ಶಿವಣ್ಣನ ಮೊದಲ ಸಿನಿಮಾ ಆನಂದ ರಿಲೀಸ್ ಆದಾಗ ವಿಷ್ಣುವರ್ಧನ್ ರವರು ಏನು ಮಾಡಿದ್ದರು ಗೊತ್ತೇ?? ವಿಷ್ಣು ರವರು ಹೀಗೆ ಮಾಡುತ್ತಾರೆ ಎಂದು ಯಾರು ಊಹೆ ಕೂಡ ಮಾಡಿರಲಿಲ್ಲ.
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಮೇರು ನಟರಲ್ಲಿ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್ ರವರು ಕೂಡ ಒಬ್ಬರು. ವಿಷ್ಣುವರ್ಧನ್ ರವರು ತಮ್ಮ ನಟನೆ ಹಾಗೂ ವ್ಯಕ್ತಿತ್ವದ ಮೂಲಕ ಹಲವಾರು ಜನರ ನೆಚ್ಚಿನ ನಟನಾಗಿ ಸ್ಪೂರ್ತಿಯ ಚಿಲುಮೆಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ವಿಷ್ಣುವರ್ಧನ್ ರವರು ಕರುನಾಡ ಚಕ್ರವರ್ತಿ ಶಿವಣ್ಣನವರ ನೆಚ್ಚಿನ ನಟರಲ್ಲಿ ಕೂಡ ಒಬ್ಬರಾಗಿದ್ದಾರೆ. ಮೊದಲಿನಿಂದಲೂ ಕೂಡ ವಿಷ್ಣುವರ್ಧನ್ ರವರ ಜೊತೆಗೆ ಶಿವಣ್ಣನವರು ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡು ಬಂದಿದ್ದರು.
ವಿಷ್ಣುವರ್ಧನ್ ರವರ ಪ್ರತಿಯೊಂದು ಸಿನಿಮಾಗಳನ್ನು ಕೂಡ ಶಿವಣ್ಣನವರು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಅದರ ಕುರಿತಂತೆ ವಿಷ್ಣುವರ್ಧನ್ ರವರೊಂದಿಗೆ ವಿಚಾರ ವಿನಿಮಯ ಮಾಡುತ್ತಿದ್ದರು. ಇನ್ನು ವಿಷ್ಣುವರ್ಧನ್ ರವರು ಕೂಡ ಶಿವಣ್ಣನವರ ಸಿನಿಮಾಗಳನ್ನು ನೋಡಿ ಪ್ರೋತ್ಸಾಹದ ಮಾತುಗಳನ್ನು ಆಡುತ್ತಿದ್ದರು. ಇನ್ನು ಆನಂದ್ ಚಿತ್ರದ ಸಂದರ್ಭದಲ್ಲಿ ಶಿವಣ್ಣನವರಿಗೆ ಸಾಹಸಸಿಂಹ ವಿಷ್ಣುವರ್ಧನ್ ರವರು ಯಾವ ಉಡುಗೊರೆ ನೀಡಿದರು ಗೊತ್ತಾ. ಖಂಡಿತವಾಗಿ ಕೇಳಿದರೆ ನೀವು ಭಾವುಕರಾಗುವುದು ಗ್ಯಾರಂಟಿ.
ಹೌದು ವಿಷ್ಣುವರ್ಧನ್ ಅವರ ಮೊದಲ ಚಿತ್ರವಾಗಿರುವ ನಾಗರಹಾವು ಚಿತ್ರದ ರಾಮಾಚಾರಿ ಪಾತ್ರವನ್ನು ಕನ್ನಡಿಗರು ಮಾತ್ರವಲ್ಲದೆ ತಮಿಳು ಚಿತ್ರರಂಗದ ಲೆಜೆಂಡ್ ಆಗಿರುವ ಎಂ ಜಿ ಆರ್ ರವರು ಕೂಡ ಮೆಚ್ಚಿದ್ದರು. ಇನ್ನು ಸ್ವತಃ ಅವರೇ ವಿಷ್ಣುವರ್ಧನ್ ರವರನ್ನು ಚೆನ್ನೈಗೆ ಕರೆದು ಅಮೂಲ್ಯವಾಗಿರುವ ದುಬಾರಿ ಬೆಲೆಯ ವಾಚ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಇನ್ನು ಅದನ್ನು ತೆಗೆದುಕೊಂಡಮೇಲೆ ವಿಷ್ಣುವರ್ಧನ್ ರವರು ಕೂಡ ಇದನ್ನು ಮುಂದೊಂದು ದಿನ ಉತ್ತಮ ಪ್ರತಿಭೆಗೆ ಉಡುಗೊರೆಯಾಗಿ ನೀಡಬೇಕೆಂಬ ಕನಸನ್ನು ಕಂಡಿದ್ದರು. ಆನಂದ್ ಚಿತ್ರದಲ್ಲಿ ಶಿವಣ್ಣನವರ ಪಾತ್ರದ ಆಳವನ್ನು ನೋಡಿದ ನಂತರ ಈ ವಾಚ್ ಅರ್ಹವಾಗಿರುವ ಏಕೈಕ ವ್ಯಕ್ತಿ ಇವರು ಎಂದು ಭಾವಿಸಿ ಶಿವಣ್ಣನವರಿಗೆ ದುಬಾರಿ ಬೆಲೆಯನ್ನು ನೀಡಿದ್ದರಂತೆ. ಮಾಧ್ಯಮಗಳಲ್ಲಿ ಕಾಣಿಸುವುದಕ್ಕಿಂತ ಹೆಚ್ಚಾಗಿ ನಿಜಜೀವನದಲ್ಲಿ ನಟರು ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ.
Comments are closed.