Neer Dose Karnataka
Take a fresh look at your lifestyle.

ದೊಡ್ಡತನ ಮೆರೆದ ಕರುನಾಡಿನ ರತ್ನ ಪುನೀತ್ ರವರ ಪತ್ನಿ ಅಶ್ವಿನಿ. ಕೇಳದೆ ಇದ್ದರೂ ಕೂಡ ನಿರ್ಮಾಪಕರಿಗೆ ಕರೆ ಮಾಡಿ ಹೇಳಿದ್ದೇನು ಗೊತ್ತೇ??

20

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾವು ಅಕ್ಟೋಬರ್ 29ರಂದು ಅಕಾಲಿಕವಾಗಿ 46ನೇ ವಯಸ್ಸಿನಲ್ಲಿ ಕಳೆದುಕೊಂಡಿದ್ದೇವೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಕುರಿತಂತೆ ದೊಡ್ಡದಾದ ಕನಸನ್ನು ಕಂಡಿದ್ದರು ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಇದಕ್ಕಾಗಿ ತಮ್ಮ ಪಿ ಆರ್ ಕೆ ಪ್ರೊಡಕ್ಷನ್ ಸಂಸ್ಥೆಯಿಂದ ಹಲವಾರು ಸಿನಿಮಾಗಳನ್ನು ಕೂಡ ಹೊಸ ಹೊಸ ಪ್ರತಿಭೆಗಳಿಗೆ ಮಾಡಲು ರೆಡಿಯಾಗಿದ್ದರು.

ಇಷ್ಟು ಮಾತ್ರವಲ್ಲದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೂಡ ಹಲವಾರು ಸಿನಿಮಾಗಳಿಗೆ ನಟಿಸಲು ರೆಡಿಯಾಗಿ ಕಥೆಯನ್ನು ಕೂಡ ಒಪ್ಪಿಕೊಂಡಿದ್ದರು. ಆದರೆ ಅವನ್ನೆಲ್ಲ ಪೂರೈಸುವ ಮೊದಲೇ ಪುನೀತ್ ರಾಜಕುಮಾರ್ ಅವರು ಇನ್ನಿಲ್ಲ ವಾಗಿದ್ದಾರೆ. ಇನ್ನು ಈಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಮರಣ ಹೊಂದಿದ ಹಲವಾರು ದಿನಗಳ ನಂತರ ಅವರ ಪತ್ನಿ ಮಾಡಿರುವ ಕೆಲಸ ನೋಡಿದರೆ ಖಂಡಿತವಾಗಿಯೂ ಎಲ್ಲರೂ ಒಂದು ಕ್ಷಣ ನಿಂತುಕೊಂಡು ಸಲಾಂ ಮಾಡಬೇಕೆನಿಸುತ್ತದೆ.

ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಚಿತ್ರವೊಂದಕ್ಕಾಗಿ ನಿರ್ಮಾಪಕರ ಒಬ್ಬರಿಂದ ಅಡ್ವಾನ್ಸ್ ಹಣವನ್ನು ಪಡೆದುಕೊಂಡಿದ್ದರು. ಇನ್ನು ಇದನ್ನು ಅವರು ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದರು. ಇನ್ನು ಇದನ್ನು ಗಮನಿಸಿರುವ ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ನಿರ್ಮಾಪಕರಿಗೆ ಕರೆ ಮಾಡಿ ನೀವು ನಮ್ಮ ಯಜಮಾನರಿಗೆ 2.50 ಕೋಟಿ ರೂಪಾಯಿ ಹಣವನ್ನು ಮುಂಗಡವಾಗಿ ಚಿತ್ರವೊಂದಕ್ಕೆ ನೀಡಿದ್ದೀರಿ ಅದನ್ನು ಅವರು ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ದಯವಿಟ್ಟು ನಾಳೆ ಬಂದು ಆ ಹಣವನ್ನು ತೆಗೆದುಕೊಂಡು ಹೋಗಿ ಎಂಬುದಾಗಿ ಕರೆ ಮಾಡಿ ಹೇಳಿದ್ದಾರೆ. ಗಂಡನಂತೆ ಹೆಂಡತಿ ಕೂಡ ಧರ್ಮಮಾರ್ಗದಲ್ಲಿ ನಡೆಯುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.

Leave A Reply

Your email address will not be published.