Neer Dose Karnataka
Take a fresh look at your lifestyle.

ಜೂನಿಯರ್ ಚಿರು ಸರ್ಜಾ ಜೊತೆ ತಾಯಿ ಮೇಘನರಾಜ್ ಕ್ರಿಸ್ಮಸ್ ಸೆಲೆಬ್ರೇಶನ್!! ಫೋಟೋ ಫುಲ್ ವೈರಲ್. ಹೇಗಿದೆ ಗೊತ್ತಾ ರಯಾನ್ ಲುಕ್.

ನಮಸ್ಕಾರ ಸ್ನೇಹಿತರೇ ನಟಿ ಮೇಘನಾ ರಾಜ್ ರವರು ಒಂದು ಲೆಕ್ಕದಲ್ಲಿ ದುರಾದೃಷ್ಟವಂತರು ಎಂದು ಹೇಳಿದರೆ ಇನ್ನೊಂದು ಲೆಕ್ಕದಲ್ಲಿ ಅದೃಷ್ಟವಂತರು ಎಂದು ಹೇಳಬಹುದಾಗಿದೆ. ಪ್ರೀತಿಸಿ ಮದುವೆಯಾಗಿದ್ದ ಗಂಡನನ್ನು 5 ತಿಂಗಳ ಗರ್ಭಿಣಿ ಇದ್ದಾಗಲೇ ಕಳೆದುಕೊಂಡರು. ಆದರೆ ಜೀವನಕ್ಕೆ ಆಸರೆ ಎಂಬಂತೆ ಮಗನನ್ನು ಚಿರುರವರ ಪುನರ್ಜನ್ಮ ಎಂಬಂತೆ ಪಡೆದುಕೊಂಡರು. ಗಂಡನನ್ನು ಕಳೆದುಕೊಂಡ ಮೇಲೆ ದುಃಖದ ಮಡುವಲ್ಲಿ ಮುಳುಗಿದ್ದಂತಹ ಮೇಘನಾ ರಾಜ್ ರವರು ಮಗನ ಆಗಮನದಿಂದಾಗಿ ಜೀವನದಲ್ಲಿ ಯಾವುದು ಆಶಾಕಿರಣ ಮಿನುಗುತ್ತಿದೆ ಎಂಬ ಭಾವನೆಯಲ್ಲಿ ಬದುಕುತ್ತಿದ್ದಾರೆ.

ಇನ್ನು ಈಗಾಗಲೇ ಜೂನಿಯರ್ ಚಿರು ಸರ್ಜಾ ರವರಿಗೆ ಅದ್ದೂರಿಯಾಗಿ ರಾಯನ್ ರಾಜ್ ಸರ್ಜಾ ಎಂಬ ನಾಮಕರಣವನ್ನು ಕೂಡ ಮಾಡಿದ್ದಾರೆ. ಮಗನ ಮೊದಲ ವರ್ಷದ ಹುಟ್ಟಿದ ಹಬ್ಬವನ್ನು ಹಲವಾರು ಸೆಲೆಬ್ರಿಟಿಗಳು ಸಮ್ಮುಖದಲ್ಲಿ ಅದ್ದೂರಿಯಾಗಿ ನೆನಪಿಡುವಂತೆ ಆಚರಿಸಿದ್ದಾರೆ. ಮಗನಿಗಾಗಿ ತಾನು ಜೀವಿಸಬೇಕೆಂದು ಧ್ಯೇಯೋದ್ದೇಶವನ್ನು ಹೊಂದಿರುವ ಮೇಘನಾ ರಾಜ್ ರವರು ಈಗಾಗಲೇ ಕೆಲವೊಂದು ಚಿತ್ರಗಳಲ್ಲಿ ನಟಿಸುವುದಕ್ಕೆ ಸಹಿ ಕೂಡ ಹಾಕಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಮೇಘನರಾಜ್ ರವರು ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಸಖತ್ ಆಕ್ಟೀವ್ ಆಗಿರುತ್ತಾರೆ. ಜೂನಿಯರ್ ಚಿರು ಸರ್ಜಾ ರವರ ಫೋಟೋಗಳನ್ನು ಕೂಡ ಅಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ.

ಇತ್ತೀಚಿಗಷ್ಟೇ ಕ್ರಿಸ್ಮಸ್ ಹಬ್ಬದ ವಿಶೇಷವಾಗಿ ಜೂನಿಯರ್ ಚಿರು ಸರ್ಜಾ ರವರೊಂದಿಗೆ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಕ್ರಿಸ್ಮಸ್ ಟ್ರೀ ಪಕ್ಕದಲ್ಲಿ ಮೇಘನಾ ರಾಜ್ ಅವರು ಕಪ್ಪು ಬಣ್ಣದ ಬಟ್ಟೆಯಲ್ಲಿ ಹಾಗೂ ಜೂನಿಯರ್ ಚಿರುಸರ್ಜ ಶ್ವೇತವರ್ಣದ ಬಟ್ಟೆಯಲ್ಲಿ ಮಿಂಚುತ್ತಿದ್ದಾರೆ. ಇವರಿಬ್ಬರ ಫೋಟೋವನ್ನು ನೋಡಿ ಒಮ್ಮೆ ದೃಷ್ಟಿ ತೆಗೆಯಬೇಕೆಂದು ಅನಿಸಿದ್ದು ಸುಳ್ಳಲ್ಲ. ಇದೇ ರೀತಿ ಮುಂದಿನ ಜೀವನದಲ್ಲಿ ಇಬ್ಬರು ನಗುನಗುತ ಬಾಳಲಿ ಎಂಬುದು ನಮ್ಮ ಹಾರೈಕೆ. ಈ ಫೋಟೋ ನೋಡಿ ನಿಮಗೇನನ್ನಿಸಿತು ಎಂಬುದನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ.

Comments are closed.