ಬಿಗ್ ಬಾಸ್ ನಿಂದ ರನ್ನರ್ ಅಪ್ ಆಗಿ ಹೊರ ಬಂದ ಮೇಲೆ ಹತ್ತಾರು ವರ್ಷಗಳ ಪ್ರೇಯಸಿ ದೀಪ್ತಿಗೆ ಶಾಕ್ ನೀಡಿದ ಷನು. ಮಾಡಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಎಂದರೆ ನಮಗೆ ಮೊದಲಿಗೆ ನೆನಪು ಆಗುವುದು ಬಿಗ್ಬಾಸ್ ಅಲ್ಲದೆ ಇನ್ಯಾವುದು ಅಲ್ಲ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಕನ್ನಡದ ಬಿಗ್ ಬಾಸ್ ಕುರಿತಂತೆ ಅಲ್ಲ ಬದಲಾಗಿ ತೆಲುಗಿನ ಬಿಗ್ಬಾಸ್ ಕುರಿತಂತೆ. ತೆಲುಗಿನ ಬಿಗ್ ಬಾಸ್ ಅನ್ನು ನಡೆಸಿಕೊಡುವುದು ಎವರ್ಗ್ರೀನ್ ಹೀರೋ ಆಗಿರುವ ಅಕ್ಕಿನೇನಿ ನಾಗಾರ್ಜುನ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಅಕ್ಕಿನೇನಿ ನಾಗಾರ್ಜುನ ರವರ ಕುರಿತಂತೆ ಅಲ್ಲ ಬದಲಾಗಿ ಈ ಬಾರಿಯ ಬಿಗ್ ಬಾಸ್ ನಲ್ಲಿ ಪಾಲ್ಗೊಂಡಿದ್ದ ಷಣ್ಮುಖ ರವರ ಕುರಿತಂತೆ.
ಷಣ್ಮುಖ ರವರನ್ನು ಎಲ್ಲರೂ ಕರೆಯುವುದು ಶಾನು ಎಂದಾಗಿ. ಶಾನು ರವರು ಯೂಟ್ಯೂಬ್ ಸರ್ಕಲ್ನಲ್ಲಿ ಸಾಕಷ್ಟು ಜನಪ್ರಿಯರಾಗಿದ್ದು ಮಿಲಿಯಗಟ್ಟಲೆ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಇವರ ಪ್ರೇಯಸಿ ಯಾಗಿರುವ ದೀಪ್ತಿ ಕೂಡ ಇದೇ ಯೂಟ್ಯೂಬ್ನಲ್ಲಿ ಜನಪ್ರಿಯರಾಗಿದ್ದಾರೆ. ಈ ಬಾರಿಯ ಬಿಗ್ ಬಾಸ್ ಅನ್ನು ಖಂಡಿತವಾಗಿಯೂ ಶಾನು ರವರೆ ಗೆಲ್ಲುತ್ತಾರೆ ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು. ಇನ್ನು ದೀಪ್ತಿ ರವರು ಕೂಡ ಶಾನು ರವರಿಗೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ಎಲ್ಲರೂ ವೋಟ್ ಮಾಡಿ ಎಂಬುದರ ಕುರಿತಂತೆ ಕೂಡ ಪ್ರಯತ್ನಕ್ಕೂ ಮೀರಿ ಪ್ರಯತ್ನವನ್ನು ಮಾಡಿದ್ದರು. ಇನ್ನು ಶಾನು ಹಾಗೂ ದೀಪ್ತಿ ಪ್ರೇಮಿಗಳು ಎಂಬುದಾಗಿ ಈ ಹಿಂದೆಯೇ ಇಬ್ಬರು ಒಪ್ಪಿಕೊಂಡಿದ್ದಾರೆ ಎಂಬುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದಾಗಿದೆ. ಆದರೆ ಇಷ್ಟೆಲ್ಲಾ ಪ್ರಯತ್ನಗಳ ಮೇಲು ಕೂಡ ಶಾನು ರವರು ಬಿಗ್ ಬಾಸ್ ನಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರು.
ಇನ್ನು ವಿಜೆ ಸನ್ನಿ ಬಿಗ್ ಬಾಸ್ 5ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಇನ್ನು ಎರಡನೇ ಸ್ಥಾನ ಪಡೆದುಕೊಂಡ ನಂತರವೂ ಕೂಡ ಎಲ್ಲೂ ಶಾನು ಅವರು ಎಲ್ಲೂ ಕೂಡ ದೀಪ್ತಿ ಅವರ ವಿಚಾರವಾಗಿ ಮಾತನಾಡಿರಲಿಲ್ಲ. ಇದಕ್ಕೆ ಈಗ ಕಾರಣ ತಿಳಿದುಬಂದಿದೆ. ಅದೇನೆಂದರೆ ಇವರಿಬ್ಬರ ನಡುವೆ ಬ್ರೇಕಪ್ ಆಗಿರುವ ಸಾಧ್ಯತೆಗಳು ದಟ್ಟವಾಗಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಅದಕ್ಕೆ ಮುಖ್ಯ ಕಾರಣವಾಗಿರುವುದು ಶಾನು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಪ್ರತಿಸ್ಪರ್ಧಿ ಸಿರಿ ರವರು ಶಾನು ರವರ ಹಣೆಗೆ ಮುತ್ತಿಟ್ಟು ಸಾಕಷ್ಟು ಕ್ಲೋಸ್ ಆಗಿ ಅವರೊಂದಿಗೆ ಇದ್ದರು. ಇನ್ನು ಅವರ ಕುರಿತಂತೆ ಸಾಕಷ್ಟು ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು ದೀಪ್ತಿ ರವರ ಅಸಮಧಾನಕ್ಕೆ ಕಾರಣವಾಗಿದ್ದು ಇದು ಇವರಿಬ್ಬರ ನಡುವಿನ ಸಂಬಂಧವನ್ನು ಕೊನೆಗಾಣಿಸಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.
Comments are closed.