ಬಿಗ್ ಬಾಸ್ ನಿಂದ ಹೊರಬಂದ ನಂತರ ಶ್ರುತಿ ಪ್ರಕಾಶ್ ಈಗ ಏನು ಕೆಲಸ ಮಾಡುತ್ತಿದ್ದಾರೆ ಗೊತ್ತೇ?? ಸೋಶಿಯಲ್ ಮೀಡಿಯಾ ದಲ್ಲಿ ಅವರೇ ಮಾಹಿತಿ ನೀಡಿದ್ದಾರೆ ಕೇಳಿ.
ನಮಸ್ಕಾರ ಸ್ನೇಹಿತರೇ ಬಿಗ್ಬಾಸ್ ಎನ್ನುವುದೇ ಹಾಗೆ ಅಲ್ಲಿಗೆ ಒಮ್ಮೆ ಕಾಲಿಟ್ಟರೆ ಸಾಕು ಖಂಡಿತವಾಗಿ ಜನಪ್ರಿಯತೆಯನ್ನುವುದು ಬೇಡ ಎಂದರೂ ಕೂಡ ಬೆನ್ನಹಿಂದೆ ಬಂದೇ ಬರುತ್ತದೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಕೂಡ ಬಿಗ್ಬಾಸ್ ಸ್ಪರ್ಧಿಯೊಬ್ಬರ ಕುರಿತಂತೆ. ಹೌದು ನಾವು ಮಾತನಾಡುತ್ತಿರುವುದು ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ರವರ ಕುರಿತಂತೆ. ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಭಾಗವಹಿಸಿದ್ದವರು ಬೆಳಗಾವಿಯವರಾದರೂ ಕೂಡ ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದರು.
ಬಿಗ್ ಬಾಸ್ ಸೀಸನ್ 5ರಲ್ಲಿ ತಮ್ಮ ಮುಗ್ಧ ಸ್ವಭಾವ ಹಾಗೂ ಕ್ಯೂಟ್ ಫೇಸ್ ಮೂಲಕ ಕರ್ನಾಟಕದ ಕೃಷ್ ಆಗಿದ್ದವರು. ಇನ್ನು ಬಿಗ್ ಬಾಸ್ ನಲ್ಲಿ ಇವರನ್ನು ಕಂಡ ನಂತರ ಇವರು ಒಬ್ಬ ಒಳ್ಳೆಯ ಸಿಂಗರ್ ಎಂಬುದು ಎಲ್ಲರಿಗೂ ಕೂಡ ಗೊತ್ತಾಗಿತ್ತು. ಸರಿಯಾಗಿ ಕನ್ನಡ ಬರೆದಿದ್ದರೂ ಕೂಡ ಪ್ರಯತ್ನಪಟ್ಟು ಕನ್ನಡದಲ್ಲಿ ಮಾತನಾಡುವ ಇವರ ಶೈಲಿಯನ್ನು ಎಲ್ಲರೂ ಕೂಡ ಮೆಚ್ಚಿದ್ದರು. ಇನ್ನು ಬಿಗ್ ಬಾಸ್ ನಿಂದ ಹೊರಬಂದ ನಂತರ ಇವರು ಏನು ಮಾಡುತ್ತಿದ್ದಾರೆ ಎಂಬ ಕುರಿತಂತೆ ಎಲ್ಲರೂ ಕೂಡ ಸಾಕಷ್ಟು ಕುತೂಹಲದಿಂದ ಇದ್ದರು. ನಿಮಗೆಲ್ಲರಿಗೂ ತಿಳಿದಿರುವಂತೆ ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು. ಇನ್ನು ಬಿಗ್ ಬಾಸ್ ಗೆ ಬರುವುದಕ್ಕಿಂತ ಮುಂಚೆ ಇವರೊಬ್ಬ ಕಂಟೆಂಟ್ ಕ್ರಿಯೇಟರ್ ಕೂಡ ಆಗಿದ್ದರು ಎಂಬುದು ನಿಮಗೆ ತಿಳಿದಿರಬೇಕಾದ ಅಂಶವಾಗಿದೆ.
ಇನ್ನು ಕನ್ನಡಚಿತ್ರರಂಗದಲ್ಲಿ ಇವರು ಲಂಡನ್ ನಲ್ಲಿ ಲಂಬೋದರ ಎಂಬ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಭರತ ಬಾಹುಬಲಿ ಚಿತ್ರದಲ್ಲಿ ಐಟಂ ಡಾನ್ಸ್ ಗೆ ಸ್ಟೆಪ್ ಹಾಕಿದ್ದಾರೆ. ಇನ್ನು ಹಲವಾರು ಸಿನಿಮಾಗಳಿಗೆ ಸಹಿ ಹಾಕಿದ್ದು ಕಸ್ತೂರಿ ಮಹಲ್ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಬಾಲಿವುಡ್ನಲ್ಲಿ 2ರಿಂದ 3 ಆಲ್ಬಮ್ ಸಾಂಗ್ ಗಳಿಗೆ ಕೂಡ ಹಾಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಬಿಗ್ ಬಾಸ್ ನಿಂದ ಹೊರಬಂದ ನಂತರ ಸಂಪೂರ್ಣವಾಗಿ ಶ್ರುತಿ ಪ್ರಕಾಶ್ ರವರು ನಟನೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ನಟನೆಯ ಕ್ಷೇತ್ರದ ಕಡೆಗೆ ಹೆಚ್ಚಿನ ಒತ್ತು ನೀಡಿರುವ ಶ್ರುತಿ ಪ್ರಕಾಶ್ ರವರಿಗೆ ಚಿತ್ರರಂಗದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸೋಣ.
Comments are closed.