ಅಸಲಿಗೆ ದಿಶಾ ಪಟಾನಿ ರವರಿಗೆ ನಟಿಯಾಗಬೇಕು ಎಂಬ ಆಸೆಯೇ ಇರಲಿಲ್ಲವಂತೆ, ಮತ್ತೇನು ಆಗಬೇಕು ಎಂದು ಕೊಂಡಿದ್ದರಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಜೀವನದಲ್ಲಿ ಎಂದು ಕೂಡ ಕೆಲವೊಮ್ಮೆ ನಾವು ಅಂದುಕೊಂಡ ಕನಸನ್ನು ಪೂರೈಸಲು ಅಥವಾ ಆ ತರಹ ಆಗಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವರ ಜೀವನದಲ್ಲಿ ಅವರು ಅಂದುಕೊಂಡ ಕೆಲಸ ಅವರಿಗೆ ಸಿಗುತ್ತಿದೆ ಅವರ ಕನಸು ಕೂಡ ಪೂರ್ತಿಯಾಗುತ್ತದೆ. ಈಗ ನಾವು ಮಾತನಾಡಲು ಹೊರಟಿರುವುದು ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದುಕೊಂಡು ಟಾಪ್ ನಟಿಯಾಗಿ ಕಾಣಿಸಿಕೊಂಡಿರುವ ನಟಿಯ ಕುರಿತಂತೆ. ಭಾರತದ ನ್ಯಾಷನಲ್ ಕೃಷ್ ಆಗಿ ಮಿಂಚಿದ್ದ ದಿಶಾ ಪಟಾನಿ ಅವರ ಕುರಿತಂತೆ ನಾವು ಮಾತನಾಡಲು ಹೊರಟಿರುವುದು. ಮೊದಲಿಗೆ ತೆಲುಗಿನಲ್ಲಿ ವರುಣ್ ತೇಜ ನಟನೆಯ ಲೋಫರ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ.
ಆದರೆ ಅವರಿಗೆ ನಿಜವಾದ ಯಶಸ್ಸು ತಂದುಕೊಟ್ಟಿದ್ದು ಮಹೇಂದ್ರ ಸಿಂಗ್ ಧೋನಿಯವರ ಬಯೋಪಿಕ್ ಆಗಿರುವ ಎಮ್ ಎಸ್ ಧೋನಿ ದ ಅನ್ಟೋಲ್ಡ್ ಸ್ಟೋರಿ ಚಿತ್ರ. ಈ ಚಿತ್ರದಲ್ಲಿ ದಿಶಾ ಪಟಾನಿ ಅವರ ಪಾತ್ರ ಹಾಗೂ ನಟನೆಯನ್ನು ನೋಡಿ ಅಭಿಮಾನಿಗಳು ಫಿದಾ ಆಗಿ ಅವರನ್ನು ನ್ಯಾಷನಲ್ ಕೃಷ್ ಎನ್ನುವುದಾಗಿ ಪದನಾಮವನ್ನು ನೀಡುತ್ತಾರೆ. ಇದಾದನಂತರ ಬಾಲಿವುಡ್ ಚಿತ್ರರಂಗದಲ್ಲಿ ಒಂದಾದಮೇಲೊಂದರಂತೆ ಚಿತ್ರಗಳಲ್ಲಿ ನಟಿಸಿ ತಮ್ಮ ಪ್ರತಿಭೆಗೆ ತಕ್ಕಂತೆ ಜನಪ್ರಿಯತೆಯನ್ನು ಹಾಗೂ ಬೇಡಿಕೆಯನ್ನು ಬಾಲಿವುಡ್ ಅಂಗಳದಲ್ಲಿ ಪಡೆದುಕೊಳ್ಳುತ್ತಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ನಟನೆ ಮಾಡುವುದು ಅವರ ಕನಸಾಗಿ ಇರಲಿಲ್ಲ ಬದಲಾಗಿ ಅವರ ಕನಸು ಏನಾಗಿತ್ತು ಎಂಬುದನ್ನು ನಾವು ಇಂದಿನ ಲೇಖನದಲ್ಲಿ ಹೇಳಲೀ ಹೊರಟಿದ್ದೇವೆ. ಹೌದು ಗೆಳೆಯರೆ ದಿಶಾ ಪಟಾನಿ ಅವರು 2013 ರಲ್ಲಿ ಲಕ್ನೋ ಕಾಲೇಜಿನಲ್ಲಿ ಓದುತ್ತಿರಬೇಕಾದರೆ ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದು ಮುಂಬೈಗೆ ತೆರಳಿದ್ದರು. ಮಾಡೆಲಿಂಗ್ ನಿಂದಾಗಿ ಅವರ ಖರ್ಚು ಸುಲಭವಾಗಿ ನಡೆಯುತ್ತಿತ್ತು ಹಾಗೂ ಮನೆಯವರ ಮೇಲೆ ಅವಲಂಬಿತವಾಗುವ ಅವಶ್ಯಕತೆ ಇರಲಿಲ್ಲ. ಆದರೆ ಅವರು ಚಿಕ್ಕಂದಿನಿಂದಲೂ ಕೂಡ ಪೈಲೆಟ್ ಆಗುವ ಆಸೆಯನ್ನು ಹೊಂದಿದ್ದರು. ಆದರೆ ಅದೇನೇ ಇರಲಿ ಸ್ನೇಹಿತರೆ ದಿಶಾ ಪಟಾನಿ ಯವರು ಇಂದಿಗೂ ಕೂಡ ತಾವು ಅಂದುಕೊಂಡ ರೀತಿಯಲ್ಲಿ ಜೀವಿಸುವ ಕೆಲಸವನ್ನು ಹೊಂದಿದ್ದಾರೆ. ದಿಶಾ ಪಟಾನಿ ಯವರ ಕುರಿತಂತೆ ನಿಮ್ಮ ಅನಿಸಿಕೆ ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.