ಬಿಎಸ್ಎನ್ಎಲ್ ಪರಿಚಯಿಸಿರುವ ಹೊಸ ರೀಚಾರ್ಜ್ ಪ್ಲಾನ್ ಏನು ಹಾಗೂ ಅದರ ಪ್ರಯೋಜನ ಏನು ಗೊತ್ತಾ ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ಸಂಸ್ಥೆಗಳ ಪೈಪೋಟಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜೋರಾಗಿದೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಬಹುತೇಕ ಎಲ್ಲಾ ಟೆಲಿಕಾಂ ಸಂಸ್ಥೆಗಳು ಕೂಡ ಒಂದೇ ಸಮಯದಲ್ಲಿ ಬೆಲೆಗಳನ್ನು ಏರಿಸಿದ್ದಾರೆ ಹಾಗೂ ಹೊಸ ಹೊಸ ಯೋಜನೆಗಳನ್ನು ಕೂಡ ಗ್ರಾಹಕರಿಗೆ ಪರಿಚಯಿಸಿದ್ದಾರೆ.
ಈಗಾಗಲೇ ಜಿಯೋ ಏರ್ಟೆಲ್ ಸಂಸ್ಥೆಗಳು ಕೂಡ ಬೆಲೆಯನ್ನು ಜಾಸ್ತಿ ಮಾಡಿದ್ಯ ಕರಿಗೆ ಆಶ್ಚರ್ಯವನ್ನು ನೀಡಿದ್ದು ಹೊಸ ಹೊಸ ಯೋಜನೆಗಳನ್ನು ಕೂಡ ಪರಿಚಯಿಸಿದ್ದಾರೆ. ಇನ್ನು ಈಗ ಈ ಸಾಲಿಗೆ ಬಿಎಸ್ಸೆನ್ನೆಲ್ ಸಂಸ್ಥೆ ಕೂಡ ಸೇರಿದೆ ಎಂದು ಹೇಳಬಹುದಾಗಿದೆ. ಬಿಎಸ್ಎನ್ಎಲ್ ಸಂಸ್ಥೆ ಸರ್ಕಾರಿ ಸಂಸ್ಥೆಯಾಗಿದ್ದು ಟೆಲಿಕಾಂ ಕ್ಷೇತ್ರದಲ್ಲಿ ಕೂಡ ಪಾರದರ್ಶಕ ವಾದಂತಹ ಸೇವೆಗಳನ್ನು ಇದುವರೆಗೂ ನೀಡುತ್ತಾ ಬಂದಿದೆ. ಇನ್ನು ಈಗ ಬಿಎಸ್ಎನ್ಎಲ್ ಸಂಸ್ಥೆ ಹೊಸ ರೀತಿಯ ರಿಚಾರ್ಜ್ ಪ್ಲಾನ್ ಅನ್ನು ಗ್ರಾಹಕರಿಗೆ ಪರಿಚಯಿಸಿದ್ದು ಅದರ ಬೆಲೆ ಎಷ್ಟು ಹಾಗೂ ಅದರ ಪ್ರಯೋಜನಗಳು ಏನು ಎಂಬುದನ್ನು ನಾವು ನಿಮಗೆ ಹೇಳಲು ಹೊರಟಿದ್ದೇವೆ. ಹಾಗಿದ್ದರೆ ತಪ್ಪದೇ ಇದರ ಕುರಿತಂತೆ ಸಂಪೂರ್ಣ ವಿವರವನ್ನು ಪಡೆಯಲು ಲೇಖನವನ್ನು ಕೊನೆಯವರೆಗೂ ತಪ್ಪದೇ ಓದಿ.
ಹೌದು ಬಿಎಸ್ಎನ್ಎಲ್ ಸಂಸ್ಥೆ 397 ರೂಪಾಯಿಯ ಹೊಸ ರೀಚಾರ್ಜ್ ಪ್ಲಾನ್ ಅನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದ್ದು ಇದರ ಲಾಭ ಹಾಗೂ ಯೋಜನೆಗಳನ್ನು ನಾವು ನಿಮಗೆ ಇಂದು ವಿವರಿಸಲಿದ್ದೇವೆ. 397 ರೂಪಾಯಿ ರಿಚಾರ್ಜ್ ಮಾಡಿಕೊಂಡರೆ ಪ್ರತಿದಿನ ನಿಮಗೆ 2gb ಡೇಟಾ ನೆಟ್ ದೊರೆಯುತ್ತದೆ. ಇದರೊಂದಿಗೆ ದೈನಂದಿನ 100 ಮೆಸೇಜ್ಗಳು ಕೂಡ ಉಚಿತವಾಗಿ ದೊರೆಯುತ್ತದೆ. ಇಷ್ಟು ಮಾತ್ರವಲ್ಲದೆ ಅನಿಯಮಿತ ಕರೆಗಳನ್ನು ಕೂಡ ಮಾಡಬಹುದಾಗಿದ್ದು ಇದು ಒಂದು ಪ್ಲಸ್ ಪಾಯಿಂಟ್ ಎಂದು ಹೇಳಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಈ ಯೋಜನೆಗಳು 300 ದಿನಗಳವರೆಗೆ ವ್ಯಾಲಿಡಿಟಿ ಹೊಂದಿರುತ್ತದೆ. ಆದರೆ ಡೇಟಾ ಹಾಗೂ ಕರೆಗಳನ್ನು ಮಾಡಲು ಮತ್ತು ಮೆಸೇಜ್ ಗಳು ಹಾಗೂ ಕಾಲರ್ ಟ್ಯೂನ್ ಗಳು ಮಾತ್ರ ಮೊದಲ ಆರಂಭಿಕ 60 ದಿನಗಳವರೆಗೆ ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಇನ್ನು ಇದೇ ರೀತಿ ಹಲವಾರು ಯೋಜನೆಗಳನ್ನು ಕೂಡ ಇತ್ತೀಚಿಗೆ ಬಿಎಸ್ಎನ್ಎಲ್ ಸಂಸ್ಥೆ ಪರಿಚಯಿಸಿದ್ದು ಗ್ರಾಹಕರು ಅದರ ಯೋಜನೆಗಳ ವಿವರವನ್ನು ತಿಳಿದುಕೊಂಡು ಅದರ ಲಾಭವನ್ನು ಪಡೆದುಕೊಳ್ಳಬೇಕಾಗಿರುವುದು ಅವಶ್ಯಕವಾಗಿದೆ.
Comments are closed.