ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಅವರಿಂದ ದೂರ ಆಗಿದ್ದಕ್ಕೆ ಕಾರಣ ತಿಳಿಸಿದ ರಶ್ಮಿಕಾ, ಪಾಪ ಕಣ್ರೀ ಕಣ್ಣೀರು ಬರುತ್ತೆ.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಶ್ಮಿಕ ಮಂದಣ್ಣ ನವರು ಕನ್ನಡ ಚಿತ್ರರಂಗದಿಂದ ತಮ್ಮ ಸಿನಿಮಾ ಜೀವನವನ್ನು ಪ್ರಾರಂಭಿಸಿ ಪರಭಾಷೆಗಳಿಗೆ ಹೋದವರು. ಎಷ್ಟೇ ಹೆಸರು ಮಾಡಿದರು ಕೂಡ ರಶ್ಮಿಕ ಮಂದಣ್ಣ ರವರು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಟ್ರೋಲ್ ಆಗುತ್ತಲೇ ಇರುತ್ತಾರೆ. ಭಾಷೆಯ ವಿಚಾರವಾಗಿ ನಡವಳಿಕೆ ವಿಚಾರವಾಗಿ ಸಾಕಷ್ಟು ಬಾರಿಗೆ ಟೀಕೆಗೆ ಒಳಗಾಗಿದ್ದಾರೆ. ಇನ್ನು ಇದೆಲ್ಲದರ ಕುರಿತಂತೆ ಇತ್ತೀಚಿಗೆ ಹಿಂದಿ ಮಾಧ್ಯಮವೊಂದರ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಭಾಷೆ ಬಗ್ಗೆ ನನಗೆ ಯಾವುದೇ ಭಾಷೆಗಳು ಕೂಡ ಸರಿಯಾಗಿ ಬರುವುದಿಲ್ಲ.
ಎಲ್ಲಾ ಭಾಷೆಗಳು ಕೂಡ ಮಿಕ್ಸ್ ಆಗುತ್ತಲೇ ಇರುತ್ತವೆ ಎಂಬುದಾಗಿ ಹೇಳಿದ್ದಾರೆ. ರಶ್ಮಿಕ ಮಂದನ್ನ ರಕ್ಷಿತ್ ಶೆಟ್ಟಿ ಅವರ ಜೊತೆಗೆ ಏನಾಯ್ತು ಎಂಬುದರ ಕುರಿತಂತೆ ಕೂಡ ಪರೋಕ್ಷವಾಗಿ ವಿವರಣೆ ನೀಡುತ್ತಾ ಮಾತನಾಡಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಕಿರಿಕ್ ಪಾರ್ಟಿ ಚಿತ್ರದ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಪ್ರೀತಿ ಚಿಗುರೊಡೆದು ರಕ್ಷಿತ್ ಶೆಟ್ಟಿ ಅವರು ರಶ್ಮಿಕಾ ಮಂದಣ್ಣ ನವರಿಗೆ ಸೆಟ್ ನಲ್ಲಿ ರಿಂಗ್ ನೀಡಿ ಪ್ರಪೋಸ್ ಮಾಡಿದ್ದರು. ಇನ್ನು ಇವರಿಬ್ಬರ ನಡುವೆ ಹತ್ತು ವರ್ಷದ ವಯಸ್ಸಿನ ಅಂತರವಿದ್ದರೂ ಕೂಡ ನಿಶ್ಚಿತಾರ್ಥ ಮಾಡಿಕೊಂಡು ಮದುವೆಯಾಗುವವರೆಗೂ ಕೂಡ ಇವರಿಬ್ಬರು ಮುಂದುವರೆದಿದ್ದರು. ಆದರೆ ನಂತರ ಏನಾಯ್ತು ಗೊತ್ತಿಲ್ಲ ಇಬ್ಬರೂ ಕೂಡ ದೂರ ಆಗುತ್ತಾರೆ. ರಕ್ಷಿತ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣಗಳ ಖಾತೆಯನ್ನು ಡಿ ಆಕ್ಟಿವೇಟ್ ಮಾಡುತ್ತಾರೆ.
ಇತ್ತ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗುತ್ತಾರೆ. ಆದರೆ ಇದಕ್ಕೆ ರಶ್ಮಿಕ ಮಂದಣ್ಣ ನವರು ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಆದರೆ ಇದರ ಕುರಿತಂತೆ ಈಗ ರಶ್ಮಿಕ ಮಂದಣ್ಣ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಅದೇನೆಂದರೆ ನಾನು ಒಬ್ಬರಿಗೆ ಪ್ರೀತಿಯಿಂದ ನನ್ನ ಹೃದಯವನ್ನು ನೀಡಿರುತ್ತೇನೆ ಆದರೆ ಅವರು ನನ್ನನ್ನು ಅರ್ಥ ಮಾಡಿಕೊಳ್ಳದೇ ನನ್ನನ್ನು ನಾನಾಗಿರಲು ಬಿಡದಿದ್ದ ಕಾರಣಕ್ಕಾಗಿ ನನ್ನನ್ನು ಕಳೆದುಕೊಂಡಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಈ ವಿಚಾರವಾಗಿ ಆಗಾಗ ಅದನ್ನು ನೆನೆದು ನಾನು ದುಃಖ ಪಡುತ್ತೇನೆ ಎಂಬುದಾಗಿ ಕೂಡ ಹೇಳಿ ಕೊಂಡಿದ್ದಾರೆ. ವೈಯಕ್ತಿಕ ಜೀವನದ ಕುರಿತಂತ ರಶ್ಮಿಕಾ ಮಂದಣ್ಣ ನವರು ಹೊಂದಿರಬಹುದು ಆದರೆ ಅವರು ವೇದಿಕೆಯ ಮೇಲೆ ಅನುಚಿತ ವರ್ತನೆಯಿಂದಾಗಿ ಟೀಕೆಗೆ ಒಳಗಾಗಿರುವುದಂತೂ ಅವರ ಕಾರಣದಿಂದಾಗಿ ಎಂಬುದು ಸತ್ಯ.
Comments are closed.