ಬಿಡುಗಡೆಯಾಯಿತು ಬಹು ನಿರೀಕ್ಷಿತ ಟಿಆರ್ ಪಿ ಲಿಸ್ಟ್, ಬಾರಿ ಪೈಪೋಟಿ ಇದ್ದ ವಾರದಲ್ಲಿ ಟಾಪ್ ಸ್ಥಾನ ಪಡೆದ ಧಾರಾವಾಹಿಗಳು ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೆಹಿತರೇ ಜನ ಯಾವ ವಾರ ಯಾವ ಧಾರಾವಾಹಿಯ ಎಪಿಸೋಡ್ ಗಳನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಹೇಳೋದೇ ಕಷ್ಟ. ಹಾಗಾಗಿ ಸೀರಿಯಲ್ ರೇಟಿಂಗ್ ಗಳಲ್ಲಿಯೂ ಕೂಡ ವ್ಯತ್ಯಾಸವಾಗುತ್ತಾ ಇರುತ್ತದೆ. ಕೆಲವು ಸೀರಿಯಲ್ ಗಳು ಮಾತ್ರ ಯಾವಾಗಲೂ ಟಾಪ್ ಟೆನ್ ಪಟ್ಟಿಯಲ್ಲೆಯೇ ಇರುವುದು ವಿಶೇಷ. ಹಾಗಾದರೆ ಬನ್ನಿ ಯಾವ ಸೀರಿಯಲ್ ಯಾವ ಸ್ಥಾನ ಪಡೆದುಕೊಂಡಿದೆ ಟಿ ಆರ್ ಪಿ ರೇಟಿಂಗ್ ನಲ್ಲಿ ನೋಡೋಣ.
ಎರಡು ವಾರಗಳ ಹಿಂದೆ ಗಟ್ಟಿಮೇಳ ಧಾರಾವಾಹಿಗೆ ಟೆನ್ ಪ್ಲಸ್ ರೇಟಿಂಗ್ ಸಿಕ್ಕಿತ್ತು. ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಾಂತ್ ಅಮೂಲ್ಯ ಮದುವೆಯ ಅದ್ಧೂರಿ ಸೆಟ್, ನಟ ರವಿಚಂದ್ರನ್ ಅವರ ಆಗಮನ ಇದಕ್ಕ್ಕೆ ಕಾರಣ ಎನ್ನಬಹುದು. ಆದರೆ ಈ ಬಾರಿ ಟೆನ್ ಪ್ಲಸ್ ರೇಟಿಂಗ್ ಪಡೆದುಕೊಳ್ಳುವಲ್ಲಿ ಗಟ್ಟಿಮೇಳ ಧಾರಾವಾಹಿಯನ್ನು ಹಿಂದಿಕ್ಕಿ ಮತ್ತೊಂದು ಧಾರಾವಾಹಿ ಈ ಸ್ಥಾನ ಗಿಟ್ಟಿಸಿಕೊಂಡಿದೆ. ಅದನ್ನು ತಿಳಿದುಕೊಳ್ಳುವುದಕ್ಕೂ ಮೊದಲು ಇತರ ಧಾರಾವಾಗಿಗಳ ಸ್ಥಾನ ಎಲ್ಲಿದೇ ನೋಡೋಣ.
ಇನ್ನು ಟಿಆರ್ ಪಿ ಟಾಪ್ ರೇಟಿಂಗ್ ನಲ್ಲಿ ೩ನೇ ಸ್ಥಾನ ಗಳಿಸಿಕೊಂಡಿದ್ದು ಹಿಟ್ಲರ್ ಕಲ್ಯಾಣ. ಶುರುವಿನಿಂದ ಇಲ್ಲಿಯವರೆಗೂ ಹಿಟ್ಲರ್ ಕಲ್ಯಾಣ ಉತ್ತಮ ಸ್ಥಾನವನ್ನೇ ಪಡೆದುಕೊಂಡು ಬಂದಿದೆ. ಜೆಕೆ ಗಾಂಭೀರ್ಯ ಹಾಗೂ ಲೀಲಾ ಎಡವಟ್ಟು ಜನರಿಗೂ ಇಷ್ಟವಾಗುತ್ತಿದೆ. ಸದ್ಯ, ಲೀಲಾಳನ್ನು ಎಲ್ಲಾ ಕಷ್ಟದ ಸಮಯದಲ್ಲೂ ಕಾಯುವ ಎಜೆ ಹಾಗೂ ಲೀಲಾ ಲವ್ ಸ್ಟೋರಿ ಶುರುವಾಗುವುದನ್ನೇ ವೀಕ್ಷಕರು ಕಾದುಕುಳಿತಿದ್ದಾರೆ. ಹಾಗೆಯೇ ೪ನೇ ಸ್ಥಾನದಲ್ಲಿರುವುದು ಸತ್ಯ ಹಾಗೂ ಜೊತೆಜೊತೆಯಲಿ. ಸತ್ಯಾಳ ಪ್ರೇಮ್ ಕಹಾನಿ, ದಿವ್ಯಾಳ ಗುಟ್ಟು ಜನರನ್ನು ಗಮನ ಸೆಳೆಯುತ್ತಿದ್ರೆ, ಜೊತೆಜೊತೆಯಲಿ ರಾಜ ನಂದಿನಿ ರಹಸ್ಯ ಹೊರಬರುವುದನ್ನೇ ಜನ ಕಾಯ್ದಿದ್ದಾರೆ.
ಇನ್ನು ಮಂಗಳ ಗೌರಿ ಹಾಗೂ ರಾಜೀವ್ ಮಗು ಸ್ನೇಹಾ ಮಡಿಲು ತುಂಬುವ ಮಂಗಳ ಗೌರಿ ಸದ್ಯ ೫ ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅಂದಹಾಗೇ ಟಾಪ್ ರೇಟಿಂಗ್ ಪಡೆದ, ೧೦.೩ ರೇಟಿಂಗ್ ಪಡೆದ ಧಾರಾವಾಹಿ ಪಾರು. ಆದಿ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಾರು ವೀರಯ್ಯ ಹೇಳಿದಂತೆ ತನ್ನ ಪ್ರೀತಿಯ ಬಗ್ಗೆ ಅಖಿಲಾಂಡೇಶ್ವರಿ ಬಳಿ ಮಾತನಾಡುತ್ತಾಳ ಎನ್ನುವುದೆ ಸದ್ಯದ ಕುತೂಹಲ.
Comments are closed.