ಎಲ್ಲವೂ ತಣ್ಣಗಿರುವಾಗ ವಿರಾಟ್ ಕೊಹ್ಲಿ ಗೆ ಹೊಸ ರೀತಿಯ ತಲೆ ನೋವು, ಕಿಂಗ್ ಏನೇ ಮಾಡಲು ಹೋದರೂ ತಪ್ಪುತ್ತಿಲ್ಲ ಕಷ್ಟ. ಏನಾಗಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಸೌತ್ ಆಫ್ರಿಕಾ ಸರಣಿಗೂ ಭಾರತಕ್ಕೂ ವಿವಾದಗಳ ನಂಟು ಜಾಸ್ತಿಯಾಗಿದೆ. ಸರಣಿ ಆರಂಭಕ್ಕೂ ಮುನ್ನ ನಾಯಕತ್ವದ ವಿವಾದ ತಾರಕಕೇರಿತ್ತು. ಇದರ ಜೊತೆ ವಿರಾಟ್ ಕೊಹ್ಲಿ ಏಕದಿನ ಸರಣಿಯಿಂದ ದೂರವುಳಿಯುತ್ತಾರೆ ಎಂಬ ವದಂತಿಗಳು ಕೇಳಿ ಬಂದಿದ್ದವು. ಆದರೇ ಈಗ ಎಲ್ಲಾ ವದಂತಿಗಳಿಗೆ ಕೊನೆ ಹಾಡಿ, ಭಾರತ ತಂಡ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಿದೆ. ಒಮ್ರಿಕಾನ್ ವೈರಸ್ ಹೆಚ್ಚಾದ ಕಾರಣ ಕ್ರೀಡಾಂಗಣದೊಳಗೆ ಪ್ರೇಕ್ಷಕರಿಗೆ ಅವಕಾಶ ನೀಡುತ್ತಿಲ್ಲ. ಇದರ ಜೊತೆ ಈಗ ನಾಯಕ ವಿರಾಟ್ ಕೊಹ್ಲಿಗೆ ಹೊಸ ತಲೆ ನೋವಂದು ಶುರುವಾಗಿದೆ.
ಹೌದು ಭಾರತ ತಂಡದ ಆಯ್ಕೆಯಲ್ಲಿ ಅಂತಹ ತಲೆ ನೋವು ಇಲ್ಲದಿದ್ದರೂ, ಆಲ್ ರೌಂಡರ್ ರವೀಂದ್ರ ಜಡೇಜಾ ಸ್ಥಾನವನ್ನು ತುಂಬುವರಾರು ಎಂಬ ಪ್ರಶ್ನೆಗೆ ಇನ್ನು ಉತ್ತರ ದೊರಕಿಲ್ಲ. ಇನ್ನು ಐದನೇ ಕ್ರಮಾಂಕ ಹಾಗೂ ಏಳನೇ ಕ್ರಮಾಂಕ್ಕಕೆ ಇಬ್ಬರೂ ಆಟಗಾರರ ನಡುವೆ ತೀವ್ರ ಪೈಪೋಟಿ ಇದೆ. ಐದನೇ ಕ್ರಮಾಂಕಕ್ಕೆ ಅನುಭವಿ ಅಜಿಂಕ್ಯಾ ರಹಾನೆ ಹಾಗೂ ಕಾನ್ಪುರ ಟೆಸ್ಟ್ ಹೀರೋ ಶ್ರೇಯಸ್ ಅಯ್ಯರ್ ನಡುವೆ ಪೈಪೋಟಿ ಏರ್ಪಟ್ಟರೇ, ಇನ್ನು ಏಳನೇ ಸ್ಥಾನಕ್ಕೆ ಹನುಮ ವಿಹಾರಿ ಹಾಗೂ ವೇಗಿ ಶಾರ್ದೂಲ್ ಠಾಕೂರ್ ನಡುವೆ ಪೈಪೋಟಿ ಇದೆ.
ಆಫ್ರಿಕಾ ಪಿಚ್ ನಲ್ಲಿ ನಾಲ್ವರು ವೇಗಿಗಳು ಹಾಗೂ ಒಬ್ಬ ಸ್ಪಿನ್ನರ್ ಕಾಂಬಿನೇಷನ್ ನೊಂದಿಗೆ ಹೋಗಲು ವಿರಾಟ್ ಚಿಂತಿಸಿದರೇ, ಹನುಮ ವಿಹಾರಿ ಹೊರಗುಳಿಯಬೇಕಾಗುತ್ತದೆ. ಫಾರ್ಮ್ ನಲ್ಲಿರುವ ಶ್ರೇಯಸ್ ಅಯ್ಯರ್ ಗೆ ಮಣೆ ಹಾಕಿದರೇ, ಅನುಭವಿ ಅಜಿಂಕ್ಯಾ ರಹಾನೆ ಹೊರಗುಳಿಯಬೇಕಾಗುತ್ತದೆ. ಈ ಎರಡು ಸ್ಥಾನಗಳಿಗೆ ಯಾರನ್ನ ಆಯ್ಕೆ ಮಾಡುವುದೆಂಬುದು ಸದ್ಯ ವಿರಾಟ್ ಕೊಹ್ಲಿಗೆ ದೊಡ್ಡ ತಲೆ ನೋವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.