Neer Dose Karnataka
Take a fresh look at your lifestyle.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮಕ್ಕಳ ಡ್ಯಾನ್ಸ್ ವಿಡಿಯೋ ಫುಲ್ ವೈರಲ್, ಹೇಗಿದೆ ಗೊತ್ತೇ?? ಸಕತ್ ಸ್ಟೆಪ್ಸ್ ಹಾಕಿರುವ ಮಕ್ಕಳು.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಎಲ್ಲರೊಂದಿಗೆ ಕೂಡ ಸರಳವಾಗಿ ವಿನಮ್ರವಾಗಿ ಮಾತನಾಡಿಕೊಂಡಿದ್ದರು. ಕನ್ನಡ ಚಿತ್ರರಂಗದ ಅಜಾತಶತ್ರು ಎಂಬ ಪಟ್ಟವನ್ನು ಕೂಡ ಪುನೀತ್ ರಾಜಕುಮಾರ್ ಅವರು ಪಡೆದುಕೊಂಡಿದ್ದರು. ಅಪ್ಪು ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಕೂಡ ಅಚ್ಚುಮೆಚ್ಚು ಆಗಿದ್ದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಆಲ್-ರೌಂಡರ್ ನಟರಾಗಿದ್ದರು.

ಕನ್ನಡ ಚಿತ್ರರಂಗದ ನಟಸಾರ್ವಭೌಮ ನಾಗಿರುವ ಅಣ್ಣಾವ್ರ ಪ್ರತಿನಿಧಿಯಾಗಿ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಅವರ ಆದರ್ಶಗಳನ್ನು ಜನರಲ್ಲಿ ಹರಡುವ ಪ್ರಯತ್ನವನ್ನು ಕೂಡ ಮಾಡಿದ್ದರು. ಇನ್ನು ಪುನೀತ್ ರಾಜಕುಮಾರ್ ಅವರ ಫ್ಯಾಮಿಲಿ ವಿಷಯಕ್ಕೆ ಬಂದರೆ ಬೇರೆ ನಟರಂತೆ ಅಲ್ಲ. ಬೇರೆ ನಟರು ಸಿನಿಮಾ ಬಿಟ್ಟರೆ ತಮ್ಮ ಸ್ನೇಹಿತರಿಗೆ ಮಾತ್ರ ಸಮಯ ನೀಡುತ್ತಾರೆ. ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹಾಗಲ್ಲ ಸಿನಿಮಾದಲ್ಲಿ ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಪ್ರವಾಸಕ್ಕೆ ಹೋಗುತ್ತಿದ್ದರು.

ಇನ್ನು ಇತ್ತೀಚಿನದಿನಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮಕ್ಕಳು ಆಗಿರುವ ವಂದಿತ ಹಾಗೂ ದೃತಿ ರವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಹೌದು ಗೆಳೆಯರೇ ದೃತಿ ಹಾಗೂ ವಂದಿತ ರವರು ತಮ್ಮ ಸ್ನೇಹಿತರೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ ಅಪ್ಪು ಅಭಿಮಾನಿಗಳು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದ್ದು ತಪ್ಪದೇ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

Comments are closed.