ಇದ್ದಕಿದ್ದ ಹಾಗೆ ಮೈಸೂರಿಗೆ ಹೊರಟ ಅಶ್ವಿನಿ ಪುನೀತ್, ಪುನೀತ್ ರವರಂತೆ ಮೊದಲು ಮಾಡಿದ ಕೆಲಸವೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಮೇಲೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದರು. ಇನ್ನು ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಮೇಲೆ ಅಶ್ವಿನಿ ಅವರು ಎಲ್ಲೂ ಕೂಡ ಹೊರಗೆ ಹೋಗಿರಲಿಲ್ಲ. ಪುನೀತ್ ರವರನ್ನು ಕಳೆದುಕೊಂಡಾಗ ಕೂಡ ಎಲ್ಲೂ ಕಣ್ಣೀರು ಹಾಕಿರಲಿಲ್ಲ ದೊಡ್ಮನೆ ಸೊಸೆಯಲ್ಲಿ ಇರಬೇಕಾದಂತಹ ಎಲ್ಲಾ ಗುಣಗಳು ಕೂಡ ಅಶ್ವಿನಿ ಅವರಲ್ಲಿದ್ದವು. ಪುನೀತ್ ಅವರನ್ನು ಕಳೆದುಕೊಂಡ ಮೇಲೆ ಮಗಳೊಂದಿಗೆ ಅಮೆರಿಕಗೆ ಹೋಗುತ್ತಾರೆ ಎಂಬ ಸುದ್ದಿಗಳು ಕೂಡ ಕೇಳಿಬಂದಿದ್ದವು ಆದರೆ ಅವೆಲ್ಲವೂ ಸತ್ಯಕ್ಕೆ ದೂರವಾಗಿತ್ತು.
ಪುನೀತ್ ರಾಜಕುಮಾರ್ ಅವರು ಕಂಡಿದ್ದ ಕನಸನ್ನು ಒಂದೊಂದಾಗಿಯೇ ನೆರವೇರಿಸುವಂತಹ ಜವಾಬ್ದಾರಿ ಅಶ್ವಿನಿ ಅವರ ಮೇಲಿತ್ತು. ಇದಕ್ಕಾಗಿ ಮೊದಲ ಗಂಧದಗುಡಿಯ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗಷ್ಟೇ ನಿರ್ಮಾಪಕರೊಬ್ಬರಿಗೆ ಕರೆ ಮಾಡಿ ಪುನೀತ್ ರಾಜಕುಮಾರ್ ಅವರಿಗೆ ನೀವು ಕೊಟ್ಟಿದ್ದ 2.50 ಕೋಟಿ ರೂಪಾಯಿ ಮುಂಗಡ ಹಣವನ್ನು ನಾಳೆ ಬಂದು ತೆಗೆದುಕೊಂಡು ಹೋಗಿ ಎಂಬ ಸೌಜನ್ಯ ಹಾಗೂ ದೊಡ್ಮನೆ ಸೊಸೆ ನಿರ್ವಹಿಸಬೇಕಾದ ಕರ್ತವ್ಯಪ್ರಜ್ಞೆ ಕೂಡ ಅವರಲ್ಲಿತ್ತು ಎಂಬುದನ್ನು ಇದು ತೋರಿಸುತ್ತದೆ. ಈಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಾಡಿರುವ ಕೆಲಸ ಎಲ್ಲರನ್ನೂ ಕೂಡ ಆಶ್ಚರ್ಯಕ್ಕೆ ತಳ್ಳಿದೆ.
ಅದೇನೆಂದರೆ ಇಷ್ಟು ವರ್ಷ ಪುನೀತ್ ರಾಜಕುಮಾರ್ ಅವರೊಂದಿಗೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಅಶ್ವಿನಿ ಅವರು ಬರುತ್ತಿದ್ದರು. ಆದರೆ ದೇವರು ಮಾಡಿರುವ ಒಂದು ತಪ್ಪಿನಿಂದಾಗಿ ಈಗ ಒಂಟಿಯಾಗಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಹೋಗಿದ್ದಾರೆ. ಬೆಳಕಾದ ಮೇಲೆ ಬಂದರೆ ಮಾಧ್ಯಮಗಳಿಗೆ ಸಿಕ್ಕು ದರ್ಶನಕ್ಕಾಗಿ ಬರುವ ಜನರಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕಾಗಿ ಅಶ್ವಿನಿ ಅವರು ಬೆಳ್ಳಂಬೆಳಗ್ಗೆ ಅಂದರೆ ಐದು ಗಂಟೆಗೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಬಂದು ಅಷ್ಟೊಂದು ಮೆಟ್ಟಿಲುಗಳನ್ನು ಕೂಡ ತಾವೇ ನಡೆದುಕೊಂಡು ಹೋಗಿ ದೇವರ ಆಶೀರ್ವಾದವನ್ನು ಪಡೆದುಕೊಂಡು ಬಂದಿದ್ದಾರೆ. ಚುಮಗುಡುವ ಚಳಿಯಲ್ಲಿ ಅಷ್ಟೊಂದು ಮೆಟ್ಟಿಲುಗಳನ್ನು ಹೊತ್ತುಕೊಂಡು ಹೋಗಿರುವುದು ನಿಜವಾಗಲು ಕೂಡ ಕಷ್ಟಕರ ಕೆಲಸ ಆದರೂ ಕೂಡ ಅದನ್ನು ಅಶ್ವಿನಿ ಅವರು ಮಾಡಿದ್ದಾರೆ. ಇಷ್ಟೊಂದು ಒಳ್ಳೆಯ ಮನಸ್ಸಿನ ಜನರಿಗೆ ಆ ದೇವರು ಯಾಕೆ ಕಷ್ಟಗಳನ್ನು ನೀಡುತ್ತಾನೆ ಎಂಬುದು ಅರ್ಥವಾಗುತ್ತಿಲ್ಲ. ಅದೇನೇ ಇರಲಿ ಮುಂದಿನ ಜೀವನ ಅಶ್ವಿನಿ ಅವರಿಗೆ ದೇವರು ಒಳ್ಳೆಯದನ್ನು ಕರುಣಿಸಲಿ ಎಂದು ಹಾರೈಸೋಣ.
Comments are closed.