ವಿಚ್ಛೇದನ ಪಡೆದ ನಂತರ ಮೊದಲ ಬಾರಿಗೆ ಒಂದೇ ಸ್ಥಳದಲ್ಲಿ ಕಾಣಿಸಿಕೊಂಡ ನಾಗಚೈತನ್ಯ ಹಾಗೂ ಸಮಂತ ನಡೆದಿದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ 2021 ಅತ್ಯಂತ ದೊಡ್ಡ ಬ್ರೇಕಿಂಗ್ ನ್ಯೂಸ್ ಗಳಲ್ಲಿ ಸಮಂತ ಹಾಗೂ ನಾಗಚೈತನ್ಯ ರವರ ವಿವಾಹ ವಿಚ್ಛೇದನದ ಸುದ್ದಿ ಕೂಡ ಒಂದು. ಹಲವಾರು ವರ್ಷಗಳ ಪ್ರೀತಿಯ ನಂತರ ನಾಗಚೈತನ್ಯ ಹಾಗೂ ಸಮಂತ ಇಬ್ಬರೂ ಕೂಡ 2017 ರಲ್ಲಿ ಮದುವೆಯಾಗಿದ್ದರು ಆದರೆ ನಾಲ್ಕು ವರ್ಷಗಳ ತುಂಬು ಸಂಸಾರದ ನಂತರ ಇಬ್ಬರೂ ಕೂಡ ಹಲವಾರು ಕಾರಣಗಳಿಗಾಗಿ ವಿವಾಹ ವಿಚ್ಛೇದನ ವನ್ನು ಪಡೆದುಕೊಂಡಿದ್ದರು. ಇದಾದ ನಂತರ ಇಬ್ಬರೂ ಕೂಡ ಸ್ನೇಹಿತರಾಗಿ ಉಳಿದುಕೊಳ್ಳುತ್ತೇವೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇನ್ನು ವಿವಾಹ ವಿಚ್ಛೇದನದ ನಂತರ ಸಮಂತ ರವರು ಚಿತ್ರೀಕರಣದಲ್ಲಿ ಬ್ಯುಸಿ ಆಗುತ್ತಾರೆ. ಇತ್ತೀಚೆಗಷ್ಟೇ ಅವರು ಸ್ಟೆಪ್ ಹಾಕಿದ್ದ ಪುಷ್ಪ ಚಿತ್ರದ ಹೂ ಅಂತೀಯಾ ಮಾವ ಉಹು ಅಂತೀಯ ಸಾಂಗ್ ಕೂಡ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿ ದೊಡ್ಡಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಆದರೆ ಈಗ ಸುದ್ದಿಯಾಗುತ್ತಿರುವುದು ಮಾತ್ರ ಬೇರೆ ವಿಚಾರಕ್ಕೆ. ಹೌದು ಗೆಳೆಯರೇ ಸಮಂತ ಹಾಗೂ ನಾಗಚೈತನ್ಯ ರವರು ವಿವಾಹ ವಿಚ್ಛೇದನದ ನಂತರ ಮೊದಲ ಬಾರಿಗೆ ಒಂದೇ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ.
ನಾಗಚೈತನ್ಯ ರವರು ತಮ್ಮ ಬಂಗಾರ್ ರಾಜು ಚಿತ್ರದ ಚಿತ್ರೀಕರಣಕ್ಕಾಗಿ ರಾಮಯ್ಯ ನಾಯ್ಡು ಸ್ಟುಡಿಯೋ ಗೆ ತೆರಳಿದ್ದರು. ಇನ್ನು ಅವರೊಂದಿಗೆ ಅವರ ತಂದೆ ಆಗಿರುವ ನಾಗಾರ್ಜುನ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇತ್ತ ಸಮಂತ ರವರು ಕೂಡ ತಮ್ಮ ಯಶೋಧ ಚಿತ್ರದ ಚಿತ್ರೀಕರಣಕ್ಕಾಗಿ ರಾಮಯ್ಯ ನಾಯ್ಡು ಸ್ಟುಡಿಯೋ ಗೆ ತೆರಳಿದ್ದರು. ಹಾಗಿದ್ದರೆ ಚಿತ್ರೀಕರಣದ ನಂತರ ಇಬ್ಬರೂ ಕೂಡ ಮಾತನಾಡಿದ್ದಾರೆ ಎಂಬ ಮಾತಿಗೆ ಇಲ್ಲಿ ಇಲ್ಲ ಎಂಬುದಾಗಿ ಉತ್ತರಗಳು ಸಿಗುತ್ತವೆ. ಇಬ್ಬರೂ ಕೂಡ ತಮ್ಮ ಚಿತ್ರೀಕರಣವನ್ನು ಮುಗಿಸಿ ತಮ್ಮ ತಮ್ಮ ಕಾರಿನಲ್ಲಿ ತಮ್ಮ ತಮ್ಮ ಮನೆಗೆ ಹೋಗಿದ್ದಾರೆ. ಕೊನೆಪಕ್ಷ ಇಬ್ಬರು ಸ್ನೇಹಿತರಂತೆ ಮಾತನ್ನಾದರೂ ಆಡಬೇಕಿತ್ತು ಎಂಬುದು ಪ್ರತ್ಯಕ್ಷದರ್ಶಿಗಳ ಅಭಿಪ್ರಾಯವಾಗಿತ್ತು. ಇದರ ಕುರಿತಂತೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.