ಕೊನೆಗೂ ಬಯಲಾಯಿತು RRR ಚಿತ್ರಕ್ಕಾಗಿ ರಾಜಮೌಳಿಯಿಂದ ಹಿಡಿದು ಎಲ್ಲಾ ನಟ ನಟಿಯರು ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ??
ನಮಸ್ಕಾರ ಸ್ನೇಹಿತರೇ ದೇಶ ವಿದೇಶದಾದ್ಯಂತ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆರ್ ಆರ್ ಆರ್ ಚಿತ್ರದ ಕುರಿತಂತೆ ಸುದ್ದಿಗಳು ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿವೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ರಾಜಮೌಳಿ ನಿರ್ದೇಶನದ ಈ ಚಿತ್ರ ದೊಡ್ಡಮಟ್ಟದ ದಾಖಲೆಯನ್ನು ನಿರ್ಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಹೌದು ಚಿತ್ರತಂಡ ಈಗಾಗಲೇ ಚಿತ್ರದ ಕುರಿತಂತೆ ಪ್ರಮೋಷನ್ ಒಂದು ಬಾರಿ ಮಾಡಿದ್ದು ಈಗ ಮತ್ತೊಮ್ಮೆ ದೇಶದ ಉದ್ದಗಲಕ್ಕೂ ಕೂಡ ಚಿತ್ರದ ಕುರಿತಂತೆ ಪ್ರಮೋಷನ್ ಮಾಡುವುದಕ್ಕಾಗಿ ತಿರುಗಾಡುತ್ತಿದ್ದಾರೆ.
ಇನ್ನು ಚಿತ್ರದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಆಲಿಯಾ ಭಟ್ ನಾಯಕಿಯಾಗಿ ಕಾಣಿಸಿಕೊಂಡರೇ ಅಜಯ್ ದೇವ್ಗನ್ ಕೂಡ ಪ್ರಾಮುಖ್ಯತೆ ಹೊಂದಿರುವ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಚಿತ್ರವನ್ನು ದಾನಯ್ಯ ರವರು ಬರೋಬ್ಬರಿ 500 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದಾರೆ. ಬಾಹುಬಲಿ ಸರಣಿ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ರಾಜಮೌಳಿ ಅವರು ಈ ಚಿತ್ರದ ಮೂಲಕವೂ ಕೂಡ ಜಾಗತಿಕ ಮಟ್ಟದಲ್ಲಿ ಗೆಲ್ಲಲಿದ್ದಾರೆ ಎಂಬುದಾಗಿ ನಂಬಿಕೆಗಳು ಬಲವಾಗಿದೆ. ಈಗ ನಾವು ಮಾತನಾಡಲು ಹೊರಟಿರುವುದು ಆರ್ ಆರ್ ಆರ್ ಚಿತ್ರಕ್ಕಾಗಿ ಜೂನಿಯರ್ ಎನ್ಟಿಆರ್ ರಾಮಚರಣ್ ಅಜಯ್ ದೇವ್ಗನ್ ಆಲಿಯಾ ಭಟ್ ಹಾಗೂ ನಿರ್ದೇಶಕ ರಾಜಮೌಳಿ ಅವರು ಎಷ್ಟು ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ನಿಮಗೆ ವಿವರವಾಗಿ ಹೇಳಲು.
ದಾನಯ್ಯ ನವರ ನಿರ್ಮಾಣದಲ್ಲಿ ಮೂಡಿ ಬಂದಿರುವ ಆರ್ ಆರ್ ಆರ್ ಚಿತ್ರಕ್ಕಾಗಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಹಾಗೂ ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ತಲಾ 45 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ. ಯಾಕೆಂದರೆ ಎರಡು ವರ್ಷಗಳ ಕಾಲ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಆಲಿಯಾ ಭಟ್ ರವರು 15 ನಿಮಿಷದ ಪಾತ್ರಕ್ಕಾಗಿ ಬರೋಬ್ಬರಿ 9 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ನಟ ಅಜಯ್ ದೇವಗನ್ ರವರು ಎಂಟು ನಿಮಿಷದ ಪಾತ್ರಕ್ಕಾಗಿ ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇನ್ನು ಚಿತ್ರದ ಸೂತ್ರಧಾರನಾಗಿರುವ ರಾಜಮೌಳಿ ಅವರು ಸಂಭಾವನೆಯನ್ನು ಪಡೆದುಕೊಳ್ಳದೆ ಚಿತ್ರದ ಲಾಭದಲ್ಲಿ ಪಾಲುದಾರಿಕೆಯನ್ನು ಪಡೆದುಕೊಳ್ಳುವ ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ಈ ನಿಯಮದ ಪ್ರಕಾರ ಚಿತ್ರ ಗಳಿಸುವ ಹಣದಲ್ಲಿ 30% ಲಾಭವನ್ನು ರಾಜಮೌಳಿ ಅವರು ಪಡೆದುಕೊಳ್ಳಲಿದ್ದಾರೆ. ಅಂದರೆ ಒಂದು ವೇಳೆ ಚಿತ್ರ ಸಾವಿರ ಕೋಟಿ ದುಡಿದರೆ 300 ಕೋಟಿ ರೂಪಾಯಿ ರಾಜಮೌಳಿ ಅವರ ಜೇಬಿಗೆ ಸೇರಲಿದೆ. ಇದೇ ಜನವರಿ 7ರಿಂದ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಘರ್ಜಿಸಲು ಚಿತ್ರ ರೆಡಿಯಾಗಿದೆ.
Comments are closed.