ಬಿಡುಗಡೆಯಾಗಿ ವರ್ಷಗಳು ಕಳೆದಿದ್ದರೂ ಕೂಡ ಕಡಿಮೆಯಾಗದ ರಾಬರ್ಟ್ ಹವಾ. ಮತ್ತೊಂದು ದಾಖಲೆ ಸೃಷ್ಟಿ. ಏನು ಗೊತ್ತೆ??
ನಮಸ್ಕಾರ ಸ್ನೇಹಿತರೇ 2021 ಎನ್ನುವುದು ಕನ್ನಡ ಚಿತ್ರರಂಗದಲ್ಲಿ ಕೊಂಚಮಟ್ಟಿಗೆ ಚೇತರಿಕೆಯನ್ನು ಕಂಡಂತಹ ವರ್ಷವಾಗಿದೆ. ಮಹಾಮಾರಿಯ ಕಾರಣದಿಂದಾಗಿ ಸಾಕಷ್ಟು ಬಳಲಿದ್ದ ಕನ್ನಡ ಚಿತ್ರರಂಗಕ್ಕೆ ಈ ವರ್ಷ ಸ್ವಲ್ಪಮಟ್ಟಿಗೆ ನೆಮ್ಮದಿ ಸಿಕ್ಕಿದೆ ಎಂದು ಹೇಳಬಹುದು. ಇನ್ನು ನಾವು ಮಾತನಾಡಲು ಹೊರಟಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರದ ಕುರಿತಂತೆ. ರಾಬರ್ಟ್ ಚಿತ್ರ ಈ ವರ್ಷದ ಬಿಡುಗಡೆಯಾದ ಎರಡನೇ ಚಿತ್ರವಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಕೂಡ ಕನ್ನಡ ಚಿತ್ರರಂಗಕ್ಕೆ ಬೂಸ್ಟ್ ನೀಡಿದಂತಹ ಚಿತ್ರ ರಾಬರ್ಟ್ ಎಂದರೆ ಖಂಡಿತವಾಗಿ ತಪ್ಪಾಗಲಾರದು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸಿನಿಮಾಗಳು ಎಂದರೆ ಖಂಡಿತವಾಗಿಯೂ ನಿರ್ಮಾಪಕರಿಗೆ ಲಾಭ ಗ್ಯಾರಂಟಿ ಎಂಬುದು ಗೊತ್ತಿರೋ ವಿಚಾರ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರ ಬಾಕ್ಸಾಫೀಸ್ ನಲ್ಲಿ ಬರೋಬ್ಬರಿ 78 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿತ್ತು. ಇನ್ನು ಈ ವರ್ಷದ ಕನ್ನಡದ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿದ ಚಿತ್ರವಾಗಿ ಕೂಡ ಸಾಧನೆಯನ್ನು ಮಾಡಿತ್ತು. ಇನ್ನು ಈಗ ಬಿಡುಗಡೆಯಾಗಿ ವರ್ಷ ಕಳೆಯುತ್ತಾ ಬಂದಿದ್ದು ಈಗಲೂ ಕೂಡ ಮತ್ತೊಂದು ಹೊಸ ದಾಖಲೆಯನ್ನು ಮಾಡಿದೆ. ವರ್ಷಗಳು ಕಳೆಯುತ್ತಾ ಬಂದರೂ ಕೂಡ ಇನ್ನೂ ದಾಖಲೆಯನ್ನು ಮಾಡುತ್ತಿರುವ ರಾಬರ್ಟ್ ಚಿತ್ರ ಖಂಡಿತವಾಗಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇತ್ತೀಚಿನ ಮಟ್ಟಿಗೆ ದೊಡ್ಡ ಮಟ್ಟದ ಸಾಧನೆ ಮಾಡಿದೆ ಎಂದರೆ ಖಂಡಿತವಾಗಿ ಎಲ್ಲರೂ ಒಪ್ಪಲೇಬೇಕು.
ಹೌದು ಇತ್ತೀಚಿಗಷ್ಟೇ ಬುಕ್ ಮೈ ಶೋ ಮಾಡಿರುವ ಸರ್ವೆಯಿಂದ ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚು ಎಲ್ಲರೂ ಇಷ್ಟಪಟ್ಟಿರುವ ಸಿನಿಮಾ ರಾಬರ್ಟ್ ಎಂಬ ಖ್ಯಾತಿಗೆ ಒಳಗಾಗಿದೆ. ಮುಂಬೈನಲ್ಲಿ ಸೂರ್ಯವಂಶಿ ಹೈದರಾಬಾದ್ ನಲ್ಲಿ ಜಾತಿ ರತ್ನಲು ಚೆನ್ನೈನಲ್ಲಿ ಮಾಸ್ಟರ್ ಹಾಗೂ ಬೆಂಗಳೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ನಟನೆಯ ರಾಬರ್ಟ್ ಚಿತ್ರ ಅತ್ಯಂತ ಮೆಚ್ಚುಗೆ ಪಡೆದ ಚಿತ್ರಗಳು ಎಂಬ ಫಲಿತಾಂಶ ಬಂದಿದೆ. ರಾಬರ್ಟ್ ಚಿತ್ರದ ಮೂಲಕ ಮತ್ತೊಮ್ಮೆ ಡಿಬಾಸ್ ಅಭಿಮಾನಿಗಳ ಜೊತೆಗೆ ಫ್ಯಾಮಿಲಿ ಪ್ರೇಕ್ಷಕರ ಮನವನ್ನು ಕೂಡ ಗೆದ್ದಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಎಂದು ಹೇಳಬಹುದಾಗಿದೆ. ಮುಂದಿನ ದಿನಗಳಲ್ಲಿ ಡಿ ಬಾಸ್ ನಟನೆಯ ಚಿತ್ರಗಳು ಇನ್ನಷ್ಟು ಯಶಸ್ಸನ್ನು ಸಾಧಿಸಲಿ ಎಂದು ಹಾರೈಸೋಣ.
Comments are closed.