯವಧಾನಕ್ಕೂ ಕೂಡ ಸಮಯವಾಗುವುದಿಲ್ಲ.
ಒಂದೆಡೆ ಕೊರೋನಾ ವೈರಸ್ ನಿಂದಾಗಿ ದೇಶದಲ್ಲಿ ನೂರಾರು ಮಕ್ಕಳು ಉಸಿರಾಟದ ಸಮಸ್ಯೆಯಿಂದಾನೆ ನಿಧನರಾದವು. ಆದರೆ ಇದು ವೈರಸ್ ನಿಂದ ಊಹಿಸಿಕೊಳ್ಳಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿ ಮನುಷ್ಯನಿಗಿರುವ ಎಲ್ಲಾ ರೀತಿಯ ಅವಕಾಶಗಳನ್ನ ಮೀರಿ ಇಂತಹ ಅನಾಹುತಗಳು ಗತಿಸಿ ಹೋದವು. ಇದೇ ಸಂಧರ್ಭದಲ್ಲಿ ಮತ್ತೊಂದು ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಎಂಬ ಭೂತವೊಂದು ಮಕ್ಕಳ ಕೈಗೆ ಹೊಕ್ಕಿತು ಎನ್ನಬಹುದು. ಹೌದು ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಯಿತು.
ಆದರೆ ಶಾಲೆಗೆ ಮಾತ್ರ ರಜೆ ನೀಡಿ ಶಿಕ್ಷಕರಿಗೆ ಮನೆಯಿಂದಾನೇ ಮಕ್ಕಳಿಗೆ ಆನ್ಲೈನ್ ಮೂಲಕ ಪಾಠ ಮಾಡಲು ಶಿಕ್ಷಣ ಇಲಾಖೆ ಆದೇಶ ಮಾಡಿತ್ತು. ಈಗ ಮಕ್ಕಳು ಆನ್ಲೈನ್ ಪಾಠ ಕೇಳಬೇಕು ಅಂದರೆ ಮೊಬೈಲ್ ಅತ್ಯಗತ್ಯವಾಯಿತು. ಪೋಷಕರು ಮಕ್ಕಳಿಗೆ ಮೊಬೈಲ್ ಕೊಟ್ಟು ಪಾಠ ಕೇಳಲು ಒಂದೆಡೆ ಕೂರಿಸಿದರು. ಪಾಠ ತಾನೇ ಎಷ್ಟೊತ್ತು ಅಂತ ಇರುತ್ತೆ. ಈ ಪಾಠ ಎಲ್ಲಾ ಮುಗಿದ ಮೇಲೆ ಮಕ್ಕಳು ಮೊಬೈಲ್ ನಲ್ಲಿ ಎಷ್ಟು ಸಮಯ ಕಾಲ ಕಳೆಯುತ್ತವೆ ಎಂಬುದನ್ನ ಯಾರೂ ಕೂಡ ಗಮನಿಸಿರುವುದಿಲ್ಲ.
ಮಕ್ಕಳು ಯಾವಾಗ ಹೆಚ್ಚು ಹೊತ್ತು ಮೊಬೈಲ್ ಗೆ ಅಡಿಕ್ಟ್ ಆಗ್ತಾ ಹೋದರೋ ಅವಾಗಿಂದ ಅವರಿಗೆ ತಮ್ಮ ಬದುಕಿನ ಅವಿಭಾಜ್ಯವಾಗಿ ಮೊಬೈಲ್ ಗಳು ಮಕ್ಕಳನ್ನ ಮಾನಸಿಕವಾಗಿ ಆವರಿಸಿಕೊಳ್ಳುತ್ತಾ ಹೋಯಿತು. ಇದೇ ರೀತಿಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ತಾಯಿ, ಖಾಸಗಿ ಕಂಪನಿಯಲ್ಲಿ ತಂದೆ. ಈ ದಂಪತಿಗಳಿಗೆ ತಮ್ಮ ಮಗುವಿನ ಮೇಲೆ ಅಷ್ಟಾಗಿ ಕಾಳಜಿ ಇರಲಿಲ್ಲವೇನೋ. ದಿನಪೂರ್ತಿ ಕೆಲಸ ಕೆಲಸ ಎಂದು ತಮ್ಮ ಮಗುವಿನ ಬಗ್ಗೆ ಗಮನ ಹರಿಸುವುದು ಕಡಿಮೆ ಆಗಿದೆ.
ಮಗಳು ಆನ್ಲೈನ್ ಕ್ಲಾಸ್ ಕೇಳಲು ಎಂದು ಮೊಬೈಲ್ ಕೊಡಿಸಿದ್ದರು. ಆನ್ಲೈನ್ ಕ್ಲಾಸ್ ಮುಗಿದ ನಂತರವೂ ಕೂಡ ಮಗಳು ಸಂಪೂರ್ಣವಾಗಿ ಮೊಬೈಲ್ ಅಡಿಕ್ಷನ್ ಗೆ ಒಳಗಾಗಿದ್ದಳು. ಇದು ವ್ಯಾಪಕ ಪ್ರಭಾವ ಬೀರಿ ನಿದ್ದೆಯಲ್ಲಿಯೂ ಕೂಡ ತನ್ನ ಮೊಬೈಲ್ ಬಳಸುತ್ತಿರುವಂತೆ ವರ್ತಿಸಲು ಆರಂಭಿಸಿದ್ದಾಳೆ. ಇದೀಗ ಈ ವರ್ತನೆ ಪಿಟ್ಸ್ ರೋಗ ಕಾಣಿಸಿಕೊಳ್ಳಲು ಕಾರಣವಾಗಿದೆ. ಪ್ರತಿ ದಿನ ಹೆಚ್ಚು ಹೊತ್ತು ಮೊಬೈಲ್ ಬಳಸುವುದರಿಂದ ಮೆದುಳಿಗೆ ಹೈಪರ್ ಸಿಮ್ಯೂಲೇಶನ್ ಆಗಿ ಮೆದುಳು ಡ್ಯಾಮೇಜ್ ಆಗಿದೆಯಂತೆ. ಇದೀಗ ತಮ್ಮ ಪುಟ್ಟ ಮಗಳ ಪರಿಸ್ಥಿತಿ ಕಂಡು ಪೋಷಕರು ದಿನಂಪ್ರತಿ ಕೊರಗುತ್ತಿದ್ದಾರೆ.
Comments are closed.