ಬಿಗ್ ನ್ಯೂಸ್: ನನ್ನ ತಂಡದಲ್ಲಿಯೇ ನನಗೆ ಶತ್ರುಗಳಿದ್ದಾರೆ ಎಂದು ಷಾಕಿಂಗ್ ಹೇಳಿಕೆ ನೀಡಿದ ರಾಹುಲ್, ಯಾರಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಸೆಂಚೂರಿಯನ್ ಟೆಸ್ಟ್ ಪಂದ್ಯದಲ್ಲಿ ಭಾರತ ಐತಿಹಾಸಿಕ ಜಯಗಳಿಸಿದೆ. ಮೊದಲ ಇನ್ನಿಂಗ್ಸ್ ನ ಶತಕವೀರ ಕೆ.ಎಲ್.ರಾಹುಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಈ ಟೆಸ್ಟ್ ಗೆಲುವಿನ ಮೂಲಕ ಭಾರತ ಸರಣಿಯಲ್ಲಿ 1 – 0 ಅಂತರದಲ್ಲಿ ಮುನ್ನಡೆಯನ್ನು ಸಾಧಿಸಿದೆ. ಇನ್ನು ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ರಾಹುಲ್ ನನ್ನ ತಂಡದಲ್ಲೇ ನನಗೆ ಶತ್ರುಗಳಿದ್ದಾರೆ ಎಂಬ ಅಚ್ಚರಿ ಹೇಳಿಕೆ ನೀಡಿದರು.
ಹೌದು ರಾಹುಲ್ ಪ್ರಕಾರ ವಿದೇಶಿ ನೆಲದಲ್ಲಿ ಟೆಸ್ಟ್ ಕ್ರಿಕೇಟ್ ನಲ್ಲಿ ಶತಕಗಳಿಸಬೇಕೆಂದರೇ ಶಿಸ್ತು ಮತ್ತು ಸಂಯಮ ಅತ್ಯಗತ್ಯ. ಕೆಟ್ಟ ಬಾಲುಗಳಿಗಾಗಿ ಕಾಯಬೇಕು, ಒಳ್ಳೆಯ ಬಾಲುಗಳನ್ನು ಗೌರವಿಸಬೇಕು. ಹಾಗೆ ಆಡಿದರೇ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು. ಇನ್ನು ತಂಡದ ವೇಗದ ಬೌಲರ್ ಗಳನ್ನು ಕೊಂಡಾಡಿದ ರಾಹುಲ್, ಅವರೆಲ್ಲರೂ ನನಗೆ ನೆಟ್ಸ್ ನಲ್ಲಿ ಬೌಲಿಂಗ್ ಮಾಡುವಾಗ ಅವರೆಲ್ಲರೂ ಶತ್ರುಗಳ ರೀತಿ ಬಾಲ್ ಮಾಡುತ್ತಾರೆ.
ಸ್ವಲ್ಪವೂ ಕರುಣೆ ತೋರುವುದಿಲ್ಲ. ಅವರ ಬಾಲ್ ಗಳನ್ನ ನೆಟ್ಸ್ ನಲ್ಲಿ ಆಡಿ ನನಗೆ ಆತ್ಮವಿಶ್ವಾಸ ಹೆಚ್ಚಿದೆ. ಇಂತಹ ಶ್ರೇಷ್ಠ ಬೌಲಿಂಗ್ ಲೈನ್ ಅಪ್ ನಮ್ಮ ತಂಡದಲ್ಲಿರುವುದರಿಂದ ನಾವು ವಿದೇಶಿ ನೆಲಗಳಲ್ಲಿ ಟೆಸ್ಟ್ ಗೆಲ್ಲಲು ಸಾಧ್ಯವಾಗಿದೆ ಎಂದು ಹೇಳಿದರು. ಕೋಚ ರಾಹುಲ್ ದ್ರಾವಿಡ್ ಹಾಗೂ ತಂಡದ ಇತರೆ ಕೋಚ್ ಸಹಾಯಕ ಸಿಬ್ಬಂದಿಗಳು ಸಹ ನನ್ನ ಈ ಯಶಸ್ಸಿಗೆ ಕಾರಣ. ಎಲ್ಲರ ನೆರವಿನಿಂದಲೇ ನಾನು ಉತ್ತಮ ಕ್ರಿಕೇಟ್ ಆಡಲು ಸಾಧ್ಯವಾಗಿದೆ ಎಂದು ಹೇಳಿದರು. ಇನ್ನು ಬಾಕಿ ಇರುವ ಎರಡು ಟೆಸ್ಟ್ ಗೆದ್ದು ಐತಿಹಾಸಿಕ ಸರಣಿ ಜಯಿಸುವತ್ತ ಭಾರತ ತಂಡ ತನ್ನ ಚಿತ್ತ ಹರಿಸಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.