ಪ್ರೀತಿಯಲ್ಲಿ ಬಿದ್ದ ತಕ್ಷಣ ಜಗತ್ತನ್ನೇ ಮರೆಯುವ ಹುಡುಗಿಯರು ಮಾಡುವ ಮಹಾತಪ್ಪು ಏನು ಗೊತ್ತೇ?? ಶೇಕಡಾ 99 ರಷ್ಟು ಮಹಿಳೆಯರು ಮಾಡುವ ತಪ್ಪನ್ನು ನೀವು ಮಾಡಲೇ ಬೇಡಿ.
ನಮಸ್ಕಾರ ಸ್ನೇಹಿತರೇ ಪ್ರೀತಿ ಅನ್ನುವುದು ಒಂದು ಮಧುರವಾದ ಅನುಬಂಧ. ಪ್ರೀತಿ ಅನ್ನುವುದು ಯಾವಾಗ ಯಾರ ಮೇಲೆ ಹೇಗೆ ಆಗುತ್ತೆ ಅನ್ನುವುದನ್ನು ಯಾರಿಗೂ ಹೇಳಲು ಸಾಧ್ಯವೇ ಇಲ್ಲ. ಹಾಗಾಗಿ ಪ್ರೀತಿಸಿದವರಿಗೆ ಮಾತ್ರ ಗೊತ್ತು ಅದರ ಜೇನಿನಂಥಾನುಭವ ಎನ್ನಬಹುದು. ಆದರೆ ಪ್ರೀತಿ ಕುರುಡು ಅನ್ನುವುದು ಕೂಡ ಅಷ್ಟೇ ಸತ್ಯ. ಪ್ರೀತಿಯಲ್ಲಿ ಬಿದ್ದವರಿಗೆ ತಾವು ಮಾಡುತ್ತಿರುವ ತಪ್ಪುಗಳ ಬಗ್ಗೆ ಅರಿವೇ ಇರುವುದಿಲ್ಲ. ಅದರಲ್ಲೂ ಮಹಿಳೆಯರ ವಿಷಯಕ್ಕೆ ಬಂದರೆ ಕೆಲವೊಮ್ಮೆ ಅನಗತ್ಯವಾಗಿಯೂ ಕೂಡ ಹೊಂದಾಣಿಕೆ ಮಾಡಿಕೊಳ್ಳುತ್ತ, ರಾಜಿಯಾಗುತ್ತಾ ಪ್ರೀತಿಯಲ್ಲಿ ಸಮಸ್ಯೆಯನ್ನು ಎದುರಿಸುತ್ತಾರೆ.
ಮಹಿಳೆಯರು ಇಂಥ ಕೆಲವು ವಿಷಯಗಳಲ್ಲಿ ಎಚ್ಚರವಾಗಿಲ್ಲದಿದ್ದರೆ ಪ್ರೀತಿ ಸಂಬಂಧದಲ್ಲಿ ಅವರಿಗುಳಿಯುವುದು ಕಹಿ ಮಾತ್ರ. ಮೊದಲನೆಯದಾಗಿ ಸ್ವಬದಲಾವಣೆ: ತನ್ನ ಸಂಗಾತಿಗಾಗಿ ಮಹಿಳೆಯರು ತಮ್ಮ ಸ್ವಭಾವದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದುಕೊಳ್ಳುತ್ತಾರೆ. ಸಂಗಾತಿಗೆ ಇಷ್ಟವಾಗುವುದಿಲ್ಲ ಎನ್ನುವ ಕಾರಣಕ್ಕೆ ತಮಗಿಷ್ಟವಿಲ್ಲದ ಕೆಲಸಗಳನ್ನೂ, ಸಂಗಾತಿಗೆ ಇಷ್ಟವಾಗಲಿ ಎನ್ನುವ ಕಾರಣಕ್ಕೆ ತಮಗಿಷ್ಟವಾದದ್ದನ್ನು ತೊರೆಯುವುದನ್ನೂ ಮಾಡುತ್ತಾರೆ. ನೀವು ಒಮ್ಮೆ ಹೀಗೆ ಮಾಡಲು ಆರಂಭಮಾಡಿದರೆ, ಸಂಗಾತಿಯಲ್ಲಿ ನಿಮ್ಮ ಬಗ್ಗೆ ಇನ್ನಷ್ಟು ನಿರೀಕ್ಷೆ ಹೆಚ್ಚಾಗುತ್ತದೆ. ಅದು ಈಡೇರದಿದ್ದರೆ ಕೋಪವೂ ಬರುತ್ತದೆ.
ಎಲ್ಲದಕ್ಕೂ ತಲೆಯಾಡಿಸುವುದು: ಸಂಬಂಧದಲ್ಲಿ ವಯಕ್ತಿಕ ಸ್ಪೇಸ್ ಬೇಕೆ ಬೇಕು. ನಮಗೆ ಅನ್ನಿಸಿದ್ದನ್ನು ಮಾಡಲು ಸ್ವಾತಂತ್ರ್ಯವಿರಬೇಕು. ಆದರೆ ಕೆಲವು ಮಹಿಳೆಯರು ತಮಗೆ ಇಷ್ಟವಿರಲಿ, ಇರದೇ ಇರಲಿ ಸಂಗಾತಿ ಹೇಳಿದ ಎಲ್ಲಾ ಮಾತುಗಳಿಗೂ ತಲೆ ಆಡಿಸುತ್ತಾರೆ. ಪ್ರತಿ ಕೆಲಸಕ್ಕೂ ಸಂಗಾತಿಯ ಅನುಮತಿಯನ್ನು ಕೇಳುತ್ತಿದ್ದರೆ ಆ ಸಂಬಂಧ ಉಸಿರುಗಟ್ಟಿಸುತ್ತದೆ.
ವೃತ್ತಿಯಲ್ಲಿ ರಾಜಿ: ತನ್ನ ಪ್ರೇಯಸಿಗಾಗಿ ಗಂಡಸರು ತಮ್ಮ ವೃತ್ತಿಯಲ್ಲಿ, ಕೆಲಸಕ್ಕೆ ಹೋಗುವ ಸಮಯದಲ್ಲಿ ಯಾವ ವಿಚಾರಗಳಲಿಯೂ ಅಷ್ಟಾಗಿ ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ ತಮ್ಮ ಪ್ರೀತಿಯ ಜೀವನಕ್ಕೊಸ್ಕರ ಮಹಿಳೆಯರು ವೃತ್ತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಹೆಣ್ಣುಮಕ್ಕಳಿಗೆ ಪ್ರೀತಿ ಜೀವನಕ್ಕೆ ಕಾಲಿಟ್ಟರೆ ವೃತ್ತಿ ಜೀವನದಲ್ಲಿ ಇನ್ನಿಲ್ಲದಷ್ಟು ರಾಜಿ ಮಾಡಿಕೊಳ್ಳಬೇಕಾಗುತ್ತದೆ.
ಪ್ರೀತಿಯಲ್ಲಿ ರಾಜಿಯಾಗಲಿ, ಹೊಂದಾಣಿಕೆಯಾಗಲೀ ತಪ್ಪಲ್ಲ, ಆದರೆ ಅದಕ್ಕೂ ಮಿತಿ ಬೇಕು. ಯಾವ ವಿಷಯದಲ್ಲಿ ಎಷ್ತು ರಾಜಿ ಮಾಡಿಕೊಳ್ಳಬೇಕೋ ಅಷ್ಟನ್ನು ಮಾತ್ರ ಮಾಡಿಕೊಳ್ಳಬೇಕೆ ಹೊರತು ಎಲ್ಲಾ ವಿಷಯಗಳಲ್ಲೂ ರಾಜಿ ಮಾಡಿಕೊಳ್ಳುವುದಲ್ಲ. ಇಂಥ ಸೂಕ್ಷ್ಮ ವಿಷಯಗಳನ್ನು ಮಹಿಳೆಯರು ಗಮನದಲ್ಲಿಟ್ಟುಕೊಂಡರೆ ಸಂಬಂಧದಲ್ಲಿ ತೊಂದರೆ ಅನುಭವಿಸುವುದೂ ತಪ್ಪುತ್ತದೆ.
Comments are closed.