ರಾತ್ರಿ ಬಡವನ ಮನೆಗೆ ಹೋದ ಶ್ರೀಮಂತ ಆತ ಮಾಡುತ್ತಿದ್ದ ಕೆಲಸ ನೋಡಿ ಬೆಚ್ಚಿಬಿದ್ದ ಯಾಕೆ ಗೊತ್ತಾ?? ಆ ಬಡವ ಒಬ್ಬನೇ ಏನೆಲ್ಲಾ ಮಾಡುತ್ತಿದ್ದನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಒಬ್ಬ ಕೋಟ್ಯಾಧೀಶ ಕಾರಿನಲ್ಲಿ ಹೋಗುತ್ತಿದ್ದ. ಆ ಸಂದರ್ಭದಲ್ಲಿ ಅವನ ಕಾರು ಒಂದು ಹಳ್ಳಿಯಲ್ಲಿ ಕೆಟ್ಟುಹೋಗಿ ನಿಲ್ಲುತ್ತದೆ. ಆಗ ಆತನಿಗೆ ಈ ಹಳ್ಳಿಯಲ್ಲಿ ನನ್ನ ಕಾರು ಕೆಟ್ಟು ಹೋಗಿದೆ ಈಗ ನಾನೇನು ಮಾಡಲಿ ಎಂಬ ಯೋಚನೆಗೆ ಬೀಳುತ್ತಾನೆ. ಆಗಲೆ ದೂರದಲ್ಲಿ ಕಾಣುತ್ತಿದ್ದ ನೇಕಾರ ನೊಬ್ಬನ ಮನೆಗೆ ಹೋಗಿ ಶ್ರೀಮಂತ ನನ್ನ ಕಾರು ಕೆಟ್ಟು ಹೋಗಿ ನಿಂತಿದೆ ಸರ್. ನಾನು ಬಹಳಷ್ಟು ದೂರದಿಂದ ಬಂದಿದ್ದೇನೆ ಇನ್ನೂ ಬಹಳಷ್ಟು ದೂರ ಹೋಗಬೇಕಾಗಿದೆ. ಕಾರ್ ರಿಪೇರಿ ಮಾಡಲು ಮೆಕಾನಿಕ್ ಬರುವ ತನಕ ನಾನು ನಿಮ್ಮ ಮನೆಯಲ್ಲಿ ಉಳಿದುಕೊಳ್ಳಬಹುದೇ ಎಂಬುದಾಗಿ ಕೇಳುತ್ತಾನೆ.
ಇನ್ನು ಆ ನೇಕಾರನಿಗೆ ಈತ ಒಬ್ಬ ದೊಡ್ಡ ಶ್ರೀಮಂತ ಎನ್ನುವ ವಿಚಾರ ಗೊತ್ತಿಲ್ಲ. ಪರ್ವಾಗಿಲ್ಲ ಸರ್ ನಮ್ಮ ಮನೆಯಲ್ಲಿ ಇವತ್ತು ರಾತ್ರಿ ಉಳಿದುಕೊಂಡು ಬಿಡಿ ಎಂಬುದಾಗಿ ಶ್ರೀಮಂತನಿಗೆ ನೇಕಾರ ಮನೆಯಲ್ಲಿರಲು ಒಪ್ಪಿಗೆ ನೀಡುತ್ತಾನೆ. ಇನ್ನು ರಾತ್ರಿ ಶ್ರೀಮಂತ ಅವನ ಮನೆಯಲ್ಲೇ ಉಳಿದುಕೊಂಡು ಬಿಡುತ್ತಾನೆ. ಬೆಳಿಗ್ಗೆ ಅವನು ಏಳುವುದಕ್ಕೆ ಮುಂಚೆನೇ ನೇಕಾರನು ತನ್ನ ಸೀರೆ ನೇಯ್ಯುವ ಕೆಲಸಕ್ಕೆ ಹೊರಟುಹೋಗಿ ಕೆಲಸವನ್ನು ಪ್ರಾರಂಭ ಮಾಡಿರುತ್ತಾನೆ.
ಇನ್ನು ಶ್ರೀಮಂತ ಬೆಳಗ್ಗೆ ಎದ್ದು ನೇಕಾರನ ಬಳಿಗೆ ಹೋದಾಗ ಎಡಗೈಗೆ ಬಳ್ಳಿಯನ್ನು ಕಟ್ಟಿ ಕೊಂಡಿರುತ್ತಾರೆ. ಅದಕ್ಕೆ ಯಾಕೆ ಇನ್ನು ಶ್ರೀಮಂತ ಕೇಳಿದಾಗ ತೊಟ್ಟಿಲು ನಲ್ಲಿರುವ ಮಗುವನ್ನು ತೂಗಲು ಈ ತರಹ ಹಗ್ಗವನ್ನು ಕಟ್ಟಿಕೊಂಡಿದ್ದೇನೆ ಸಾರ್ ಎಂಬುದಾಗಿ ನೇಕಾರ ಹೇಳುತ್ತಾನೆ. ಎಡಗಾಲಿಗೆ ಕೋಲನ್ನು ಕೂಡ ಕಟ್ಟಿಕೊಂಡಿರುತ್ತಾರೆ ಅದನ್ನು ಯಾಕೆ ಏನು ಶ್ರೀಮಂತ ಕೇಳಿದಾಗ ನೇಕಾರ ನನ್ನ ಹೆಂಡತಿ ಹೊರಗ ಧಾನ್ಯಗಳನ್ನು ಬಿಸಿಲಿಗೆ ಒಣಗಿಸಲು ಇಟ್ಟಿದ್ದಾಳೆ ಅಲ್ಲಿ ಪಕ್ಷಿ ಬಂದರೆ ಕೋಲಿನ ತುದಿಗೆ ಕಟ್ಟಿರುವ ಕೊಡೆ ಎಳೆದಾಕ್ಷಣ ಬಿಚ್ಚಿಕೊಳ್ಳುತ್ತದೆ ಆಗ ಪಕ್ಷಿಗಳು ಓಡಿಹೋಗುತ್ತವೆ ಎಂಬುದಾಗಿ ಹೇಳುತ್ತಾನೆ.
ಇದರ ತಕ್ಷಣನೇ ಕಾರಣ ಸೊಂಟದಲ್ಲಿ ಕಟ್ಟಿರುವ ಮಣಿಸರ ಶ್ರೀಮಂತನಿಗೆ ಕಾಣಿಸುತ್ತದೆ. ಆಗ ನೇಕಾರನ ಬಳಿ ಶ್ರೀಮಂತ ಮಣಿಸರವನ್ನು ಯಾಕೆ ಕಟ್ಟಿಕೊಂಡಿದ್ದೀರಿ ಎಂಬುದಾಗಿ ಕೇಳುತ್ತಾನೆ. ಆ ಸಂದರ್ಭದಲ್ಲಿ ನೇಕಾರ ನಮ್ಮ ಮನೆಯಲ್ಲಿ ಇಲಿಗಳ ಕಾಟ ಜಾಸ್ತಿ ಸರ್ ಅದಕ್ಕಾಗಿಯೇ ಮಣಿಸರವನ್ನು ನನ್ನ ಸೊಂಟದಲ್ಲಿ ಕಟ್ಟಿಕೊಂಡಿರುತ್ತೇವೆ ನಾನು ನಡೆದಾಗಲೆಲ್ಲ ಮಣಿಸರ ತುದಿಯಲ್ಲಿರುವ ಗಂಟೆ ಅಲ್ಲಾಡುತ್ತದೆ ಗಂಟೆಯ ಶಬ್ದ ಕೇಳಿ ಇಲಿ ಹೆದರಿಕೊಂಡು ಓಡಿ ಹೋಗುತ್ತದೆ ಎಂಬುದಾಗಿ ಹೇಳುತ್ತಾನೆ.
ಇನ್ನು ಮನೆ ಹೊರಗಡೆ ಸುಮಾರು ಮಕ್ಕಳು ಇವರನ್ನೇ ನೋಡುತ್ತ ನಿಂತಿದ್ದರು. ಆಗ ಶ್ರೀಮಂತ ನೇಕಾರನ ಬಳಿ ಮಕ್ಕಳು ಯಾಕೆ ಹಾಗೆ ಹೊರಗ ನಿಂತಿದ್ದಾರೆ ಎಂಬುದಾಗಿ ಕೇಳುತ್ತಾನೆ. ಆಗ ನೇಕಾರ ಮಕ್ಕಳಿಗೆ ನಾನು ಸಂಗೀತವನ್ನು ಹೇಳಿಕೊಡುತ್ತಿದ್ದೇನೆ ಅದಕ್ಕಾಗಿ ಮಕ್ಕಳು ಬಂದಿದ್ದಾರೆ ಎಂಬುದಾಗಿ ಹೇಳುತ್ತಾನೆ. ಸಂಗೀತ ಕಲಿಯುವುದಾದರೆ ಮನೆಯ ಒಳಗಡೆ ಬಂದು ಕಲಿಯಬಹುದಲ್ಲ ಯಾಕೆ ಹೊರಗಡೆ ನಿಂತಿದ್ದಾರೆ ಎಂಬುದಾಗಿ ಕೇಳುತ್ತಾನೆ. ಹೊರಗೆ ಮಣ್ಣು ಇದೆ ಮಕ್ಕಳ ಬಳಿ ಅದನ್ನು ನೀರಿನಲ್ಲಿ ಹಾಕಿ ತುಳಿಯುತ್ತ ಹದ ಮಾಡಲು ಹೇಳಿದ್ದೇನೆ ಅದಕ್ಕಾಗಿ ಹೊರಗೆ ನಿಂತು ಕೆಲಸ ಮಾಡುತ್ತಾ ಹಾಡನ್ನು ಕಲಿಯುತ್ತಿದ್ದಾರೆ ಎಂಬುದಾಗಿ ಹೇಳುತ್ತಾರೆ. ಆಗ ಶ್ರೀಮಂತ ಒಂದೇ ಸಮಯದಲ್ಲಿ ನೇಕಾರ ಇಷ್ಟೊಂದು ಕೆಲಸ ಮಾಡುತ್ತಾನಲ್ಲ ಎಂಬುದಾಗಿ ಯೋಚನೆಗೆ ಬಿದ್ದ.
ಇದನ್ನೇ ಶ್ರೀಮಂತ ನೇಕಾರನಿಗೆ ಹೇಳಿದಾಗ ಇಷ್ಟು ಮಾತ್ರ ಅಲ್ಲ ಸರ್ ನಾನು ನನ್ನ ಹೆಂಡತಿ ಪ್ರತಿದಿನ ಹೊರಗೆ ಹೋಗುವಾಗ ಗ್ರೀಕ್ ಭಾಷೆಯಲ್ಲಿ ಸ್ಲೇಟ್ ಮೇಲೆ ಹತ್ತು ಪದಗಳನ್ನು ಬರೆದು ಹೋಗುತ್ತಾಳೆ ನಾನು ಅದನ್ನು ಕೂಡ ಕಲಿಯುತ್ತೇನೆ ಎಂಬುದಾಗಿ ಹೇಳುತ್ತಾನೆ. ಒಂದೇ ಸಮಯದಲ್ಲಿ ಇಷ್ಟೆಲ್ಲ ಕೆಲಸ ಮಾಡುವ ನೇಕಾರನ ಜೀವನ ಎನ್ನುವುದು ಇಂದಿನ ಯುವಜನತೆಗೆ ಸಾಕಷ್ಟು ಸ್ಪೂರ್ತಿಯಾಗಿದೆ. ನಮ್ಮಲ್ಲಿ ಕೆಲವು ಯುವಕರು ಏನು ಕೆಲಸ ಮಾಡದೆ ಬಿಟ್ಟಿಯಾಗಿ ಕೂತಿರುತ್ತಾರೆ. ಅಂಥವರು ನೇಕಾರನ ಜೀವನವನ್ನು ಮಾದರಿಯನ್ನಾಗಿರಿಸಿಕೊಳ್ಳಬೇಕು. ಈ ಕಥೆಯನ್ನು ಕೇಳಿದ್ರಲ್ಲ ಇದರ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.