ಈ ರಾಶಿಯವರು ಕುಂಕುಮ ಇಟ್ಟುಕೊಂಡರೆ ಪ್ರಾರಂಭವಾಗುತ್ತದೆ ಶುಕ್ರದೆಸೆ; ನಿಮ್ಮ ರಾಶಿ ಕೂಡ ಇದರಲ್ಲಿ ಇದೆಯಾ ನೋಡಿ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯ ಪ್ರಕಾರದಲ್ಲಿ ಸಾಕಷ್ಟು ಆಚರಣೆಗಳು ಪಾವಿತ್ರ್ಯತೆಯ ಸ್ಥಾನವನ್ನು ಪಡೆದುಕೊಂಡಿದೆ. ಹಲವಾರು ಆಚಾರ-ವಿಚಾರಗಳಿಗೆ ಅದರದ್ದೇ ಆದಂತಹ ಸಾಂಸ್ಕೃತಿಕ ಇತಿಹಾಸವಿದೆ. ಅವುಗಳಲ್ಲಿ ಕುಂಕುಮ ಹಾಗೂ ಅರಶಿನ ಧಾರಣೆ ಕೂಡ ಒಂದಾಗಿದೆ. ಕುಂಕುಮ ಹಾಗೂ ಅರಸಿನ ಧಾರಣೆಗೆ ಹಿಂದೂ ಸಂಸ್ಕೃತಿಯಲ್ಲಿ ಸಾಕಷ್ಟು ಪವಿತ್ರವಾದಂತಹ ಇತಿಹಾಸವಿದೆ. ಯಾವುದು ದೇವರ ಕಾರ್ಯಗಳಲ್ಲಿ ಕುಂಕುಮವನ್ನು ನಾವು ಹಣೆಗೆ ಹಾಕಿಕೊಳ್ಳುವುದನ್ನು ನೀವು ನೋಡಿರಬಹುದು.
ಇದು ಶುಭ ಸಂಕೇತ ಎನ್ನುವುದು ಪ್ರತಿಯೊಬ್ಬರಿಗೂ ಚೆನ್ನಾಗಿ ತಿಳಿದಿದೆ. ಆದರೆ ಈಗ ಮುಂದುವರೆದಿರುವ ಜಗತ್ತಿನಲ್ಲಿ ಸಂಸ್ಕೃತಿಯ ಆಚರಣೆಗಳನ್ನು ಹಾಗೂ ಅದರ ಮಹತ್ವ ಗಳನ್ನು ತಿಳಿಯುವ ಆಸಕ್ತಿ ಯಾರಿಗೂ ಇಲ್ಲ. ಅದಕ್ಕಿಂತ ಹೆಚ್ಚಾಗಿ ಹಣೆಗೆ ಕುಂಕುಮ ಇಡುವುದು ಎಲ್ಲರೂ ತಮ್ಮ ಫ್ಯಾಶನ್ ಗೆ ವಿರುದ್ಧ ಎಂಬುದಾಗಿ ಭಾವಿಸಿರುತ್ತಾರೆ. ಯಾರು ಏನೇ ಭಾವಿಸಲಿ ಕುಂಕುಮಕ್ಕೆ ಇರುವ ಮಹತ್ವ ಎಂದಿಗೂ ಕೂಡ ಕಡಿಮೆಯಾಗುವುದಿಲ್ಲ. ಇಂದಿನ ವಿಚಾರದಲ್ಲಿ ನಾವು ಯಾವ ಕುಂಕುಮವನ್ನು ಯಾವ ರಾಶಿಯವರು ಧರಿಸಿದರೆ ಏನು ಲಾಭ ಎಂಬುದರ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ.
ಒಂದು ವೇಳೆ ನೀವು ಮೇಷ ಅಥವಾ ವೃಶ್ಚಿಕ ರಾಶಿಯವರಾಗಿದ್ದರೆ ಕಿತ್ತಳೆ ಬಣ್ಣದ ಸಿಂಧೂರವನ್ನು ನಿಮ್ಮ ಹಣೆಗೆ ಉಂಗುರದ ಬೆರಳಿನಿಂದ ಹಾಕಿಕೊಳ್ಳುವುದರಿಂದ ಮಂಗಳನ ಸ್ಥಾನ ಬಲವಾಗಿ ನಿಮಗೆ ಮಂಗಳನ ಅನುಗ್ರಹವಾಗಲಿದೆ. ಇದರಿಂದ ನಿಮ್ಮ ಎಲ್ಲಾ ಕಾರ್ಯಗಳು ಕೂಡಾ ಮಂಗಳಕರವಾಗಿ ನಡೆಯಲಿದೆ. ಒಂದು ವೇಳೆ ನಿಮ್ಮ ರಾಶಿ ತುಲಾ ಅಥವಾ ವೃಷಭ ಆಗಿದ್ದರೆ ಉಂಗುರದ ಬೆರಳಿನಿಂದ ಕೆಂಪು ಕುಂಕುಮ ಹಾಗು ಅಕ್ಷತೆಯನ್ನು ಹಣೆಗೆ ಇಟ್ಟುಕೊಂಡರೆ ನಿಮಗೆ ಶುಕ್ರದಶೆ ಪ್ರಾರಂಭವಾಗುತ್ತದೆ. ಶುಕ್ರನ ಅನುಗ್ರಹ ನೀವು ಮಾಡುವ ಎಲ್ಲಾ ಕೆಲಸದ ಮೇಲೆ ಕೂಡ ಇರುತ್ತದೆ. ಮಿಥುನ ಹಾಗೂ ಕನ್ಯಾ ರಾಶಿಯವರು ಅಷ್ಟಗಂಧ ತಿಲಕವನ್ನು ಹಣೆಗೆ ಇಟ್ಟುಕೊಳ್ಳುವುದರಿಂದ ಬುದ ದೋಷ ಕರಗಿಹೋಗಿ ಒಳ್ಳೆಯ ದಿನಗಳು ಆಗಮಿಸುತ್ತದೆ. ಕರ್ಕ ರಾಶಿಯವರು ಬಿಳಿ ಕುಂಕುಮವನ್ನು ಹಾಕಿಕೊಳ್ಳುವುದರಿಂದ ಅವರ ಗ್ರಹಗತಿ ಯಲ್ಲಿ ಚಂದ್ರನ ಬಲವರ್ಧನೆ ಆಗುತ್ತದೆ. ಇವುಗಳಲ್ಲಿ ನಿಮ್ಮ ರಾಶಿ ಯಾವುದು ಎಂಬುದನ್ನು ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಿ.
Comments are closed.