ನಿಂತು ಹೋಗಿದ್ದ ನಾಯಕತ್ವದ ವಿವಾದವನ್ನು ಕೆದಕಿದ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ, ನೀಡಿದ ಷಾಕಿಂಗ್ ಹೇಳಿಕೆ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕಳೆದೊಂದು ತಿಂಗಳು ಭಾರತ ತಂಡದ ಕ್ರಿಕೇಟ್ ಗೊಂದಲದ ಗೂಡಾಗಿತ್ತು. ನಾಯಕತ್ವ ವಿಚಾರದಲ್ಲಿ ಏಕಾಏಕಿ ವಿರಾಟ್ ಕೊಹ್ಲಿಯವರನ್ನ ನಾಯಕತ್ವದಿಂದ ಕೆಳಗಿಳಿಸಿ, ರೋಹಿತ್ ಶರ್ಮಾರವರನ್ನ ನೇಮಿಸಿತ್ತು. ಇದು ಸಹಜವಾಗಿಯೇ ವಿರಾಟ್ ಕೊಹ್ಲಿಯವರಿಗೆ ಬೇಸರ ತರಿಸಿತ್ತು. ಈ ಕಾರಣಕ್ಕಾಗಿಯೇ ಕೊಹ್ಲಿ ಮುಂಬೈನಲ್ಲಿ ನಡೆದ ಆಟಗಾರರ ಅಭ್ಯಾಸ ಶಿಬಿರಕ್ಕೆ ಭಾಗವಹಿಸಿರಲಿಲ್ಲ.
ಇನ್ನು ಮುಂದುವರೆದೂ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಏಕದಿನ ಸರಣಿಯಿಂದ ದೂರವುಳಿಯುತ್ತಾರೆ ಎಂಬ ವದಂತಿಗಳು ಕೇಳಿಬಂದವು. ಆದರೇ ವಿರಾಟ್ ಕೊನೆಗೆ ಆ ಸುದ್ದಿಯೆಲ್ಲವನ್ನೂ ಅಲ್ಲಗಳೆದರು. ಇದೇ ವೇಳೆ ವಿರಾಟ್ ನಾಯಕತ್ವ ತಪ್ಪಲು ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ಕಾರಣ ಎಂಬ ಮಾತುಗಳು ಕೇಳಿ ಬಂದರೂ, ಕೊನೆಗೆ ನಾಯಕತ್ವ ಬದಲು ಆಯ್ಕೆದಾರರ ನಿರ್ಧಾರ ಎಂದು ಬಯಲಾಯಿತು.
ಇನ್ನು ಈ ವಿವಾದದ ಬಗ್ಗೆ ಇದೇ ಮೊದಲು ಮಾತನಾಡಿದ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ನಾಯಕತ್ವ ಬದಲಿನ ಹಿಂದಿನ ಕತೆಯನ್ನ ವಿವರಿಸಿದ್ದಾರೆ. ಟಿ 20 ವಿಶ್ವಕಪ್ ಆರಂಭವಾಗುವ ಮುನ್ನವೇ, ವಿರಾಟ್ ಕೊಹ್ಲಿ ನಾನು ಇನ್ನು ಮುಂದೆ ಟಿ 20 ತಂಡದ ನಾಯಕತ್ವವನ್ನು ವಹಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದರೇ ಆ ನಿರ್ಧಾರವನ್ನು ಸದ್ಯಕ್ಕೆ ಕೈ ಬಿಡಬೇಕು ಹಾಗೂ ಬಹಿರಂಗವಾಗಿ ಹೇಳಬೇಡಿ.
ಇದು ತಂಡದ ಸಂಯೋಜನೆಗೆ ಹಾಗೂ ಟಿ 20 ವಿಶ್ವಕಪ್ ಮೇಲೆ ಪರಿಣಾಮ ಬೀರುತ್ತದೆ ಎಂದು ಆಯ್ಕೆ ಸಮಿತಿ ಸದಸ್ಯರು, ಬಿಸಿಸಿಐ ಅಧ್ಯಕ್ಷರು ಕಾರ್ಯದರ್ಶಿಗಳು ಪರಿಪರಿಯಾಗಿ ವಿನಂತಿಸಿಕೊಂಡರೂ, ವಿರಾಟ್ ಯಾರ ಮಾತನ್ನು ಕೇಳಲಿಲ್ಲ. ಏಕಾಏಕಿ ಟಿ 20 ತಂಡದ ನಾಯಕತ್ವದಿಂದ ಇಳಿಯುವುದಾಗಿ ಘೋಷಿಸಿದರು. ಇನ್ನು ಟಿ 20 ಹಾಗೂ ಏಕದಿನ ಕ್ರಿಕೇಟ್ ಎರಡು ವೈಟ್ ಬಾಲ್ ನಲ್ಲಿ ಆಡುವ ಕ್ರಿಕೇಟ್. ಅದಕ್ಕೆ ಬೇರೆ ಬೇರೆ ನಾಯಕರಾದರೇ ತಂಡದಲ್ಲಿ ಗೊಂದಲಗಳು ಸೃಷ್ಠಿಯಾಗಬಹುದು. ಹಾಗಾಗಿ ಟಿ 20 ಮತ್ತು ಏಕದಿನ ಕ್ರಿಕೇಟ್ ತಂಡಕ್ಕೆ ಒಬ್ಬನೇ ನಾಯಕ ಆಗುವುದು ಸೂಕ್ತ ಎಂಬ ಮಾತು ಕೇಳಿ ಬಂದ ಕಾರಣ ರೋಹಿತ್ ಶರ್ಮಾರನ್ನ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು ಎಂದು ಹೇಳಿದರು. ಒಟ್ಟಿನಲ್ಲಿ ವಿವಾದಗಳೆಲ್ಲವೂ ಸುಖಾಂತ್ಯವಾಗಿ ಭಾರತ ದಕ್ಷಿಣ ಆಫ್ರಿಕಾದಲ್ಲಿ ಐತಿಹಾಸಿಕ ಸರಣಿ ಗೆಲ್ಲಲಿ ಎಂಬುದೇ ಅಭಿಮಾನಿಗಳ ಹಾರೈಕೆಯಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.