ವಯಸ್ಸಾದವನಿಗಾಗಿ ಮಹಿಳೆ ಪ್ರತಿದಿನ ತಪ್ಪದೆ ಊಟ ಇಡುತ್ತಿದ್ದಳು, ಪ್ರತಿದಿನ ಆಕೆಯ ಊಟವನ್ನು ತಿಂದ ಮುದುಕ ಕೊನೆಗೆ ಒಂದು ದಿನ ಮಾಡಿದ್ದೇನು ಗೊತ್ತೇ?? ಭೇಷ್ ಎನ್ನಲೇಬೇಕು.
ನಮಸ್ಕಾರ ಸ್ನೇಹಿತರೇ ನಮ್ಮ ಜೀವನದಲ್ಲಿ ಯಾವ ರೀತಿಯ ವಿಚಿತ್ರ ಘಟನೆಗಳು ಕೂಡ ನಡೆಯಬಹುದು ಎನ್ನುವುದಕ್ಕೆ ಹಲವಾರು ನಿದರ್ಶನಗಳನ್ನು ನೀಡಬಹುದು. ಆದರೆ ಕೆಲವೊಂದು ಘಟನೆಗಳನ್ನು ವಿವರಿಸಲು ಕಷ್ಟವಾಗುತ್ತದೆ. ಇಂದಿನ ವಿಚಾರದಲ್ಲಿ ನಾವು ತಮಿಳುನಾಡಿನ ವಿಂದ್ಯಾ ಎಂಬ ಮಹಿಳೆಯೊಬ್ಬರ ಜೀವನದಲ್ಲಿ ನಡೆದಿರುವಂತಹ ನೈಜ ಘಟನೆಯ ಕುರಿತಂತೆ ಹೇಳಲು ಹೊರಟಿದ್ದೇವೆ. ತಪ್ಪದೇ ಈ ಕಥೆಯನ್ನು ಪೂರ್ಣವಾಗಿ ತಿಳಿಯಲು ಲೇಖನಿಯನ್ನು ಕೊನೆಯವರೆಗೂ ಸವಿವರವಾಗಿ ಓದಿ.
ತಮಿಳುನಾಡಿನ ಒಂದು ಪುಟ್ಟ ಹಳ್ಳಿಯಲ್ಲಿ ವಿಂದ್ಯಾ ರವರು ತಮ್ಮ ಪತಿ ಸುಂದರ್ ಮಗಳು ಶಾಲಿನಿ ಹಾಗೂ ಮಗ ಆರವ್ ಜೊತೆಗೆ ಸುಖದಿಂದ ವಾಸವಾಗಿದ್ದರು. ವಿಂಧ್ಯ ರವರ ಮಗಳು ಶಾಲಿನಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರೆ ಇನ್ನು ಇತ್ತ ಮಗ ಆರವ್ ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಚೆನ್ನೈ ನಗರದಲ್ಲಿ ಕೆಲಸವನ್ನು ಹುಡುಕಲು ಅಲೆದಾಡುತ್ತಿದ್ದ. ಇನ್ನು ಪತಿ ಆಗಿರುವ ಸುಂದರ್ ಕೆಲಸಕ್ಕೆ ಹೋಗುತ್ತಿದ್ದರು. ಇನ್ನು ವಿಂದ್ಯಾ ರವರು ಬೆಳಗ್ಗೆ ಬೇಗನೆ ಎದ್ದು ಮನೆ ಕೆಲಸವನ್ನು ಮುಗಿಸಿ ತಿಂಡಿ ತಿಂದು ಕುಳಿತುಕೊಳ್ಳುತ್ತಿದ್ದರು. ಒಟ್ಟಾರೆಯಾಗಿ ವಿಂದ್ಯಾ ರವರ ಬಗ್ಗೆ ಹೇಳುವುದಾದರೆ ತಮ್ಮ ಕುಟುಂಬವನ್ನು ಅತ್ಯಂತ ಪ್ರೀತಿಸುವ ಅತ್ಯುತ್ತಮ ಸ್ವಭಾವದ ಹೆಣ್ಣುಮಗಳು ಆಗಿದ್ದರು.
ಇನ್ನು ವಿಂದ್ಯಾ ರವರ ಪ್ರತಿದಿನ ದೈನಂದಿನ ಕೆಲಸದಲ್ಲಿ ಒಂದು ಅಭ್ಯಾಸವು ಕೂಡ ಇತ್ತು. ಅದೇನೆಂದರೆ ತಮ್ಮ ತಿಂಡಿ ಆದ ನಂತರ ಬೆಳಗ್ಗೆ ಉಳಿದ ತಿಂಡಿ ಹಾಗೂ ಆಹಾರ ಪದಾರ್ಥಗಳನ್ನು ಪ್ರಾಣಿಗಳಿಗೆ ತಿನ್ನಲು ಮನೆಯ ಹೊರಗಡೆ ಇಡುತ್ತಿದ್ದರು. ಆದರೆ ಈ ತಿಂಡಿಗಳನ್ನು ತಿನ್ನಬೇಕಾಗಿ ರುವುದು ನಾಯಿಗಳು ಅಥವಾ ಬೇರೆ ಪ್ರಾಣಿಗಳು. ಆದರೆ ಪ್ರತಿ ಬಾರಿ ಈ ಆಹಾರವನ್ನು ತಿನ್ನುತ್ತಿದ್ದದ್ದು ಒಬ್ಬ ವಯಸ್ಸಾದ ಮುದುಕ. ಪಾಪ ಅವನಿಗೆ ಹಸಿರಾಗಿರಬೇಕು ತಿನ್ನಲಿ ಬಿಡು ಎಂಬುದಾಗಿ ಅಂದುಕೊಂಡು ವಿಂದ್ಯಾ ರವರು ಸುಮ್ಮನಾಗುತ್ತಿದ್ದರು.
ಇನ್ನು ಪ್ರತಿಬಾರಿ ಕೂಡ ಅಜ್ಜ ಊಟ ಮಾಡಿ ಹೋಗುತ್ತಿರಬೇಕಾದರೆ ಏನನ್ನೋ ಗೊಣಗಿ ಹೋಗುತ್ತಿದ್ದ. ಪ್ರತಿ ಬಾರಿ ಆತ ಹೋಗುವಾಗ ಹೀಗೆ ಮಾಡಿ ಹೋಗುತ್ತಿದ್ದುದನ್ನು ನೋಡಿ ವಿಂದ್ಯಾರವರಿಗೆ ಎಲ್ಲಿಲ್ಲದ ಕುತೂಹಲ ಉಂಟಾಯಿತು. ಅಜ್ಜ ಏನು ಹೇಳಿ ಹೋಗುತ್ತಿದ್ದಾನೆ ಎಂಬುದು ನೋಡಲೇಬೇಕು ಎಂಬುದಾಗಿ ಒಮ್ಮೆ ಆತ ಆಹಾರವನ್ನು ತಿನ್ನಲು ಬಂದಾಗ ವಿಂದ್ಯಾ ರವರು ಅಲ್ಲಿ ಹೋಗಿ ನಿಂತರು. ಆಗ ಅಜ್ಜ ಊಟವನ್ನು ತಿಂದ ನಂತರ ನಿನ್ನ ಪಾಪ ನಿನ್ನಲ್ಲಿಯೇ ಇರುತ್ತದೆ ನಿನ್ನ ಪುಣ್ಯ ಮತ್ತೆ ನಿನ್ನನ್ನು ಹುಡುಕಿಕೊಂಡು ಬರುತ್ತದೆ ಎಂಬುದಾಗಿ ಹೇಳಿ ಹೋಗುತ್ತಾನೆ. ವಿಂದ್ಯಾ ರವರಿಗೆ ಒಂದು ಚೂರು ಕೂಡ ಅರ್ಥವಾಗಲಿಲ್ಲ.
ಪ್ರತಿದಿನ ಬಂದಾಗಲೂ ಕೂಡ ಅಜ್ಜ ಊಟ ಹಾಗೂ ತಿಂಡಿಯನ್ನು ತಿಂದು ಅದೇ ರೀತಿಯ ಮಾತುಗಳನ್ನು ಹೇಳಿ ಹೋಗುತ್ತಿದ್ದ. ಇದು ಹಲವಾರು ಸಮಯಗಳವರೆಗೆ ಕೂಡ ಹೀಗೆ ನಡೆಯುತ್ತದೆ. ವಿಂದ್ಯಾ ರವರಿಗೆ ಅಜ್ಜನ ಮಾತುಗಳನ್ನು ಕೇಳಿ ಕೇಳಿ ಕೇಳಿ ಸಾಕಾಗಿ ನಂತರ ಅಸಹನೆಯ ಕಟ್ಟೆ ಒಡೆದು ಬರುತ್ತದೆ. ಒಮ್ಮೆ ಅಜ್ಜನಿಗೆ ತಿನ್ನುವ ಊಟದಲ್ಲಿ ವಿ’ಷವನ್ನು ನೀಡಬೇಕು ಎಂಬುದಾಗಿ ವಿಂಧ್ಯ ಲೆಕ್ಕಾಚಾರ ಹಾಕುತ್ತಾರೆ. ನಂತರ ಪಾಪ ಆತನೇನೋ ಬಾಯಿಗೆ ಬಂದಂತೆ ಮಾತನಾಡುತ್ತಾನೆ ಎಂದು ನಾನು ಆತನನ್ನು ಹೇಗೆ ಮುಗಿಸಲು ಸಾಧ್ಯ ಇರಲಿಬಿಡಿ ಏನೋ ಮಾತನಾಡುತ್ತಾನೆ ಮಾತನಾಡಿಕೊಂಡು ಹೋಗಲಿ ಎಂಬುದಾಗಿ ಇಡ್ಲಿಯನ್ನು ಅಜ್ಜನಿಗೆ ತಿನ್ನಲು ಇಡುತ್ತಾರೆ. ಎಂದಿನಂತೆ ಅಜ್ಜ ಬಂದು ತಿಂಡಿಯನ್ನು ತಿಂದು ಅದೇ ರೀತಿ ಹೇಳಿ ಹೋಗುತ್ತಾನೆ.
ನಿಮಗೆ ನಾವು ಮೊದಲೇ ಹೇಳಿದಂತೆ ವಿಂಧ್ಯ ರವರ ಮಗ ಆರವ್ ಕೆಲಸ ಹುಡುಕಲು ಚೆನ್ನೈ ಗೆ ಹೋಗಿದ್ದ. ಆದರೆ ಯಾವ ಕೆಲಸವೂ ಸಿಗದೇ ಕೈಯಲ್ಲಿದ್ದ ಹಣವೂ ಕೂಡ ಖಾಲಿಯಾಗಿ ಬಸ್ ಟಿಕೆಟ್ ಗೆ ಕೂಡ ದುಡ್ಡಿಲ್ಲದೆ ಊರಿಗೆ ನಡೆದುಕೊಂಡು ಬಂದಿದ್ದ. ಊರಿಗೆ ಮನೆ ಹತ್ತಿರ ಬಂದಾತನೇ ಪ್ರಜ್ಞೆ ತಪ್ಪಿ ಬಿದ್ದಿದ್ದ. ಆಗ ಯಾರೋ ಮುದುಕ ಕುಡಿಯಲು ನೀರು ಕೊಟ್ಟು ಎಚ್ಚರ ತಪ್ಪಿ ಬಿದ್ದವನನ್ನು ಎಬ್ಬಿಸಿದ್ದರು. ಇದನ್ನು ಆರವ್ ತನ್ನ ತಾಯಿ ಬಳಿ ಹೇಳಿದಾಗ, ಆತ ಇಷ್ಟು ದಿನ ಬಂದು ಊಟ ಮಾಡಿಕೊಂಡು ಹೋಗುತ್ತಿರುವ ಅಜ್ಜನೇ ಎನ್ನುವುದಾಗಿ ವಿಂದ್ಯಾ ರವರಿಗೆ ತಿಳಿದು ಬರುತ್ತದೆ. ಈಗ ವಿಂದ್ಯಾ ರವರಿಗೆ ನಾವು ಮಾಡಿರುವ ಪುಣ್ಯ ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂಬುದರ ಅರ್ಥ ತಿಳಿದುಬರುತ್ತದೆ. ನಿಮಗೂ ಕೂಡ ಈ ಕತೆ ಜೀವನದ ಪಾಠವಾಗಿರಲಿ ಎನ್ನುವುದೇ ನಮ್ಮ ಆಶಯ.
Comments are closed.