ಪುನೀತ್ ನನಗೆ ಏನಾಗಬೇಕೆಂದು ಅಪ್ಪು ಕುರಿತಂತೆ ಮನಬಿಚ್ಚಿ ಮಾತನಾಡಿದ ವಿನೋದ್ ರಾಜ್. ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಅಜಾತಶತ್ರು ವಾಗಿದ್ದರು. ಅವರನ್ನು ನಾವು ಕಳೆದುಕೊಂಡು ಇಷ್ಟು ದಿನ ಕಳೆದು ಹೋಗಿದೆ ಎಂಬುದನ್ನು ಕೂಡ ನಂಬಲು ಸಾಧ್ಯವಾಗುತ್ತಿಲ್ಲ. ತಾವು ಇದ್ದಷ್ಟು ದಿನ ಕೂಡ ಸದಾ ಹಸನ್ಮುಖರಾಗಿ ಎಲ್ಲರ ಮುಖದಲ್ಲಿ ಸಂತೋಷವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದರು ನಮ್ಮ ನೆಚ್ಚಿನ ಅಪ್ಪು. ಅಪ್ಪು ಅವರನ್ನು ಕಳೆದುಕೊಂಡಿರುವುದು ಸುದ್ದಿ ಕೇವಲ ಅಭಿಮಾನಿಗಳಾದ ನಮಗೆ ಇಷ್ಟೊಂದು ದುಃಖವನ್ನು ನೀಡುತ್ತದೆ ಎಂದರೆ ಖಂಡಿತವಾಗಿಯೂ ಅವರ ಮನೆಯವರಿಗೆ ಯಾವ ರೀತಿಯಲ್ಲಿ ಅದು ದುಃಖವನ್ನು ನೀಡಿರಬೇಡ ಎಂಬುದನ್ನು ನೀವು ಅಂದಾಜು ಹಾಕಿಕೊಳ್ಳಿ.
ಅಪ್ಪು ಅವರು ಮರಣ ಹೊಂದಿದ ಸಂದರ್ಭದಲ್ಲಿ ಹಲವಾರು ಗಣ್ಯಾತಿಗಣ್ಯರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದರು. ಅವರಲ್ಲಿ ನಟಿ ಲೀಲಾವತಿ ಅಮ್ಮ ಹಾಗೂ ನಟ ವಿನೋದ್ ರಾಜ್ ಕೂಡ ಹೌದು. ಪುನೀತ್ ರಾಜಕುಮಾರ್ ಅವರು ಚಿಕ್ಕವಯಸ್ಸಿನಲ್ಲಿ ಕಂಡಂತಹ ಘಟನೆಗಳನ್ನು ಕೂಡ ಈ ಸಂದರ್ಭದಲ್ಲಿ ನಟಿ ಲೀಲಾವತಿಯವರ ನೆನಪಿಸಿಕೊಂಡು ದುಃಖಿಸಿದ್ದಾರೆ. ಪುನೀತ್ ರಾಜಕುಮಾರ್ ರವರನ್ನು ಚಿಕ್ಕವಯಸ್ಸಿನಿಂದಲೂ ನೋಡಿಕೊಂಡು ಬಂದಿದ್ದೇನೆ ಎಂಬುದಾಗಿ ಕೂಡಾ ಆಕೆ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾರೆ.
ಇಷ್ಟು ಮಾತ್ರವಲ್ಲದೆ ಎರಡು ನಕ್ಷತ್ರಗಳು ಚಿತ್ರದಲ್ಲಿ ನನ್ನ ಮಗನಾಗಿ ಪಾತ್ರವನ್ನು ಮಾಡಿದ್ದಾನೆ ಸಿಕ್ಕಿದಾಗಲೆಲ್ಲ ನಾನೆಂದರೆ ತುಂಬಾ ಪ್ರೀತಿ ತೋರಿಸುತ್ತಿದ್ದ ನಮ್ಮ ಅಪ್ಪು ಎಂಬುದಾಗಿ ಹೇಳಿಕೊಂಡಿದ್ದಾರೆ. ನಾನೆಂದರೆ ಪುನೀತ್ ರಾಜಕುಮಾರ್ ಗೆ ಎಲ್ಲಿಲ್ಲದ ಪ್ರೀತಿ ಹಾಗೂ ಗೌರವ ಎಲ್ಲೆ ಸಿಕ್ಕಿದರೂ ಕೂಡ ಬಂದು ಮಾತನಾಡಿಸಿ ಹೋಗುತ್ತಿದ್ದ. ಇನ್ನು ಎರಡು ಚಿತ್ರಗಳಲ್ಲಿ ನಾನು ಅವನೊಂದಿಗೆ ನಟಿಸಿದ್ದೇನೆ ಆದರೆ ನೆನಪಿಗೆ ಬರುತ್ತಿಲ್ಲ ಅಪ್ಪು ಇನ್ನು ಯಾವತ್ತೂ ಮಾತನಾಡುವುದಿಲ್ಲ ಎಂಬುದನ್ನು ಮನಸ್ಸಿಗೆ ಅರಗಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ ಎಂಬುದಾಗಿ ಲೀಲಾವತಿ ಅಮ್ಮ ಹೇಳಿಕೊಂಡಿದ್ದಾರೆ. ವಿಧಿಯಾಟದ ಮುಂದೆ ಏನು ಕೂಡ ಮಾಡಲು ಸಾಧ್ಯವಾಗುವುದಿಲ್ಲ ಆದರೆ ಪುನೀತ್ ತುಂಬ ಶ್ರೇಷ್ಠನಾದವನು ಅವನು ನಮಗೆ ಬೇಕೇ ಬೇಕು ಎಂಬುದಾಗಿ ಕಣ್ಣೀರು ಹಾಕಿದ್ದಾರೆ.
ಕಸ್ತೂರಿ ನಿವಾಸ ಸಿನಿಮಾದಲ್ಲಿ ಅಣ್ಣಾವ್ರು ಹೇಗೆ ತಮ್ಮಲ್ಲಿರುವ ಎಲ್ಲವನ್ನು ದಾನ ನೀಡುತ್ತಾರೋ ಹಾಗೆ ನಿಜ ಜೀವನದಲ್ಲಿ ಕೂಡ ಪುನೀತರಾಜಕುಮಾರ್ ಅವರು ಅದರಂತೆ ನಡೆದುಕೊಂಡಿದ್ದಾರೆ. ನೃತ್ಯದ ಕುರಿತಂತೆ ಸಾಕಷ್ಟು ಆಸಕ್ತಿ ಇದ್ದವರು ಪ್ರತಿದಿನ ಹೊಸತನ್ನು ಕಲಿಯಲು ಹಾತೊರೆಯುತ್ತಿದ್ದರು. ದೈಹಿಕವಾಗಿ ಕೂಡ ಕಸರತ್ತನ್ನು ಪ್ರತಿನಿತ್ಯ ಮಾಡುತ್ತಿದ್ದರು ಎಂಬುದಾಗಿ ವಿನೋದ್ ರಾಜ್ ಅವರು ಹೇಳಿದ್ದಾರೆ. ವಿನೋದ್ ರಾಜ್ ರವರು ಮುಂದುವರೆದು ಅಷ್ಟೊಂದು ಸಾಧಿಸಬೇಕೆಂಬ ಛಲ ಇನ್ನೊಬ್ಬ ನಟ ನಲ್ಲಿ ಬರುವುದು ಖಂಡಿತವಾಗಿ ಕಷ್ಟಸಾಧ್ಯ ಮುಂದಾಗಿ ಕೂಡ ಹೇಳಿದ್ದಾರೆ. ಪುನೀತ್ ರಾಜಕುಮಾರ್ ಒಬ್ಬ ಶ್ರಮಜೀವಿ ಆಗಿದ್ದು ಸಮಾಜಮುಖಿ ಕಾರ್ಯಗಳಿಂದಾಗಿ ಎಲ್ಲರ ಮನಗೆದ್ದಿದ್ದಾರೆ. ಅತಿ ಚಿಕ್ಕ ವಯಸ್ಸಿಗೆ ಇಷ್ಟೊಂದು ಸಾಧನೆ ಮಾಡಿರುವುದು ನಮ್ಮೆಲ್ಲರಿಗೂ ಕೂಡ ಅವರು ಸ್ಪೂರ್ತಿಯಾಗಿದ್ದಾರೆ ತಂದೆಗೆ ತಕ್ಕಮಗ ಎಂಬುದನ್ನು ಕೂಡ ನಾವು ಇಲ್ಲಿ ನೆನಪಿಸಿಕೊಳ್ಳಬಹುದು ಎಂಬುದಾಗಿ ವಿನೋದ್ ರಾಜ್ ಹೇಳಿದ್ದಾರೆ.
ಅಪ್ಪು ಕೊನೆಕ್ಷಣದಲ್ಲಿ ನನಗೆ ಸಹಿಸಲಾಗದಷ್ಟು ನೋ’ವು ಬರುತ್ತಿದೆ ಎಂದು ಹೇಗೆ ಹೇಳಿದೆನೋ ಅದನ್ನು ಹೇಗೆ ಸಹಿಸಿದರೋ ಅದನ್ನು ಈಗಲೂ ಕೂಡ ನೆನೆಸಿಕೊಂಡರು ಕೂಡ ಕಣ್ಣೀರು ಉಮ್ಮಳಿಸಿ ಬರುತ್ತದೆ ಎಂಬುದಾಗಿ ಹೇಳಿದ್ದಾರೆ. ನಾವಿಬ್ಬರೂ ಮೊದಲಿನಿಂದಲೂ ಕೂಡ ಜೊತೆಯಲ್ಲಿ ಇದ್ದಿಲ್ಲ ಜೊತೆಯಾಗಿ ಆಟ ಆಡಿಲ್ಲ. ಆದರೆ ಕೆಲವು ಸಮಯ ಗಳನ್ನು ಮಾತ್ರ ಕಳೆದಿದ್ದೇವೆ. 46ನೇ ವಯಸ್ಸಿಗೆ ಅಪ್ಪು ನಮ್ಮನ್ನೆಲ್ಲ ಬಿಟ್ಟು ಹೋಗುತ್ತಾನೆ ಎಂದರೆ ಅದನ್ನು ನಂಬಲು ಕೂಡ ಸಾಧ್ಯವಿಲ್ಲ.
ಇಷ್ಟು ಚಿಕ್ಕ ವಯಸ್ಸಿಗೆ ಆತ ನಗುಮುಖದಿಂದ ಹೊರಟು ನಮಗೆಲ್ಲ ಬೇಸರವನ್ನು ಕೊಟ್ಟು ಬಿಟ್ಟು ಹೋಗ್ಬಿಟ್ಟ. ನೀನಿಲ್ಲದೆ ಒಂಟಿಯಾಗಿ ಹೋದೆವು ಕಂದ ಕಂಬನಿಗೆ ಕೊನೆಯಿಲ್ಲ ಕಂದ ನನ್ನ ಮುದ್ದು ಕಂದ ಎನ್ನುವುದಾಗಿ ಭಾವನಾತ್ಮಕವಾಗಿ ಹಾಡನ್ನು ಹೇಳುವ ಮೂಲಕ ವಿನೋದ್ ರಾಜ್ ರವರು ಪುನೀತ್ ರವರನ್ನು ಕಳೆದುಕೊಂಡಿರುವ ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡಿರುವ ದುಃಖ ಮನೆಯವರಷ್ಟೇ ವಿನೋದ್ ರಾಜ್ ಹಾಗೂ ಲೀಲಾವತಿ ಅಮ್ಮನವರಿಗೂ ಕೂಡ ಆಗಿರುವುದು ಈ ಘಟನೆಯ ಮುಖಾಂತರ ನಾವು ತಿಳಿದುಕೊಳ್ಳಬಹುದಾಗಿದೆ.
Comments are closed.