ದಿನಸಿ ಅಂಗಡಿಯಲ್ಲಿ ನಡೆದಿರುವಂತಹ ಈ ಸತ್ಯ ಘಟನೆ ಕೇಳಿದರೆ ನಿಮ್ಮ ಕಣ್ಣಲ್ಲಿ ನೀರು ಬರುವುದು ಗ್ಯಾರಂಟಿ, ಮಹಿಳೆ ಮಾಡಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇಂದು ನಾವು ಮಾತನಾಡಲು ಹೊರಟಿರುವುದು ಒಂದು ನೈಜ ಘಟನೆಯ ಕುರಿತಂತೆ ಇದು ನಡೆದಿರುವುದು ತಮಿಳುನಾಡಿನಲ್ಲಿ. ತಮಿಳುನಾಡಿನಲ್ಲಿ ಸರವಣ ಎಂಬಾತ ತನ್ನ ದಿನಸಿ ಅಂಗಡಿಯಲ್ಲಿ ಬಂದಂತಹ ಲಾಭದಿಂದ ತನ್ನ ಕುಟುಂಬದೊಂದಿಗೆ ಖುಷಿಖುಷಿಯಾಗಿ ಇರುತ್ತಿದ್ದ. ಇನ್ನು ಇವನಿಗೆ ಮೂರು ಜನ ಮಕ್ಕಳಿದ್ದಾರೆ. ಇನ್ನೊಮ್ಮೆ ಆತ ಅಂಗಡಿಗೆ ಹೋದಾಗ 7 ವರ್ಷದ ಬಾಲಕನೊಬ್ಬ ಆತನ ಅಂಗಡಿಯ ಮುಂದೆ ಹರಿದ ಬಟ್ಟೆಗಳ ಸ್ಥಿತಿಯಲ್ಲಿ ಬಿಕ್ಷುಕನ ಹಾಗೆ ಕಾಣಿಸಿಕೊಂಡು ನಿಂತಿದ್ದ.
ಆತನನ್ನು ನೋಡಿದ ಸರವಣ ಯಾರಪ್ಪ ನೀನು ಎಂಬುದಾಗಿ ಕೇಳಿ ಹತ್ತು ರೂಪಾಯಿ ನೋಟನ್ನು ನೀಡಲು ಬರುತ್ತಾನೆ. ಆಗ ಆ ಹುಡುಗ ಅಣ್ಣ ನನಗೆ ಹಣ ಬೇಡ ಹೊಟ್ಟೆ ಹಸೀತಿದೆ ಏನಾದರೂ ತಿನ್ನಲು ಕೊಡಿ ಎಂದು ಕೇಳಿದಾಗ ಸರವಣ ಎರಡು ಬಿಸ್ಕೆಟ್ ಪ್ಯಾಕ್ ಗಳನ್ನು ನೀಡುತ್ತಾನೆ. ಅದು ತಿಂದಕ್ಷಣ ಇನ್ನಷ್ಟು ಬಿಸ್ಕೆಟ್ ಪ್ಯಾಕ್ ಹಾಗೂ ನೀರಿನ ಬಾಟಲನ್ನು ಸರವಣ ಆ ಮಗುವಿಗೆ ನೀಡುತ್ತಾನೆ. ನಮಗೂ ಬಿಸ್ಕೆಟ್ ಹಾಗೂ ನೀರನ್ನು ಕುಡಿದು ಖಾಲಿ ಮಾಡುತ್ತಾನೆ ನಂತರ ನಿಮ್ಮಿಂದ ಉಪಕಾರವಾಯಿತು ಬರುತ್ತೇನೆ ಎಂಬುದಾಗಿ ಹೇಳಿ ಹೊರಡುತ್ತಾನೆ. ಆಗ ಸರವಣ ಆ ಮಗುವಿಗೆ ಯಾರಪ್ಪ ನೀನು ನಿನಗೆ ತಂದೆ ತಾಯಿ ಇಲ್ಲವಾ ಯಾಕೆ ಭಿಕ್ಷೆ ಬೇಡುತ್ತಿ ಎಂಬುದಾಗಿ ಕೇಳುತ್ತಾನೆ. ಆಗ ಬಾಲಕ ತನ್ನ ಕಥೆಯನ್ನು ಹೇಳಲು ಆರಂಭಿಸುತ್ತಾನೆ.
ನನಗೆ ತಾಯಿ ಇಲ್ಲ. ನನ್ನ ಹೆಸರು ಬಾಬು ಎಂದು ನನ್ನನ್ನು ನನ್ನ ತಂದೆ ಸಾಕುತ್ತಿದ್ದರು ಈಗ ನನ್ನ ತಂದೆ ಕೂಡ ಕೆಲವು ದಿನಗಳ ಹಿಂದಷ್ಟೇ ನನ್ನನ್ನು ಬಿಟ್ಟು ಅಸುನೀಗಿದ್ದಾರೆ ಇದಕ್ಕಾಗಿ ಹೊಟ್ಟೆ ತುಂಬಿಸಿಕೊಳ್ಳಲು ನಾನು ಭಿಕ್ಷೆ ಬಿಡುತ್ತಿದ್ದೇನೆ ಎಂಬುದಾಗಿ ಹೇಳುತ್ತಾರೆ. ಈಗ ಎಲ್ಲಿ ಹೋಗುತ್ತಿದ್ದೀಯಾ ಎಂದು ಸರವಣ ಕೇಳಿದಾಗ ಎಲ್ಲಿಯಾದರೂ ಕೆಲಸ ಮಾಡಿಕೊಂಡು ಜೀವನ ನಡೆಸುತ್ತೇನೆ ನಾನು ಹೋಗುತ್ತೇನೆ ಎಂಬುದಾಗಿ ಹೇಳುತ್ತಾನೆ. ಅದಕ್ಕೆ ಸರವಣ ಇಷ್ಟು ಚಿಕ್ಕ ಹುಡುಗ ಎಲ್ಲಿ ಕೆಲಸ ಮಾಡುತ್ತಿ ನನ್ನ ಅಂಗಡಿಯಲ್ಲಿ ನನ್ನ ಜೊತೆಗೆ ಕೆಲಸ ಮಾಡಿಕೊಂಡು ಇದ್ದುಬಿಡು ಎಂದು ಹೇಳುತ್ತಾನೆ.
ಆಯ್ತು ಅಣ್ಣ ಎಂದು ಬಾಬು ಸರವಣ ನೊಂದಿಗೆ ಇರಲು ಒಪ್ಪಿಕೊಳ್ಳುತ್ತಾನೆ. ಇಷ್ಟು ಮಾತ್ರವಲ್ಲದೆ ಸರವಣ ತನ್ನ ಮನೆಗೆ ಹೋಗಿ ಹೆಂಡತಿ-ಮಕ್ಕಳಿಗೆ ಬಾಬು ಕುರಿತಂತೆ ಹೇಳಿ ಅಂದಿನಿಂದ ಬಾಬುವನ್ನು ತನ್ನ ಅಂಗಡಿಯಲ್ಲಿ ಇರಿಸಿಕೊಂಡು ತನ್ನ ಮನೆಯಲ್ಲಿ ಇರಲಿಕ್ಕೆ ಕೂಡ ಜಾಗ ನೀಡುತ್ತಾನೆ. ಸರವಣ ನೊಂದಿಗೆ ಬಾಬು ನಿಯತ್ತಿನಿಂದ ಕೆಲಸ ಮಾಡಿಕೊಂಡು ಇರುತ್ತಾನೆ. ಒಂದು ತಿಂಗಳು ಕಳೆಯಿತು ಸರವಣ ಬಾಬುವನ್ನು ಸಂಬಳ ನೀಡಲು ಕರೆಯುತ್ತಾನೆ. ಆಗ ನನಗೆ ನೀವು ಮೂರು ಹೊತ್ತು ಊಟ ನೀಡುತ್ತಿರುವುದೇ ಸಾಕು ಸಂಬಳ ಬೇಡ ಎನ್ನುವುದಾಗಿ ಬಾಬು ಹೇಳುತ್ತಾನೆ.
ಆದರೆ ಸರವಣ ಮಾತ್ರ ಬಾಬುವಿನ ಹಣವನ್ನು ಅಂದಿನಿಂದ ಆತ ಯುವಕ ಆಗುವವರೆಗೂ ಕೂಡ ಸಪರೇಟ್ ಆಗಿ ಎತ್ತಿ ಇಡುತ್ತಿದ್ದರು. ಯಾವತ್ತಾದರೂ ಆ ಹಣವನ್ನು ಬಾಬುವಿಗೆ ನೀಡಬೇಕೆಂದು ಸರವಣ ನಿರ್ಧರಿಸಿದ್ದರು. ಈಗ ಬಾಬು ಬೆಳೆದು 20 ವರ್ಷದ ಯುವಕ ನಾಗುತ್ತಾನೆ. ಇನ್ನೊಮ್ಮೆ ಬಾಬು ಸರವಣ ಬಳಿಗೆ ಬಂದು ಅಣ್ಣ ನಾನು ಚೆನ್ನೈ ಬೀಚ್ ನೋಡಿ ಬರಬೇಕು ಚೆನ್ನೈ ನಗರವನ್ನು ಸುತ್ತಾಡಿ ಬರಬೇಕು ಎಂಬುದಾಗಿ ಕೇಳುತ್ತಾನೆ. ಆಗ ಸರವಣಿ ಯಾಕೆ ಎಂಬುದಾಗಿ ಒಲ್ಲದ ಮನಸ್ಸಿನಿಂದ ಕೇಳುತ್ತಾನೆ. ಹಣ ಒಂದು ವಾರ ಹೋಗಿಬರುತ್ತೇನೆ ಎಂಬುದಾಗಿ ಸರವಣ ಬಳಿ ಹಣ ಇಸ್ಕೊಂಡು ಚೆನ್ನೈಗೆ ಹೋಗುತ್ತಾನೆ.
ಆದರೆ ಚೆನ್ನಾಗಿ ಹೋದ ಬಾಬು ಒಂದು ತಿಂಗಳಾದರೂ ಕೂಡ ಬಂದಿರುವುದಿಲ್ಲ. ಇದನ್ನು ನೋಡಲು ಸರವಣ ಚೆನ್ನೈಗೆ ತಾನೇ ಅಂಗಡಿಗೆ ರಜೆ ಮಾಡಿ ಹೋಗುತ್ತಾನೆ. ಆದರೆ ಎಲ್ಲೂ ಕೂಡ ಬಾಬು ಸಿಗುವುದಿಲ್ಲ ಬೇಸರದಿಂದ ಮತ್ತೆ ತನ್ನ ಅಂಗಡಿಗೆ ವಾಪಸ್ಸು ಬರುತ್ತಾನೆ. ಅದೇ ಸಂದರ್ಭದಲ್ಲಿ ಎದುರುಗಡೆ ಇದ್ದ ಅಂಗಡಿಯವನು ನನಗೆ ವ್ಯಾಪಾರ ಆಗುವುದಿಲ್ಲ ನೀನೇ ನನ್ನ ಅಂಗಡಿಯನ್ನು ಕೊಂಡುಕೋ ಎಂದು ಕೇಳುತ್ತಾನೆ ಆದರೆ ಬಾಬುವನ್ನು ಕಳೆದುಕೊಂಡಿರುವ ದುಃಖದಲ್ಲಿ ನನಗೆ ಬೇಡ ಎನ್ನುತ್ತಾನೆ.
ಅದೇ ಸಂದರ್ಭದಲ್ಲಿ ನಾರಾಯಣ ಎನ್ನುವ ಸಂಬಂಧಿತ ಸರಮಣನಿಗೆ ನನ್ನ ಸಂಬಂಧಿಯೊಬ್ಬರು ಪಾತ್ರೆಯನ್ನು ಕಡಿಮೆ ಬೆಲೆಯಲ್ಲಿ ಮಾರುತ್ತಾರೆ ನೀನು ಅದನ್ನು ಕೊಂಡು ಕೊಳ್ಳುತ್ತೀಯ ನೀನು ಹೆಚ್ಚಿನ ಬೆಲೆಗೆ ಮಾರಬಹುದು ಎಂಬುದಾಗಿ ಹೇಳುತ್ತಾರೆ. ಎದುರುಗಡೆ ಅಂಗಡಿ ಖಾಲಿ ಆಗುವುದಕ್ಕೂ ಈ ವ್ಯಾಪಾರ ಬರುವುದಕ್ಕೂ ಮ್ಯಾಚ್ ಯಿತು ಎಂಬುದಾಗಿ ಒಪ್ಪಿಕೊಳ್ಳುತ್ತಾನೆ. ಆದರೆ ಅದಕ್ಕೆ ಆತನ ಬಳಿ ಹಣವಿರಲಿಲ್ಲ ಅದಕ್ಕಾಗಿ ಬಾಬುಗೆ ನೀಡಬೇಕೆಂದು ಸಂಬಳದ ಹಣವನ್ನು ಉಪಯೋಗಿಸಿ ಕೊಳ್ಳುತ್ತಾನೆ. ಅದೃಷ್ಟ ಎನ್ನುವಂತೆ ಈ ವ್ಯಾಪಾರ ಜೋರಾಗಿ ಲಾಭವನ್ನು ನೀಡುತ್ತದೆ. ಹತ್ತೇ ವರ್ಷದಲ್ಲಿ ಬೇರೆ ಬೇರೆ ಊರುಗಳಲ್ಲಿ ಇನ್ನಷ್ಟು ಅಂಗಡಿಗಳನ್ನು ಸರವಣ ಹಾಕಿಕೊಳ್ಳುತ್ತಾನೆ.
ಒಂದು ದಿನ ಹೀಗೆ ತನ್ನ ದಿನಸಿ ಅಂಗಡಿಯಲ್ಲಿ ಕುಳಿತು ಕೊಂಡಿರ ಬೇಕಾದರೆ ಅಲ್ಲಿಗೆ ಬಾಬು ಬರುತ್ತಾನೆ. ಬಾಬುವನ್ನು ಕಂಡು ಅಳುತ್ತಾ ಎಲ್ಲಿಗೆ ಹೋಗಿದ್ದೆ ಎಂಬುದಾಗಿ ಸರವಣ ಕೇಳುತ್ತಾನೆ. ಆಗ ನಾನು ಒಬ್ಬ ಹುಡುಗಿಯ ಮಾನವನು ಕಾಪಾಡಲು ಹೋಗಿ ಒಬ್ಬ ಹುಡುಗನನ್ನು ಮುಗಿಸಿದೆ ಅದಕ್ಕಾಗಿ ಜೈಲಿಗೆ ಹೋಗಿ ಬಂದಿದ್ದೇನೆ ಎಂಬುದಾಗಿ ಹೇಳಿ ಹೊರಡಲು ಅನುವಾಗುತ್ತಾನೆ. ಆಗ ನೀವು ಎಲ್ಲಿಗೂ ಹೋಗಬೇಕಾದ ಅವಶ್ಯಕತೆ ಇಲ್ಲ ನಿನಗೆ ಕೊಡಬೇಕಾಗಿದ್ದ ಸಂಬಳದಲ್ಲೇ ನಿನ್ನ ಹಿಂದೆ ಇರುವ ಫರ್ನಿಚರ್ ಅಂಗಡಿಗಳನ್ನು ಹಾಗೂ ಪಾತ್ರೆ ಅಂಗಡಿಗಳನ್ನು ಮಾಡಿದ್ದೇನೆ ನೀನು ಮಾಲೀಕನ ಹಾಗೆ ನನ್ನ ಜೊತೆ ಇದ್ದುಬಿಡು ಎಂಬುದಾಗಿ ಹೇಳುತ್ತಾನೆ. ಇದು ನಿಜವಾಗಿಯೂ ಕೂಡ ತಮಿಳುನಾಡಿನಲ್ಲಿ ನಡೆದಿರುವ ಘಟನೆಯಾಗಿದೆ ಸ್ನೇಹಿತರೇ. ಇಂದಿಗೂ ಕೂಡ ಇಬ್ಬರು ಈ ವ್ಯವಹಾರದಲ್ಲಿ ಪಾರ್ಟ್ನರ್ ಗಳಾಗಿ ವ್ಯವಹಾರ ಮಾಡುತ್ತಿದ್ದಾರೆ.
Comments are closed.